ETV Bharat / bharat

ತಂಬಾಕು ಉತ್ಪನ್ನ ಜಾಹೀರಾತಿನಿಂದ ಹೊರಬಂದ ಅಕ್ಷಯ್​ಕುಮಾರ್; ಅಭಿಮಾನಿಗಳಲ್ಲಿ ಕ್ಷಮೆ - ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಅಕ್ಷಯ್​ಕುಮಾರ್​

ತಂಬಾಕು ಉತ್ಪನ್ನ ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಟೀಕೆಗೆ ಗುರಿಯಾಗಿರುವ ಫಿಟ್ನೆಸ್​ ಫ್ರೀಕ್​ ನಟ ಅಕ್ಷಯ್​ಕುಮಾರ್​ ಇದೀಗ ಆ ಜಾಹೀರಾತಿನಿಂದ ಹಿಂದೆ ಸರಿಯವುದಾಗಿ ತಿಳಿಸಿದ್ದಲ್ಲದೇ ಕ್ಷಮೆ ಕೋರಿದ್ದಾರೆ.

akshay-kumar
ಅಕ್ಷಯ್​ಕುಮಾರ್
author img

By

Published : Apr 21, 2022, 3:39 PM IST

ನವದೆಹಲಿ: ತಂಬಾಕು ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಾಲಿವುಡ್​ ನಟ ಅಕ್ಷಯ್​ಕುಮಾರ್​ ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ಫಿಟ್ನೆಸ್​ಗೆ ಹೆಸರಾದ ನಟ, ತಂಬಾಕು ಉತ್ಪನ್ನದ ರಾಯಭಾರಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಅಸಮಾಧಾನ ಉಂಟುಮಾಡಿತ್ತು. ಇದೀಗ ಅಕ್ಷಯ್​ ಕ್ಷಮೆ ಕೋರಿದ್ದಲ್ಲದೇ ತಂಬಾಕು ಉತ್ಪನ್ನದ ಜಾಹೀರಾತಿನಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ವಿಮಲ್​ ಎಲೈಚಿ ತಂಬಾಕು ಉತ್ಪನ್ನಕ್ಕೆ ರಾಯಭಾರಿಯಾಗಿ ಇತ್ತೀಚೆಗೆ ಅಕ್ಷಯ್​ಕುಮಾರ್​ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದು ಆರೋಗ್ಯದ ಬಗ್ಗೆ ಭಾರಿ ಕಾಳಜಿ ಇರುವ ಅಕ್ಷಯ್ ಈ ರೀತಿಯ ಜಾಹೀರಾತು ಮಾಡಿರುವುದು ಅವರ ಅಭಿಮಾನಿಗಳಲ್ಲದೇ, ಎಲ್ಲರಲ್ಲೂ ಬೇಸರ ತರಿಸಿದೆ.

ಅಕ್ಷಯ್​ ಟ್ವೀಟ್​​ನಲ್ಲಿ ಏನಿದೆ?: ನನ್ನನ್ನು ಕ್ಷಮಿಸಿ. ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ತಂಬಾಕು ಉತ್ಪನ್ನದ ಕುರಿತಾಗಿ ಕಳೆದ ಕೆಲವು ದಿನಗಳಿಂದ ನೀವು ನೀಡುತ್ತಿರುವ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿವೆ. ನಾನು ತಂಬಾಕನ್ನು ತಿನ್ನಲು ಹೇಳಲಿಲ್ಲ. ಆದರೂ ನಿಮ್ಮ ಸಲಹೆಯನ್ನು ನಾನು ಗೌರವಿಸುವೆ. ಹೀಗಾಗಿ ನಾನು ವಿಮಲ್​ ಎಲೈಚಿ ಪಾನ್ ಮಸಾಲಾ ಜಾಹೀತಾತಿನಿಂದ ಹಿಂದೆ ಸರಿಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಅಕ್ಷಯ್​ಕುಮಾರ್​ ಕ್ಷಯರೋಗದ ಬಗೆಗಿನ ಸರ್ಕಾರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಸಿಗರೇಟ್​ ಸೇದುತ್ತಿದ್ದಾಗ ಅದರಿಂದಾಗುವ ಸಮಸ್ಯೆಗಳ ಕುರಿತು ಅಕ್ಷಯ್​ಕುಮಾರ್​, ಆ ವ್ಯಕ್ತಿಗೆ ಮನವರಿಕೆ ಮಾಡಿಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: ಬಾರಮುಲ್ಲಾ: ಪ್ರಮುಖ ಎಲ್​ಇಟಿ ಉಗ್ರನ ಹೊಡೆದುರುಳಿಸಿದ ಭಾರತೀಯ ಸೇನೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.