ನವದೆಹಲಿ: ಕಳೆದ ಕೆಲ ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದ್ದು, ಭಾರತೀಯರು ಸಂಕಷ್ಟಕ್ಕೊಳಗಾಗಿದ್ದರು. ಭಾರತ ಸರ್ಕಾರ ಭಾರತೀಯರನ್ನು ರಕ್ಷಿಸುವಲ್ಲಿ ಭಾರಿ ಶ್ರಮ ವಹಿಸಿತು. ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಯಿತು. ಹಂತ ಹಂತವಾಗಿ ವಿದ್ಯಾರ್ಥಿಗಳು ಸೇರಿ ಭಾರತೀಯರನ್ನು ದೇಶಕ್ಕೆ ಕರೆತರಲಾಗಿದೆ.
-
#RussiaUkraineConflict | A special flight, carrying 242 Indian citizens who were stranded in #Ukraine, arrives in Delhi from Poland#OperationGanga pic.twitter.com/WD9IEdFHVl
— ANI (@ANI) March 11, 2022 " class="align-text-top noRightClick twitterSection" data="
">#RussiaUkraineConflict | A special flight, carrying 242 Indian citizens who were stranded in #Ukraine, arrives in Delhi from Poland#OperationGanga pic.twitter.com/WD9IEdFHVl
— ANI (@ANI) March 11, 2022#RussiaUkraineConflict | A special flight, carrying 242 Indian citizens who were stranded in #Ukraine, arrives in Delhi from Poland#OperationGanga pic.twitter.com/WD9IEdFHVl
— ANI (@ANI) March 11, 2022
ಈಶಾನ್ಯ ಉಕ್ರೇನಿಯನ್ ನಗರ ಸುಮಿಯಿಂದ ಪೋಲೆಂಡ್‌ಗೆ ಸ್ಥಳಾಂತರಿಸಲಾಗಿದ್ದ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನವು ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು ಗುರುವಾರ ರಾತ್ರಿ 11.30 ರ (ಐಎಸ್‌ಟಿ) ಸುಮಾರಿಗೆ ಪೋಲೆಂಡ್ನ ರ್ಜೆಸ್ಜೋವ್‌ನಿಂದ (Rzeszow) ಹೊರಟು ಶುಕ್ರವಾರ ಬೆಳಗ್ಗೆ 5.45ಕ್ಕೆ ದೆಹಲಿಗೆ ಬಂದು ಇಳಿಯಿತು ಎಂದು ಮಾಹಿತಿ ನೀಡಿದ್ದಾರೆ.
-
Indian Air Force aircraft, carrying 213 Indian students who were stranded in Ukraine, arrives at Hindan airbase in Ghaziabad, UP.#RussiaUkraineConflict pic.twitter.com/dvYvRaIewq
— ANI (@ANI) March 11, 2022 " class="align-text-top noRightClick twitterSection" data="
">Indian Air Force aircraft, carrying 213 Indian students who were stranded in Ukraine, arrives at Hindan airbase in Ghaziabad, UP.#RussiaUkraineConflict pic.twitter.com/dvYvRaIewq
— ANI (@ANI) March 11, 2022Indian Air Force aircraft, carrying 213 Indian students who were stranded in Ukraine, arrives at Hindan airbase in Ghaziabad, UP.#RussiaUkraineConflict pic.twitter.com/dvYvRaIewq
— ANI (@ANI) March 11, 2022
ಸುಮಿಯಿಂದ ಸ್ಥಳಾಂತರಿಸಲ್ಪಟ್ಟ 600 ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ಪೋಲೆಂಡ್‌ಗೆ ಮೂರು ವಿಮಾನಗಳನ್ನು ಕಳುಹಿಸಿದೆ. ಸುಮಿಯಿಂದ 600 ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮಂಗಳವಾರದಿಂದ ಪ್ರಾರಂಭವಾಗಿತ್ತು.
ಇದನ್ನೂ ಓದಿ: ಉಕ್ರೇನ್‌ನಲ್ಲಿ ರಷ್ಯಾ ರಾಸಾಯನಿಕ ಅಸ್ತ್ರಗಳ ಬಳಕೆ ಬಗ್ಗೆ ಎಚ್ಚರಿಸಿದ ಶ್ವೇತಭವನ
ಪಿಟಿಐ ಜೊತೆ ವಿದ್ಯಾರ್ಥಿಗಳು ಹಂಚಿಕೊಂಡ ವಿವರಗಳ ಪ್ರಕಾರ, ವೈದ್ಯಕೀಯ ಶಿಕ್ಷಣದ ಮೊದಲ ವಿಮಾನವು ಮೊದಲ, ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ಎರಡನೇ ವಿಮಾನವು ನಾಲ್ಕು ಮತ್ತು ಐದನೇ ವರ್ಷದ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಮತ್ತು ಮೂರನೆಯದು ಸಾಕುಪ್ರಾಣಿಗಳನ್ನು ಹೊಂದಿರುವವರಿಗೆ, ಐದನೇ ಮತ್ತು ಆರನೇ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಉಳಿದಿರುವ ಜನರಿಗಾಗಿ ಮೀಸಲಿಡಲಾಗಿತ್ತು ಎಂದು ತಿಳಿದು ಬಂದಿದೆ.
242 ಭಾರತೀಯ ನಾಗರಿಕರನ್ನು ಹೊತ್ತ ವಿಶೇಷ ವಿಮಾನ ಪೋಲೆಂಡ್‌ನಿಂದ ದೆಹಲಿಗೆ ಆಗಮಿಸಿದೆ. ಮಧ್ಯಾಹ್ನದ ಹೊತ್ತಿಗೆ 213 ವಿದ್ಯಾರ್ಥಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುನೆಲೆಗೆ ಆಗಮಿಸಿದೆ. ಮಾಹಿತಿ ಪ್ರಕಾರ, ಈವರೆಗೆ ಉಕ್ರೇನ್‌ನಿಂದ 17,000ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ.