ಸಂಭಾಲ್ (ಉತ್ತರ ಪ್ರದೇಶ): ಹಿಂದೂಗಳು ಒಂದೇ ಮದುವೆಯಾಗಿದ್ದೇವೆ ಎಂದು ಹೇಳಿಕೊಂಡರೂ, ಅವರು ಮೂರು ಜನ ಪ್ರೇಯಸಿಯರನ್ನು ಇಟ್ಟುಕೊಂಡಿರುತ್ತಾರೆ ಎಂದು ಉತ್ತರ ಪ್ರದೇಶದ ಎಐಎಂಐಎಂ ಪಕ್ಷದ ಮುಖ್ಯಸ್ಥ ಶೌಕತ್ ಅಲಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಮತ್ತು ಮುಸ್ಲಿಮರ ಮದುವೆ ವಿಚಾರಗಳನ್ನು ಪ್ರಸ್ತಾಪಿಸಿ ವಿವಾದ ಸೃಷ್ಟಿಸಿದ್ದಾರೆ. ನಿಮಗೆ (ಮುಸ್ಲಿಮರು) ತುಂಬಾ ಮಕ್ಕಳಿದ್ದಾರೆ ಹಾಗೂ ಎರಡು ಅಥವಾ ಅದಕ್ಕಿಂತ ಹೆಚ್ಚು ಮದುವೆಯ ಆಗುತ್ತಾರೆ ಎಂದೆಲ್ಲ ಪ್ರಶ್ನಿಸುತ್ತಾರೆ. ಆದರೆ, ನಾವು (ಮುಸ್ಲಿಮರು) ಎರಡು ಬಾರಿ ಮದುವೆಯಾದರೂ ನಾವು ಇಬ್ಬರು ಹೆಂಡತಿಯರಿಗೆ ಸಮಾಜದಲ್ಲಿ ಒಂದೇ ರೀತಿಯಾದ ಗೌರವ ನೀಡುತ್ತೇವೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ನೀವು (ಹಿಂದೂಗಳು) ಒಂದು ಮದುವೆಯಾಗುತ್ತೀರಿ. ಆದರೆ, ಓರ್ವ ಇಲ್ಲವೇ ಮೂವರು ಪ್ರೇಯಸಿಯರನ್ನು ಹೊಂದಿರುತ್ತೀರಿ. ಆದರೆ, ಅದನ್ನು ಯಾರಿಗೂ ಹೇಳುವುದಿಲ್ಲ. ಇಷ್ಟೇ ಅಲ್ಲ, ನೀವು ಆ ಪ್ರೇಯಸಿಯರಿಗೆ ಗೌರವ ಸಹ ನೀಡುವುದಿಲ್ಲ ಎಂದು ಶೌಕತ್ ಅಲಿ ಚರ್ಚೆ ಹುಟ್ಟುಹಾಕಿದ್ದಾರೆ.
ಅಲ್ಲದೇ, ಎರಡೂ ಮದುವೆಗಳಿಂದ ಪಡೆದ ನಮ್ಮ ಮಕ್ಕಳ ಗುರುತನ್ನು ಅಧಿಕೃತವಾಗಿ ಪಡಿತರ ಚೀಟಿಗಳು ಮತ್ತು ಆಧಾರ್ ಕಾರ್ಡ್‌ಗಳಲ್ಲಿ ದಾಖಲಿಸುತ್ತೇವೆ. ಹಾಗೆ ನಿಮ್ಮ ಅಕ್ರಮ ಸಂತತಿಯ ಬಗ್ಗೆ ಸಾರ್ವಜನಿಕರವಾಗಿ ಬಹಿರಂಗ ಪಡಿಸಿ ಎಂದು ಸವಾಲು ಹಾಕಿರುವ ಅವರು, ಆ ರೀತಿ ಪ್ರೇಯಸಿಯರನ್ನು ನಿಂದಿಸುತ್ತೀರಿ ಹಾಗೂ ಥಳಿಸುತ್ತೀರಿ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ಹಾಡಹಗಲೇ ಸಚಿವರ ಸಹೋದರನ ಮನೆಗೆ ನುಗ್ಗಿ ಒಂದು ಕೋಟಿ ರೂಪಾಯಿ ದರೋಡೆ