ನವದೆಹಲಿ: ಮೇ 29 ರಂದು ಕಾಂಗ್ರೆಸ್ ಅಧಿವೇಶನ ನಡೆಸಲಿದ್ದು, ಎಐಸಿಸಿ ಕಾರ್ಯಕಾರಿ ಸಮಿತಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇಂದು ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರು ಕಳಿಸಿದ ಸಾಂಸ್ಥಿಕ ಚುನಾವಣಾ ವೇಳಾಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಓದಿದರು.
ಮಧುಸೂದನ್ ಮಿಸ್ತ್ರಿ ಅಧ್ಯಕ್ಷತೆಯ ಸಿಇಸಿ, ಎಐಸಿಸಿ ಅಧಿವೇಶನ ಮತ್ತು ಪಕ್ಷದ ಅಧ್ಯಕ್ಷರ ಚುನಾವಣೆಯನ್ನು ಮೇ 29 ರಂದು ನಡೆಸಬೇಕೆಂದು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಡಬ್ಲ್ಯೂಸಿಯ ಸದಸ್ಯರು ಸಾಂಸ್ಥಿಕ ಚುನಾವಣೆ ಮತ್ತು ಎಐಸಿಸಿ ಸಮಗ್ರ ಅಧಿವೇಶನದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಸಭೆಯಲ್ಲಿ ರೈತರ ಪ್ರತಿಭಟನೆ, ಸಂಸತ್ ಬಜೆಟ್ ಅಧಿವೇಶನ ಕುರಿತಂತೆ ಚರ್ಚಿಸಲಾಯಿತು.