ETV Bharat / bharat

ಅಜ್ನಾಲಾ ಹಿಂಸಾತ್ಮಕ ಘರ್ಷಣೆ: ಅಮೃತಪಾಲ್ ಸಿಂಗ್ ಒಂಬತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದು..! - ವಾರಿಸ್ ಪಂಜಾಬ್ ಡೇ

ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಸಹ ನಾಯಕ ಲವ್‌ಪ್ರೀತ್ ಸಿಂಗ್ ತೂಫಾನ್ ಬಂಧನದ ವಿರುದ್ಧ ಖಲಿಸ್ತಾನಿ ಬೆಂಬಲಿಗರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ತೀವ್ರಗಾಮಿಗಳು ಮತ್ತು ಅಮೃತಸರ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಇದರಿಂದ ಅಮೃತಪಾಲ್ ಸಿಂಗ್ 9 ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದುಪಡಿಸಲಾಗಿದೆ.

Ajnala violent clashes
ಅಜ್ನಾಲಾ ಹಿಂಸಾತ್ಮಕ ಘರ್ಷಣೆ
author img

By

Published : Mar 7, 2023, 5:48 PM IST

ಅಮೃತಸರ (ಪಂಜಾಬ್​): ಪಂಜಾಬ್‌ನ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಖಲಿಸ್ತಾನ್ ನಾಯಕ ಮತ್ತು ವಾರಿಸ್ ಪಂಜಾಬ್ ಡೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಒಂಬತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಿದೆ. ಕೆಲವು ದಿನಗಳ ಹಿಂದೆ, ಈ ಗುಂಪಿನ ಸಹ ನಾಯಕ ಲವ್‌ಪ್ರೀತ್ ಸಿಂಗ್ ತೂಫಾನ್ ಬಂಧನದ ವಿರುದ್ಧ ಅಜ್ನಾಲಾದಲ್ಲಿ ಖಲಿಸ್ತಾನಿ ತೀವ್ರಗಾಮಿಗಳು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಇದರಿಂದ ಪಂಜಾಬ್ ಪೊಲೀಸರು, ತೀವ್ರಗಾಮಿ ಸಿಖ್ ನಾಯಕ ಅಮೃತಪಾಲ್ ಸಿಂಗ್ ಅವರ ಒಂಬತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಏನಿದು ಅಜ್ನಾಲಾ ಘರ್ಷಣೆ?: ತಮ್ಮ ಸಹ ನಾಯಕ ಲವ್‌ಪ್ರೀತ್ ಸಿಂಗ್ ತೂಫಾನ್ ಬಂಧನದ ವಿರುದ್ಧ ಖಲಿಸ್ತಾನಿ ಬೆಂಬಲಿಗರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ವಾರಿಸ್ ಪಂಜಾಬ್ ಡಿ ಸದಸ್ಯರು ಮತ್ತು ಅಮೃತಸರ ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಗಳ ನಡೆದಿವೆ. ನಂತರ ಅಮೃತಪಾಲ್ ಸಿಂಗ್ ಅವರ ಸಹಾಯಕರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.

ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದ ಬೆಂಬಲಿಗರು: ವಾರಿಸ್ ಪಂಜಾಬ್ ಡೇ ಬೆಂಬಲಿಗರು ಫೆಬ್ರವರಿ 24ರಂದು ಪಂಜಾಬ್‌ನ ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ್ದರು. ಇತ್ತೀಚೆಗೆ ಅಪಹರಣ ಪ್ರಕರಣದಲ್ಲಿ ಬಂಧಿತನಾದ ತೂಫಾನ್‌ ಅನ್ನು ಬಿಡುಗಡೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದರು. ಪೊಲೀಸರು ಮತ್ತು ತೀವ್ರಗಾಮಿ ಸಿಖ್ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು.

ಅಜ್ನಾಲಾ ಘಟನೆಯ ನಂತರ ನಡೆದ ವಿವಾದವೇನು?: ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷಗಳು, ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಗುರಿಯಾಗಿಸಿದ್ದವು. ಇದಾನಂತರ ಅಜ್ನಾಲಾ ಹಿಂಸಾತ್ಮಕ ಘರ್ಷಣೆಗಳಿಂದ ಅಮೃತಪಾಲ್ ಬೆಳಕಿಗೆ ಬಂದಿದ್ದಾನೆ. ವಾರಿಸ್ ಪಂಜಾಬ್ ಡೇ ಮತ್ತು ಅಮೃತಪಾಲ್ ಪಾಕಿಸ್ತಾನದ ಐಎಸ್‌ಐನೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಅಮೃತಪಾಲ್ ಸಿಂಗ್ ಯಾರು?: ನಿರಂತರವಾಗಿ ಸುದ್ದಿಯಲ್ಲಿರುವ ಅಮೃತಪಾಲ್ ಸಿಂಗ್ ‘ವಾರಿಸ್ ಪಂಜಾಬ್ ಡೇ’ ಸಂಸ್ಥೆಯ ಮುಖ್ಯಸ್ಥರು. ನಟ ದೀಪ್ ಸಿಧು ನಿಧನದ ನಂತರ ದುಬೈನಿಂದ ಮರಳಿದ ಅಮೃತಪಾಲ್ ಸಿಂಗ್ ಅವರನ್ನು ಸಂಸ್ಥೆಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅಮೃತಪಾಲ್ ಸಿಂಗ್ ಅವರು ಅಮೃತಸರದ ಜದುಖೇರಾ ಗ್ರಾಮದಲ್ಲಿ ಜನಿಸಿದ್ದಾರೆ.

ಅಪಾಯಕಾರಿ ಘಟನೆಗಳು ನಡೆಯುವ ಮುನ್ಸೂಚನೆ ನೀಡಿತ್ತು ಈ ವರದಿ: ಪಂಜಾಬ್‌ನಲ್ಲಿ ಖಲಿಸ್ತಾನಿ ತೀವ್ರಗಾಮಿಗಳು ಸ್ಥಳೀಯ ಅಪರಾಧಿಗಳು, ದರೋಡೆಕೋರರೊಂದಿಗೆ ಒಡನಾಟ ಬೆಳೆಸಿದ್ದಾರೆ. ದೆಹಲಿ ಪೊಲೀಸ್‌ನ ವಿಶೇಷ ಘಟಕದ ಪೊಲೀಸ್ ಉಪ ಆಯುಕ್ತರಾಗಿ (ಡಿಸಿಪಿ) ನಿಯೋಜಿತವಾಗಿರುವ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ವಿಚಾರವನ್ನು ತಿಳಿಸಿದ್ದರು. ಇಲ್ಲಿ ಸ್ಥಳೀಯ ಅಪರಾಧಿಗಳು, ದರೋಡೆಕೋರರ ಜೊತೆಗೆ ಖಲಿಸ್ತಾನಿ ತೀವ್ರಗಾಮಿಗಳು ಸಂಪರ್ಕ ಬೆಳೆಸಿದ್ದು, ಪಂಜಾಬ್‌ನಲ್ಲಿ ಅಪಾಯಕಾರಿ ಘಟನೆಗಳು ನಡೆಯುವ ಮುನ್ಸೂಚನೆ ಸಿಕ್ಕಿತ್ತು.

2010ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ರಾಜೀವ್‌ ರಂಜನ್‌ ಅವರು ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೃಹ ಸಚಿವಾಲಯಕ್ಕೆ ಸಲ್ಲಿಸಿದ 'ಖಾಲಿಸ್ತಾನ್ ಉಗ್ರವಾದ- ಸಂವಹನ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್' ವರದಿಯಲ್ಲಿ, ಪಂಜಾಬ್‌ನಲ್ಲಿ ಖಲಿಸ್ತಾನ್ ತೀವ್ರಗಾಮಿಗಳೊಂದಿಗೆ ಸ್ಥಳೀಯ ಅಪರಾಧಿಗಳು, ದರೋಡೆಕೋರರ ಸಹವಾಸ ಬೆಳೆಸಿರುವುದು ಹೊಸ ಮತ್ತು ಅಪಾಯಕಾರಿ ಪ್ರವೃತ್ತಿ ಎಂದು ತಿಳಿಸಲಾಗಿತ್ತು.

ಈ ವೇಳೆ ಪಂಜಾಬ್‌ನ ಅಪರಾಧಿಗಳು, ದರೋಡೆಕೋರರು ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು, ಆಶ್ರಯ ಇತ್ಯಾದಿಗಳನ್ನು ಖಲಿಸ್ತಾನಿಗಳಿಗೆ ನೀಡಿ ಬೆಂಬಲ ಒದಗಿಸುತ್ತಿದ್ದಾರೆ. ಈ ಗುಂಪು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಅತ್ಯಾಧುನಿಕ ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡುತ್ತಿದೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಹಿಟ್​ ಅಂಡ್​ ರನ್​ ಕೇಸ್​: ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಕಾರ್​, ಸ್ಥಳದಲ್ಲೇ ಐವರ ಸಾವು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.