ETV Bharat / bharat

ರಾಜ್​ ಠಾಕ್ರೆ- ಓವೈಸಿ ಟಾಕ್​ ಫೈಟ್ ​: ಮುಸ್ಲಿಂ ಸಮುದಾಯ ಗಟ್ಟಿಗೊಳ್ಳಲು ಓವೈಸಿ ಕರೆ

ಔರಂಗಾಬಾದ್​ನಲ್ಲಿ ನಡೆದ ರ್ಯಾಲಿಗೂ ಮುನ್ನ ಅಸಾದುದ್ದೀನ್​ ಓವೈಸಿ ಔರಂಗಜೇಬ್​ ಸಮಾಧಿಗೆ ಭೇಟಿ, ಪ್ರಾರ್ಥನೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಔರಂಗಜೇಬ್​ ಇತಿಹಾಸದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅಂಥವರ ಸಮಾಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಓವೈಸಿ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ..

author img

By

Published : May 13, 2022, 3:37 PM IST

akbaruddin-owaisi
ರಾಜ್​ ಠಾಕ್ರೆ- ಓವೈಸಿ

ಔರಂಗಾಬಾದ್(ಮಹಾರಾಷ್ಟ್ರ) : ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿರುದ್ಧ ಸಮರ ಸಾರಿರುವ ಎಂಎನ್​ಎಸ್​ ಮುಖಂಡ ರಾಜ್​ ಠಾಕ್ರೆ ವಿರುದ್ಧ ಎಐಎಂಐಎಂ ನಾಯಕ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ. ಮನೆಯಿಂದಲೇ(ಶಿವಸೇನೆ) ಹೊರಹಾಕಲ್ಪಟ್ಟ ವ್ಯಕ್ತಿಗೆ ಹೆಚ್ಚು ಮನ್ನಣೆ ಕೊಡಬಾರದು. ಅವರ ಮಾತುಗಳನ್ನು ನಿರ್ಲಕ್ಷಿಸಿ ಎಂದು ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಓವೈಸಿ, ತಾನು ಯಾರಿಗೂ ಹೆದರುವುದಿಲ್ಲ. ನಮ್ಮ ಸಮಾಜ(ಮುಸ್ಲಿಂ) ಯಾರ ಬಲೆಗೂ ಬೀಳಬಾರದು. ಕೆಲವರು ನಮ್ಮ ವಿರುದ್ಧ ಟೀಕೆ ಮಾಡುತ್ತಾರೆ. ಅವರನ್ನು ಟೀಕಿಸಲು ಬಿಡಿ. ಅವರ ಮಾತುಗಳನ್ನು ಕೇಳಿಸಿಕೊಳ್ಳದೇ ನಮ್ಮ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

2005ರಲ್ಲಿ ಶಿವಸೇನೆ ತೊರೆದು ನಂತರ ಎಂಎನ್​ಎಸ್​ ಪಕ್ಷ ಕಟ್ಟಿದ ರಾಜ್ ಠಾಕ್ರೆ, ಇದೇ ಔರಂಗಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿರುದ್ಧ ಟೀಕಿಸಿದ್ದರು. ಅವುಗಳನ್ನು ತೆಗೆದು ಹಾಕಲು ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದರು. ಮಸೀದಿಗಳ ಮೇಲಿನ ಧ್ವನಿವರ್ಧಕಗಳು ಸಾಮಾಜಿಕ ಸಮಸ್ಯೆ ಸೃಷ್ಟಿಸುತ್ತಿವೆ. ಧಾರ್ಮಿಕ ವಿಷಯಕ್ಕಾಗಿ ಅವುಗಳನ್ನು ಕೀಳಲು ನಾನು ಕರೆ ನೀಡಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದರು.

ಔರಂಗಜೇಬ್​ ಸಮಾಧಿಗೆ ಭೇಟಿ, ವಿವಾದ : ಔರಂಗಾಬಾದ್​ನಲ್ಲಿ ನಡೆದ ರ್ಯಾಲಿಗೂ ಮುನ್ನ ಅಸಾದುದ್ದೀನ್​ ಓವೈಸಿ ಔರಂಗಜೇಬ್​ ಸಮಾಧಿಗೆ ಭೇಟಿ, ಪ್ರಾರ್ಥನೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಔರಂಗಜೇಬ್​ ಇತಿಹಾಸದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅಂಥವರ ಸಮಾಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಓವೈಸಿ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ಕಿಡಿಕಾರಿರುವ ಎಂಎನ್​ಎಸ್​ ಮುಖಂಡರೊಬ್ಬರು, ಮೊಘಲ್ ದೊರೆ ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ ಓವೈಸಿ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಎಂಎನ್ಎಸ್ ಈ ವಿಷಯವನ್ನು ಕೈಗೆತ್ತಿಕೊಳ್ಳಲಿ ಎಂದು ಎಚ್ಚರಿಸಿದ್ದಾರೆ.

ಓದಿ: NEET-PG-22 ಪರೀಕ್ಷೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.