ETV Bharat / bharat

ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ - ತೇನಂಪೇಟೆ ಪೊಲೀಸರು

ಐಶ್ವರ್ಯಾ ರಜನಿಕಾಂತ್ ಅವರು ತಮ್ಮ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ತೇನಾಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Aishwarya rajinikanth
ಐಶ್ವರ್ಯಾ ರಜನಿಕಾಂತ್
author img

By

Published : Mar 20, 2023, 12:13 PM IST

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯ ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೆನ್ನೈನ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

"2019 ರಲ್ಲಿ ನನ್ನ ತಂಗಿಯ ಮದುವೆಯ ನಂತರ ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಇರಿಸಿದ್ದೆ, ಲಾಕರ್ ಅನ್ನು 2021ರಲ್ಲಿ ಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಗಸ್ಟ್ 21, 2021 ರಂದು ಸಿಐಟಿ ನಗರದಲ್ಲಿರುವ ಮಾಜಿ ಪತಿ ಧನುಷ್ ಅವರ ಫ್ಲಾಟ್‌ಗೆ ಇತರೆ ಸಾಮಗ್ರಿಗಳೊಂದಿಗೆ ತೆಗೆದುಕೊಂಡು ಹೋಗಲಾಗಿತ್ತು. ಬಳಿಕ, ಸೆಪ್ಟೆಂಬರ್ 2021 ರಲ್ಲಿ ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್​ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 2022ರಲ್ಲಿ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಲಾಕರ್‌ನ ಕೀಗಳು ಮಾತ್ರ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ಉಳಿದಿವೆ. ಫೆಬ್ರವರಿ 10, 2023 ರಂದು ಲಾಕರ್​ ತೆರೆದಾಗ ಆಭರಣಗಳು ಕಳ್ಳತನವಾಗಿರುವುದು ತಿಳಿದು ಬಂದಿದೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಾಲಿವುಡ್‌ಗೆ ನಿರ್ದೇಶಕಿಯಾಗಿ ಐಶ್ವರ್ಯಾ ರಜನಿಕಾಂತ್​​ ಪದಾರ್ಪಣೆ

"ನಾನು ಚಿನ್ನಾಭರಣಗಳು, ವಜ್ರ ಮತ್ತು ನವರತ್ನದ ಆಭರಣಗಳನ್ನು ಲಾಕರ್​ನಲ್ಲಿ ಇಟ್ಟ ವಿಚಾರ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಗೊತ್ತಿತ್ತು. ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರೇ ಕಳ್ಳತನ ಮಾಡಿರಬಹುದು" ಎಂದು ಐಶ್ವರ್ಯಾ ರಜನಿಕಾಂತ್ ದೂರಿನಲ್ಲಿ ಈಶ್ವರಿ, ಲಕ್ಷ್ಮಿ ಮತ್ತು ಅವರ ಚಾಲಕ ವೆಂಕಟ್ ಹೆಸರು ನಮೂದಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಮಸ್ವಾಮಿ ಪೆರಿಯಾರ್​ ಕುರಿತ ಹೇಳಿಕೆಗೆ ಕ್ಷಮೆ ಕೇಳಲ್ಲ: ರಜನೀಕಾಂತ್‌

ದೂರಿನ ಅನ್ವಯ ತೇನಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜೊತೆಗೆ, ಎಫ್‌ಐಆರ್‌ನಲ್ಲಿ ನಮೂದಿಸಿರುವಂತೆ ಕಳ್ಳತನವಾದ ಚಿನ್ನಾಭರಣಗಳ ಅಂದಾಜು ಮೌಲ್ಯ 3.6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣಗಳು, ನವರತ್ನಗಳ ಸೆಟ್‌ಗಳು, ಬಳೆ ಸೇರಿದಂತೆ ಇತರೆ ಆಭರಣಗಳು ಸೇರಿವೆ.

ಇದನ್ನೂ ಓದಿ : IT ಇಲಾಖೆಯಿಂದ ನಟ ರಜಿನಿಕಾಂತ್‌ಗೆ ಸನ್ಮಾನ: ತ್ವರಿತ ತೆರಿಗೆದಾರರ ಮಗಳಾಗಿರುವುದು ಹೆಮ್ಮೆ ಎಂದ ಐಶ್ವರ್ಯ

ಲಾಲ್ ಸಲಾಂ ಶೂಟಿಂಗ್‌: ಐಶ್ವರ್ಯಾ ರಜನಿಕಾಂತ್ ಅವರು ಪ್ರಸ್ತುತ ತಮ್ಮ ಮುಂಬರುವ ಚಿತ್ರ ಲಾಲ್ ಸಲಾಂ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣವನ್ನು ತಮಿಳುನಾಡಿನ ವಿವಿಧ ನಗರಗಳನ್ನು ಮಾಡಲಾಗುತ್ತಿದೆ. ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ಐಶ್ವರ್ಯಾ ನಿರ್ದೇಶನದಲ್ಲಿ ನಿರ್ಮಿಸುತ್ತಿರುವ ಹೊಸ ಚಿತ್ರ ಇದಾಗಿದೆ. ‘ಲಾಲ್​ ಸಲಾಂ’ ಸಿನಿಮಾದಲ್ಲಿ ರಜನಿಕಾಂತ್​ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜೊತೆಗೆ, ವಿಷ್ಣು ವಿಶಾಲ್​ ಮತ್ತು ವಿಕ್ರಾಂತ್​ ಸಂತೋಷ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ ಆಗಮಿಸಿದ 'ತಲೈವಾ': ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.