ETV Bharat / bharat

ಅತಿ ಕೆಟ್ಟ ಪರಿಸರ ಹೊಂದಿದ ರಾಜ್ಯ ವಿಚಾರ: ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ವಾಗ್ದಾಳಿ

ವಿಶ್ವದ ಅತ್ಯಂತ ಕಲುಷಿತ 30 ನಗರಗಳಲ್ಲಿ 10 ನಗರಗಳು ಉತ್ತರ ಪ್ರದೇಶದ್ದಾಗಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

Akhilesh Yadav blames Yogi Adityanath govt for high level of pollution in UP
ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ವಾಗ್ದಾಳಿ
author img

By

Published : Mar 18, 2021, 1:43 PM IST

ಲಖನೌ (ಉತ್ತರ ಪ್ರದೇಶ): ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಹಿಂದಿನ ಸರ್ಕಾರವು ಪ್ರಾರಂಭಿಸಿದ ಪರಿಸರ ಸಂಬಂಧಿತ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಪರಿಣಾಮ ಇಂದು ರಾಜ್ಯದ ಹಲವಾರು ನಗರಗಳಲ್ಲಿ ಮಾಲಿನ್ಯ ಹೆಚ್ಚಳವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಸ್ವಿಸ್ ತಂತ್ರಜ್ಞಾನ ಕಂಪನಿಯ 2020ರ ವಿಶ್ವ ವಾಯು ಗುಣಮಟ್ಟ ವರದಿ ಉಲ್ಲೇಖಿಸಿದ ಯಾದವ್​, ವಿಶ್ವದ ಅತ್ಯಂತ ಕಲುಷಿತ 30 ನಗರಗಳಲ್ಲಿ 10 ನಗರಗಳು ಉತ್ತರ ಪ್ರದೇಶದ್ದಾಗಿವೆ. 30ರಲ್ಲಿ ರಾಜಧಾನಿ ಲಖನೌ 9ನೇ ಸ್ಥಾನದಲ್ಲಿದೆ. ಸಮಾಜವಾದಿ ಸರ್ಕಾರದ ಸಾರ್ವಜನಿಕ ಸಾರಿಗೆ, ಮೆಟ್ರೋ, ಸೈಕಲ್ ಟ್ರ್ಯಾಕ್, ಗೋಮತಿ ನದಿ, ಪಾರ್ಕ್ ಸಂಬಂಧಿತ ಪರಿಸರ ಕಾರ್ಯಗಳನ್ನು ನಿಲ್ಲಿಸದೇ ಇದ್ದಿದ್ದರೆ ಬಿಜೆಪಿ ಸರ್ಕಾರವು ಈ ದಿನವನ್ನ ನೋಡುತ್ತಿರಲಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

  • दुनिया के 30 सबसे प्रदूषित शहरों में 10 शहर उप्र के आएं हैं व राजधानी लखनऊ दुनिया में 9वें नंबर पर.

    अगर सपा सरकार के पब्लिक ट्रांसपोर्ट मेट्रो, साइकिल ट्रैक, गोमती रिवर फ़्रंट, पार्क व सफ़ारी जैसे पर्यावरणीय काम न रोके होते तो आज की भाजपा सरकार को ये दिन नहीं देखना पड़ता. pic.twitter.com/IIgP0zPCRz

    — Akhilesh Yadav (@yadavakhilesh) March 18, 2021 " class="align-text-top noRightClick twitterSection" data=" ">

ಇದನ್ನೂ ಓದಿ: 'ಅಂದು, ಇಂದು, ಎಂದಿಗೂ ಬೆಳಗಾವಿ ಕರ್ನಾಟಕದ್ದೇ' - ರಾಜ್ಯಸಭೆಯಲ್ಲಿ ಜಿಸಿ ಚಂದ್ರಶೇಖರ್ ​​ಪುನರುಚ್ಚಾರ

ಗಾಜಿಯಾಬಾದ್, ಬುಲಂದ್‌ಶಹರ್, ನೋಯ್ಡಾ, ಗ್ರೇಟರ್ ನೋಯ್ಡಾ, ಕಾನ್ಪುರ, ಲಖನೌ, ಮೀರತ್, ಆಗ್ರಾ ಮತ್ತು ಮುಜಾಫರ್​ನಗರ ಸೇರಿ ಉತ್ತರ ಪ್ರದೇಶದ 10 ನಗರಗಳ ಹೆಸರು 2020ರ ವಿಶ್ವ ವಾಯು ಗುಣಮಟ್ಟ ವರದಿಯ ಪಟ್ಟಿಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.