ETV Bharat / bharat

ಓವೈಸಿ ನೇತೃತ್ವದ ಎಐಎಂಐಎಂನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ : ಟೆಸ್ಲಾ ಸಿಇಒ ಫೋಟೋ ಬಳಕೆ.. - AIMIM's official Twitter account hack

ಟ್ವಿಟರ್ ಪ್ರೊಫೈಲ್​ನ ಹೆಸರನ್ನು ಎಐಎಂಐಎಂನಿಂದ 'ಎಲಾನ್ ಮಸ್ಕ್' ಎಂದು ಬದಲಾಯಿಸಿರುವ ಹ್ಯಾಕರ್​ಗಳು, ಫ್ರೊಫೈಲ್ ಚಿತ್ರವನ್ನು ಕೂಡಾ ಬದಲಿಸಿದ್ದಾರೆ. ಆ ಜಾಗಕ್ಕೆ ಟೆಸ್ಲಾ ಸಿಇಒ ಅವರ ಫೋಟೋವನ್ನು ಹಾಕಿದ್ದಾರೆ.

aimims-official-twitter-account-hacked
ಅಸಾದುದ್ದೀನ್ ಓವೈಸಿ
author img

By

Published : Jul 19, 2021, 6:21 AM IST

ಹೈದರಾಬಾದ್: ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ನ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ಪ್ರೊಫೈಲ್ ಹೆಸರನ್ನು 'ಎಲಾನ್ ಮಸ್ಕ್' ಎಂದು ಬದಲಾಯಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಖಾತೆಯನ್ನು ಒಂಬತ್ತು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿತ್ತು. ನಂತರ ಮತ್ತೆ ಅದನ್ನು ಮರುಸ್ಥಾಪಿಸಲಾಗಿತ್ತು. ಆದರೆ, ಇಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮತ್ತೆ ಹ್ಯಾಕ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಟ್ವಿಟರ್ ಪ್ರೊಫೈಲ್​ನ ಹೆಸರನ್ನು ಎಐಎಂಐಎಂನಿಂದ 'ಎಲಾನ್ ಮಸ್ಕ್' ಎಂದು ಬದಲಾಯಿಸಿರುವ ಹ್ಯಾಕರ್​ಗಳು, ಫ್ರೊಫೈಲ್ ಚಿತ್ರವನ್ನು ಕೂಡಾ ಬದಲಿಸಿದ್ದಾರೆ. ಆ ಜಾಗಕ್ಕೆ ಟೆಸ್ಲಾ ಸಿಇಒ ಅವರ ಫೋಟೋವನ್ನು ಹಾಕಿದ್ದಾರೆ.

ಈ ಬಗ್ಗೆ ಹೈದರಾಬಾದ್ ಪೊಲೀಸರಿಗೆ ಸೋಮವಾರ ದೂರು ನೀಡಲಾಗುವುದು, ಸದ್ಯಕ್ಕೆ ಖಾತೆಯಲ್ಲಿ ಯಾವುದೇ ಟ್ವೀಟ್‌ಗಳನ್ನು ಮಾಡಲಾಗಿಲ್ಲ ಎಂದು ಹೈದರಾಬಾದ್​ ಪ್ರಧಾನ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಎಐಎಂಐಎಂ ಟ್ವಿಟರ್ ಖಾತೆಯು ಸುಮಾರು 6.78 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ.

ಓದಿ: 6 ವರ್ಷ, 326 ದೇಶದ್ರೋಹ ಪ್ರಕರಣ, 6 ಮಂದಿ ಮಾತ್ರ ಅಪರಾಧಿಗಳು: ಕರ್ನಾಟಕದಲ್ಲೆಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.