ಸಿಲಿಗುರಿ (ಪಶ್ಚಿಮ ಬಂಗಾಳ): ಮೂವರು ಬಾಲಕಿಯರ ಕಳ್ಳಸಾಗಣೆ ಮಾಡುತ್ತಿರುವುದನ್ನು ಟೊಟೊ ಚಾಲಕನೊಬ್ಬ ಮಂಗಳವಾರ ವಿಫಲಗೊಳಿಸಿದ್ದಾನೆ. ಟೊಟೊ ಚಾಲಕನಿಗೆ ಧನ್ಯವಾದ ತಿಳಿಸಿದ ಸಿಲಿಗುರಿ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
ಕಳ್ಳಸಾಗಣೆ ಮಾಡುದ್ದವರ ಪ್ಲಾನ್ಗೆ ಬ್ರೇಕ್ ಹಾಕಿದ ಟೊಟೊ ಚಾಲಕ: ಇಬ್ಬರು ಮಹಿಳೆಯರು, ಅಪ್ರಾಪ್ತರನ್ನು ಬೇರೆ ಜಿಲ್ಲೆಯಿಂದ ಸಿಲಿಗುರಿಗೆ ಕರೆತಂದು ನಂತರ ಕಾಶ್ಮೀರಕ್ಕೆ ಕಳುಹಿಸಲು ಯೋಜಿಸಿದ್ದರು. ಆದರೆ, ಮಕ್ಕಳ ಕಳ್ಳಸಾಗಣೆ ಮಾಡಿದ್ದವರ ಪ್ಲಾನ್ಗೆ ಟೊಟೊ ಚಾಲಕ ಬ್ರೇಕ್ ಹಾಕಿದ್ದಾನೆ. ಇಬ್ಬರು ಮಹಿಳೆಯರನ್ನು ಬುಧವಾರ ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳಾದ ಸೆವಾಂಗ್ ಚೊಂಡೋ ಮತ್ತು ಯಾಸ್ಮಿನ್ ಮಲಿಕ್, ಈ ಇಬ್ಬರೂ ಲಡಾಖ್ ನಿವಾಸಿಗಳಾಗಿದ್ದಾರೆ.
ಕೆಲಸದ ಆಮಿಷ ಒಡ್ಡಿ ಮಕ್ಕಳ ಕಳ್ಳಸಾಗಣೆ: ಕಾಶ್ಮೀರದ ಇಬ್ಬರು ಮಹಿಳೆಯರು, ಮೂವರು ಮಕ್ಕಳನ್ನು ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದ ಡಿಡಿ ಕಾಲೋನಿಯಿಂದ ಸಿಲಿಗುರಿಗೆ ಕೆಲಸದ ಆಮಿಷ ಒಡ್ಡಿದ್ದರು ಎಂಬುದು ತಿಳಿದು ಬಂದಿದೆ. ಘಟನೆಯಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾದವರ ಕೈವಾಡವಿರು ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಹಿಳಾ ಆರೋಪಿಗಳ ವಿರುದ್ಧ ಸಿಲಿಗುರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಅಪಹರಣದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ 'ಲೇಡಿ ಸಿಂಗಂ' ಖ್ಯಾತಿಯ ಎಸ್‌ಐ ಸಾವು; ಕುಟುಂಬಸ್ಥರಿಂದ ಕೊಲೆ ಆರೋಪ
ಈ ಪ್ರಕರಣದ ಬಗ್ಗೆ ಸಿಲಿಗುರಿ ಪೊಲೀಸ್ ಕಮಿಷನರ್ ಹೇಳಿದ್ದೇನು?: "ಮಕ್ಕಳ ಅಪಹರಣದ ಬೆನ್ನಲ್ಲೆ ಮಹಿಳೆಯರನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ಮೂಲವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ" ಎಂದು ಸಿಲಿಗುರಿ ಪೊಲೀಸ್ ಕಮಿಷನರ್ ಅಖಿಲೇಶ್ ಚತುರ್ವೇದಿ ತಿಳಿಸಿದರು.
ಪೊಲೀಸರು ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಇಬ್ಬರು ಮಹಿಳೆಯರು ಬಿಧಾನ್ ಮಾರುಕಟ್ಟೆ ಬಳಿ ಹೋಟೆಲ್ ಹುಡುಕುತ್ತಿದ್ದರು. ಈ ಸಂಬಂಧ ಟೊಟೊ ಚಾಲಕನನ್ನು ಸಂಪರ್ಕಿಸಿದರು. ಆ ವೇಳೆ ಮಕ್ಕಳು ಅಳುತ್ತಿದ್ದರು. ಇದನ್ನು ನೋಡಿದ ಟೊಟೊ ಚಾಲಕ ಹಾಗೂ ಸ್ಥಳೀಯ ಕೆಲವರಿಗೆ ಅನುಮಾನ ಬಂದಿತ್ತು. ನಂತರ ಸ್ಥಳೀಯರ ಸಲಹೆಯಂತೆ ಟೊಟೊ ಚಾಲಕ ಮೂರು ಮಕ್ಕಳೊಂದಿಗೆ ಮಹಿಳೆಯರನ್ನು ನೇರವಾಗಿ ಮಹಾತ್ಮ ಗಾಂಧಿ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಗಾರ್ಡ್ ಕಚೇರಿಗೆ ಕರೆದೊಯ್ದಿದ್ದಾನೆ.
ಇದನ್ನೂ ಓದಿ: ಶಬರಿಮಲೆ ಬೆಟ್ಟಕ್ಕೆ ಅತಿಕ್ರಮ ಪ್ರವೇಶ, ಪೂಜೆ ಸಲ್ಲಿಕೆ; ಇಬ್ಬರ ಬಂಧನ
ಪೊಲೀಸರಿಂದ ಚುರುಕುಗೊಂಡ ತನಿಖೆ: ಬಳಿಕ ಪೊಲೀಸರು ಮಹಿಳೆಯರನ್ನು ವಿಚಾರಣೆ ನಡೆಸಿ, ಪ್ರಕರಣದ ರಹಸ್ಯ ಭೇದಿಸಿದ್ದಾರೆ. ಘಟನೆಯ ಪ್ರಾಥಮಿಕ ತನಿಖೆಯ ನಂತರ, ಮಹಿಳೆಯರು ಮಕ್ಕಳನ್ನು ಕೆಲಸಕ್ಕೆ ಆಮಿಷ ಒಡ್ಡಿ ಇಲ್ಲಿಗೆ ಕರೆ ತಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ವಯಸ್ಸು 5ರಿಂದ 6 ವರ್ಷ ಇದೆ. ಮಕ್ಕಳನ್ನು ಬಂಧಿಯಾಗಿಸಿಕೊಂಡು ಕಾಶ್ಮೀರದಿಂದ ಸಿಲಿಗುರಿಗೆ ಕರೆದುಕೊಂಡು ಬರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ, ಈ ಮಕ್ಕಳನ್ನು ಏಕೆ ಕಳ್ಳಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ರಜೆ ಅರ್ಜಿ ಸಲ್ಲಿಸಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಟಿಪ್ಪರ್.. ಬಾಲಕ ಸ್ಥಳದಲ್ಲೇ ಸಾವು