ನವದೆಹಲಿ: ಕೊರೊನಾ ಮಹಾಮಾರಿಯಿಂದ ತೊಂದರೆಗೊಳಗಾಗಿದ್ದ ಬಹುತೇಕ ವಲಯಗಳು ಚೇತರಿಸಿಕೊಳ್ಳುತ್ತಿದ್ದು, ಶೇ. 100ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಮಾಡಲು ಶುರುವಾಗಿವೆ. ದೇಶಿ ವಿಮಾನಯಾನ ಸಂಸ್ಥೆಗಳು ಇದೀಗ ಶೇ. 100ರಷ್ಟು ಸಾಮರ್ಥ್ಯದೊಂದಿಗೆ ಸೇವೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಅಕ್ಟೋಬರ್ 18ರಿಂದ ದೇಶಿ ವಿಮಾನಯಾನ ಸಂಸ್ಥೆಗಳು ಶೇ. 100ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ವಿಮಾನಯಾನ ಇಲಾಖೆ ಮಾಹಿತಿ ಹೊರಹಾಕಿದೆ. ಕೋವಿಡ್-19 ಬಳಿಕ ಪ್ರಯಾಣಿಕರ ದಟ್ಟಣೆಯ ಹೆಚ್ಚಳದ ನಡುವೆ ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ಹಾರಾಟದ ಕಾರ್ಯಾಚರಣೆಯನ್ನು ಈಗಿನ ಪ್ರಯಾಣಿಕ ಆಸನ ಸಾಮರ್ಥ್ಯಕ್ಕೆ ಏರಿಕೆ ಮಾಡಿದ್ದು, ಇಲ್ಲಿಯವರೆಗೆ ಶೇ. 85ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಸದ್ಯ ದೇಶದಲ್ಲಿ 2,340 ದೇಶಿಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿರಿ: ಭಾರತದಿಂದ ಐವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಮಾತೃಪ್ರೇಮ.. ಯುಎಸ್ ಮಹಿಳೆಗೆ ಸಲಾಂ
ಕೊರೊನಾ ವೈರಸ್ನಿಂದಾಗಿ ಇಷ್ಟು ದಿನ ದೇಶಿ ವಿಮಾನಯಾನ ಸಂಸ್ಥೆಗಳ ಮೇಲೆ ಅನೇಕ ರೀತಿಯ ನಿರ್ಬಂಧ ಹೇರಲಾಗಿತ್ತು. ಆದರೆ, ಇದೀಗ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿರುವ ಕಾರಣ ವಿಮಾನಯಾನ ಇಲಾಖೆ ಈ ನಿರ್ಧಾರ ಕೈಗೊಂಡಿದೆ.