ETV Bharat / bharat

ನೂಪುರ್ ಶರ್ಮಾ​ 'ಶಿರಚ್ಛೇದಕ್ಕೆ ಸುಪಾರಿ' ನೀಡಿದ್ದ ಅಜ್ಮೇರ್​ ದರ್ಗಾದ ಸಲ್ಮಾನ್​ ಚಿಸ್ತಿ ಬಂಧನ - ರಾಜಸ್ಥಾನದ ಅಜ್ಮೇರ್​ ದರ್ಗಾದ ವ್ಯವಸ್ಥಾಪಕ

ನೂಪುರ್​ ಶರ್ಮಾರ ಶಿರಕ್ಕೆ ಸುಪಾರಿ ನೀಡಿದ್ದ ಅಜ್ಮೇರ್​ ದರ್ಗಾದ ವ್ಯವಸ್ಥಾಪಕ ಸಲ್ಮಾನ್​ ಚಿಸ್ತಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ನೂಪುರ್ ಶರ್ಮಾ​ 'ಶಿರಚ್ಛೇದಕ್ಕೆ ಸುಪಾರಿ' ನೀಡಿದ್ದ ಅಜ್ಮೇರ್​ ದರ್ಗಾದ ಸಲ್ಮಾನ್​ ಚಿಸ್ತಿ ಬಂಧನ

author img

By

Published : Jul 6, 2022, 9:03 AM IST

Updated : Jul 6, 2022, 11:42 AM IST

ರಾಜಸ್ಥಾನ: ಪ್ರವಾದಿ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್​ ಶರ್ಮಾರ ಶಿರಚ್ಛೇದ ಮಾಡಿದವರಿಗೆ ತನ್ನ ಮನೆ, ಆಸ್ತಿ ನೀಡುವುದಾಗಿ ಆಫರ್​ ಮಾಡಿ ಪ್ರಚೋದನಾತ್ಮಕ ವಿಡಿಯೋ ಹರಿಬಿಟ್ಟಿದ್ದ ಅಜ್ಮೇರ್​ ದರ್ಗಾದ ವ್ಯವಸ್ಥಾಪಕ ಸಲ್ಮಾನ್​ ಚಿಸ್ತಿಯನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.

ವಿಡಿಯೋದಲ್ಲೇನಿತ್ತು?: ಮತಾಂಧ ಸಲ್ಮಾನ್​ ಚಿಸ್ತಿ ಪ್ರಚೋದನಾತ್ಮಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಆತ, "ನೂಪುರ್​ ಶರ್ಮಾಳನ್ನು ಶೂಟ್​ ಮಾಡಿ ಅಥವಾ ತಲೆ ಕಡಿದು ತನ್ನಿ. ಅವರಿಗೆ ನನ್ನ ಮನೆ, ಆಸ್ತಿಯನ್ನು ನೀಡುತ್ತೇನೆ. ಇದು ಸತ್ಯ. ನಮ್ಮ ಹಿರಿಯರ ಆಣೆ" ಎಂದು ಹೇಳಿದ್ದ. ಈ ವಿಡಿಯೋ ವೈರಲ್​ ಆಗಿತ್ತು. ಬಳಿಕ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಮನೆಯಲ್ಲಿದ್ದ ಸಲ್ಮಾನ್​ ಚಿಸ್ತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಅಜ್ಮೇರ್​ ದರ್ಗಾದ ಸಲ್ಮಾನ್​ ಚಿಸ್ತಿ ಬಂಧನ

ಪ್ರವಾದಿ ವಿರುದ್ಧ ಹೇಳಿಕೆ ನೀಡಿದ ನೂಪುರ್ ಶರ್ಮಾರನ್ನು ಬಿಜೆಪಿ ವಕ್ತಾರೆ ಸ್ಥಾನದಿಂದ ವಜಾ ಮಾಡಲಾಗಿದೆ. ಅಲ್ಲದೇ, ಸುಪ್ರೀಂಕೋರ್ಟ್ ಕೂಡ ಆಕೆಯನ್ನು ತರಾಟೆಗೆ ತೆಗೆದುಕೊಂಡು ಈಕೆಯಿಂದಲೇ ದೇಶಕ್ಕೆ ಬೆಂಕಿ ಬಿದ್ದಿದೆ ಎಂದು ಕೆಂಡಕಾರಿತ್ತು. ಆದ್ರೆ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೆಗೆದುಕೊಂಡ ನಿಲುವಿಗೆ ನಿವೃತ್ತ ನ್ಯಾಯಾಧೀಶರೂ ಸೇರಿದಂತೆ ಹಲವು ಗಣ್ಯರು ತೀವ್ರ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.

ನೂಪುರ್​ ಶರ್ಮಾರನ್ನು ಬೆಂಬಲಿಸಿ ಪೋಸ್ಟ್​ ಹಾಕಿದ್ದ ರಾಜಸ್ಥಾನದ ಟೈಲರ್ ಒಬ್ಬರನ್ನು ಮತಾಂಧರು ಶಿರಚ್ಛೇದಿಸಿದರೆ, ಮಹಾರಾಷ್ಟ್ರದಲ್ಲಿ ಔಷಧಿ ವ್ಯಾಪಾರಿಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆಗಳೂ ನಡೆದಿವೆ.

ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ: ಸಿಎಂ

Last Updated : Jul 6, 2022, 11:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.