ETV Bharat / bharat

2011ರಿಂದ ನೀವು ಒಮ್ಮೆಯಾದ್ರೂ ಏರ್​ ಇಂಡಿಯಾದಲ್ಲಿ ಓಡಾಡಿದ್ರೆ ಎಚ್ಚೆತ್ತುಕೊಳ್ಳಿ..

author img

By

Published : May 22, 2021, 2:06 AM IST

Updated : May 22, 2021, 6:12 AM IST

ಏರ್ ಇಂಡಿಯಾ ಕಂಪನಿಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸೈಬರ್ ದಾಳಿಗೆ ಒಳಗಾಗಿದ್ದು, ಲಕ್ಷಾಂತರ ಪ್ರಯಾಣಿಕರ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಏರ್​ ಇಂಡಿಯಾ ಮಾಹಿತಿ ನೀಡಿದೆ.

Air India reports massive data breach
2011ರ ಬಳಿಕ ನೀವು ಒಮ್ಮೆಯಾದ್ರೂ ಏರ್​ ಇಂಡಿಯಾದಲ್ಲಿ ಓಡಾಡಿದ್ರೆ ಎಚ್ಚೆತ್ತುಕೊಳ್ಳಿ..

ನವದೆಹಲಿ: ಕೇಂದ್ರ ಸರ್ಕಾರಿ ಒಡೆತನದ ವಿಮಾನಯಾನ ಸಂಸ್ಥೆಯ ಏರ್ ಇಂಡಿಯಾ ಮೇಲೆ ಸೈಬರ್ ದಾಳಿ ನಡೆದಿದ್ದು, ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

2011 ಆಗಸ್ಟ್ 26ರಿಂದ 2021 ಫೆಬ್ರವರಿ 3ರವರೆಗೆ ದಾಖಲಿಸಿಕೊಳ್ಳಲಾಗಿದ್ದ ಪ್ರಯಾಣಿಕರ ಮಾಹಿತಿ ಸೋರಿಕೆಯಾಗಿದೆ. ಈ ಮಾಹಿತಿಯಲ್ಲಿ ಏರ್ ಇಂಡಿಯಾ ಗ್ರಾಹಕರ ಹೆಸರು, ಜನ್ಮದಿನಾಂಕ, ಸಂಪರ್ಕ ವಿಳಾಸ, ಪಾಸ್​ಪೋರ್ಟ್ ಮಾಹಿತಿ, ಟಿಕೆಟ್​​ ಮುಂತಾದ ಮಾಹಿತಿಯನ್ನು ಕದಿಯಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ದಾಳಿಯಿಂದ ಸುಮಾರು ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದತ್ತಾಂಶಗಳು ಸೋರಿಕೆಯಾಗಿದ್ದು, ಜಗತ್ತಿನಾದ್ಯಂತ ಇದ್ದ ಏರ್ ಇಂಡಿಯಾ ಪ್ರಯಾಣಿಕರಿಗೆ ಇದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಏರ್ ಇಂಡಿಯಾ ಕಂಪನಿ ಎಸ್​​​ಐಟಿಎ ಪಿಎಸ್​ಎಸ್​ (SITA PSS) ಎಂಬ ಏರ್​ ಇಂಡಿಯಾದ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸೈಬರ್ ದಾಳಿಗೆ ಒಳಗಾಗಿದೆ.

ಇದನ್ನೂ ಓದಿ: 2021ರ ಅಂತ್ಯದ ವೇಳೆ ಬಹುಪಾಲು ವಯಸ್ಕರಿಗೆ ವ್ಯಾಕ್ಸಿನೇಷನ್: ಕೇಂದ್ರ ಆರೋಗ್ಯ ಸಚಿವ

ಇದರ ಜೊತೆಗೆ ಏರ್​ ಇಂಡಿಯಾ ಕಂಪನಿ ಪ್ರಯಾಣಿಕರ ಕ್ರೆಡಿಟ್ ಕಾರ್ಡ್​ನ ಸಿವಿವಿ ಅಥವಾ ಸಿವಿಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡಿರಲಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

ಪ್ರಯಾಣಿಕರು ಮಾಡಬೇಕಾಗಿರೋದೇನು..?

ನಾವು ಈ ಕುರಿತು ಕ್ರಮ ಕೈಗೊಳ್ಳುತ್ತಿದ್ದು, ಪ್ರಯಾಣಿಕರು ತಮ್ಮ ವೈಯಕ್ತಿಕ ಡಾಟಾದ ಪಾಸ್​​ವರ್ಡ್​ಗಳನ್ನು ಸಾಧ್ಯವಾದಾಗಲೆಲ್ಲಾ ಬದಲಾವಣೆ ಮಾಡುತ್ತಿರಿ ಎಂದು ಮನವಿ ಮಾಡಿಕೊಂಡಿದೆ.

ಪಾಸ್​ವರ್ಡ್​ಗಳನ್ನು ಬದಲಾವಣೆ ಮಾಡುವ ಮೂಲಕ ಕೆಲವೊಂದು ಡೇಟಾಗಳನ್ನು ರಕ್ಷಿಸಿಕೊಳ್ಳಬಹುದಾಗಿದ್ದು, ಪ್ರಯಾಣಿಕರಿಗೆ ಯಾವುದೇ ಅನುಮಾನಾಸ್ಪದ ಸಂದೇಶ ಬಂದರೆ ಅದನ್ನು ನಿರ್ಲಕ್ಷಿಸಬೇಕೆಂದು ಮನವಿ ಮಾಡಿದೆ.

Last Updated : May 22, 2021, 6:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.