ವಡೋದರಾ(ಗುಜರಾತ್): ನಗರದ ತಾರ್ಸಾಲಿ ಬೈಪಾಸ್ನಲ್ಲಿ ರಾಜ್ಯದ ಮೊದಲ ಏರ್ಕ್ರಾಫ್ಟ್ ರೆಸ್ಟೋರೆಂಟ್ ನಿರ್ಮಿಸಲಾಗಿದ್ದು, ಸೋಮವಾರ (ಅಕ್ಟೋಬರ್ 25) ಸಾರ್ವಜನಿಕರಿಗೆ ಮುಕ್ತವಾಗಿದೆ. ಇದು ವಿಶ್ವದ ಒಂಬತ್ತನೇ ಏರ್ಕ್ರಾಫ್ಟ್ ರೆಸ್ಟೋರೆಂಟ್ ಆಗಿದೆ.
ಭಾರತದಲ್ಲಿ ಹಳೆಯ(ಸಂಚಾರ ನಡೆಸದ) ವಿಮಾನವನ್ನು ಬಳಸಿ ಅಭಿವೃದ್ಧಿಪಡಿಸಿದ ನಾಲ್ಕನೇ ರೆಸ್ಟೋರೆಂಟ್ ಇದಾಗಿದ್ದು, 102 ಗ್ರಾಹಕರು ಕೂರುವ ಸಾಮರ್ಥ್ಯ ಹೊಂದಿದೆ. ಈ ರೆಸ್ಟೋರೆಂಟ್ ನಿರ್ಮಿಸುವ ಸಲುವಾಗಿ ಬೆಂಗಳೂರಿನ ಕಂಪನಿಯೊಂದರಿಂದ 1.40 ಕೋಟಿ ರೂ.ವೆಚ್ಚದಲ್ಲಿ ಏರ್ಬಸ್ 320 ಅನ್ನು ಖರೀದಿಸಲಾಗಿದೆ. ಈ ಗುಜರಿ ವಿಮಾನದ ಪ್ರತಿಯೊಂದು ಭಾಗವನ್ನು ತಂದು ಬಸ್ ಜತೆ ಜೋಡಿಸಿ ಮರು ವಿನ್ಯಾಸಗೊಳಿಸಲಾಗಿದೆ. ಸದ್ಯ ಇದರ ಬೆಲೆ 2 ಕೋಟಿ ರೂಪಾಯಿಯಾಗಿದೆ.
ಇದನ್ನೂ ಓದಿ: ದೆಹಲಿ ಹಿರಿಯ ನಾಗರಿಕರಿಗೆ ಅಯೋಧ್ಯೆಗೆ ಉಚಿತ ಪ್ರವಾಸ: ಕೇಜ್ರಿವಾಲ್ ಘೋಷಣೆ
ಇದರಲ್ಲಿ ಕುಳಿತರೆ ನಿಜವಾಗಿಯೂ ವಿಮಾನದಲ್ಲಿಯೇ ಪ್ರಯಾಣಿಸಿದಂತೆ ಭಾಸವಾಗುತ್ತದೆ. ಅಲ್ಲದೇ, ಇಲ್ಲಿ ವೇಟರ್, ಸರ್ವರ್ಗಳು ಗಗನಸಖಿಯರಂತೆ ದಿರಿಸು ಧರಿಸಿರುತ್ತಾರೆ. ರೆಸ್ಟೋರೆಂಟ್ನಲ್ಲಿ ಪಂಜಾಬಿ, ಚೈನೀಸ್, ಕಾಂಟಿನೆಂಟಲ್, ಇಟಾಲಿಯನ್, ಮೆಕ್ಸಿಕನ್, ಥಾಯ್ ಫುಡ್ ಲಭ್ಯವಿರುತ್ತದೆ ಎಂದು ರೆಸ್ಟೋರೆಂಟ್ ವ್ಯವಸ್ಥಾಪಕ ನಿರ್ದೇಶಕ ಮುಖಿ ಹೇಳಿದರು.