ನವದೆಹಲಿ: ಉತ್ತರಪ್ರದೇಶದ ಚುನಾವಣಾ ಕಣ ರಂಗೇರುತ್ತಿದೆ. ಮತಗಳನ್ನು ಪಡೆಯಲು ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷವು ಟೀಕಾ ಪ್ರಹಾರಗಳನ್ನು ನಡೆಸುವುದು ಎಂದಿನಂತೆ ಸಾಮಾನ್ಯವಾಗಿದೆ. ಈಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಅಖಿಲೇಶ್ ಯಾದವ್ ಹೊಸ ಆರೋಪ ಮಾಡಿದ್ದಾರೆ.
ಹೌದು, ಮುಜಾಫರ್ನಗರಕ್ಕೆ ಸುದ್ದಿಗೋಷ್ಠಿಯೊಂದಕ್ಕೆ ತೆರಳಬೇಕಾಗಿದ್ದ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯಲ್ಲಿ ತನ್ನ ಹೆಲಿಕಾಪ್ಟರ್ ತಡೆದಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಇದರ ಜೊತೆಗೆ 'ಚುನಾವಣೆಗೆ ಮೊದಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ' ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಈ ಕುರಿತು ಗಮನ ಹರಿಸಬೇಕು. ಯಾರಾದರೂ ಸುದ್ದಿಗೋಷ್ಠಿಗೆ ತೆರಳುವಾಗ ಆತನ್ನು ಎರಡು ಗಂಟೆಗಳ ಕಾಲ ತಡೆದರೆ, ಆತ ಹೇಗೆ ಸಮಯಕ್ಕೆ ಸರಿಯಾಗಿ ಸುದ್ದಿಗೋಷ್ಠಿ ತಲುಪಲು ಸಾಧ್ಯವಾಗುತ್ತದೆ.? ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
ಈಗಿರುವ ಮಾಹಿತಿಯಂತೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಜಫರ್‌ನಗರದಲ್ಲಿ ಅಖಿಲೇಶ್ ಯಾದವ್ ಅವರ ಸುದ್ದಿಗೋಷ್ಠಿಯನ್ನು ನಿಗದಿ ಮಾಡಲಾಗಿತ್ತು. ಆದರೆ ದೆಹಲಿಯಲ್ಲಿದ್ದ ಅವರ ಹೆಲಿಕಾಪ್ಟರ್ಗೆ 2.30ರವರೆಗೆ ಏರ್ ಟ್ರಾಫಿಕ್ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇದರಿಂದ ಎರಡು ಗಂಟೆಗಳ ನಂತರ ಅವರು ಹೊರಡಬೇಕಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆ ಕುರಿತು ಉನ್ನತ ಮಟ್ಟದ ಸಭೆ