ETV Bharat / bharat

ಶಶಿಕಲಾ ಆಗಮನದಿಂದ ಹಿಂದಕ್ಕೆ ಸರಿಯಿತಾ ಎಐಎಡಿಎಂಕೆ ಪುರುಷ ಪ್ರಧಾನರ ಆಡಳಿತ!?

ಸೋಮವಾರ ಬೆಂಗಳೂರಿನಿಂದ ತಾಯ್ನಾಡಿನತ್ತ ಪ್ರಯಾಣ ಆರಂಭಿಸಿದ ಶಶಿಕಲಾ ಅವರಿಗೆ ತಮಿಳುನಾಡು ಗಡಿ ಜಿಲ್ಲೆ ಕೃಷ್ಣಗಿರಿ ಪ್ರವೇಶಿಸುತ್ತಿದ್ದಂತೆ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ಸಿದ್ಧವಾಗಿತ್ತು. ಚೆನ್ನೈಗೆ ಬರುವ ಮಾರ್ಗದುದ್ದಕ್ಕೂ ಅವರಿಗೆ ಬೆಂಬಲಿಗರು ಮತ್ತು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿತು..

Sasikala
ಶಶಿಕಲಾ ಚೆನ್ನೈ ತಲುಪುತ್ತಿದ್ದಂತೆ ಸ್ವಾಗತ ಕೋರಿದ ಬೆಂಬಲಿಗರು
author img

By

Published : Feb 10, 2021, 4:35 PM IST

ತಮಿಳುನಾಡು : ಜೈಲಿನಿಂದ ಬಿಡುಗಡೆಯಾಗಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ನಟರಾಜನ್‌ ರಸ್ತೆ ಮಾರ್ಗವಾಗಿ 23 ತಾಸುಗಳ ಪ್ರಯಾಣ ಮಾಡಿ ಚೆನ್ನೈಗೆ ಮಂಗಳವಾರದಂದು ತಲುಪಿದ್ದಾರೆ.

ಇನ್ನು, ಶಶಿಕಲಾ ಚೆನ್ನೈ ತಲುಪುತ್ತಿದ್ದಂತೆ ಎಐಎಡಿಎಂಕೆ ಪಕ್ಷದಲ್ಲಿ ಈವರೆಗೆ ಆಳ್ವಿಕೆ ನಡೆಸುತ್ತಿದ್ದವರು ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಈವರೆಗೆ ಶಶಿಕಲಾ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದವರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶಶಿಕಲಾ ಚೆನ್ನೈ ತಲುಪುತ್ತಿದ್ದಂತೆ ಸ್ವಾಗತ ಕೋರಿದ ಬೆಂಬಲಿಗರು..

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಪ್ತೆ 65ರ ವರ್ಷದ ಶಶಿಕಲಾ ಅವರು ಭ್ರಷ್ಟಾಚಾರ ಆರೋಪದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆ ಪೂರ್ಣಗೊಳಿಸಿ ಇದೀಗ ಬಿಡುಗಡೆಯಾಗಿದ್ದಾರೆ.

ಆದರೆ, ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲ ದಿನಗಳ ಕಾಲ ಬೆಂಗಳೂರಿನ ದೇವನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಅವರು, ಮಂಗಳವಾರ ಚೆನ್ನೈಗೆ ತೆರಳಿದ್ದಾರೆ.

ಸೋಮವಾರ ಬೆಂಗಳೂರಿನಿಂದ ತಾಯ್ನಾಡಿನತ್ತ ಪ್ರಯಾಣ ಆರಂಭಿಸಿದ ಶಶಿಕಲಾ ಅವರಿಗೆ ತಮಿಳುನಾಡು ಗಡಿ ಜಿಲ್ಲೆ ಕೃಷ್ಣಗಿರಿ ಪ್ರವೇಶಿಸುತ್ತಿದ್ದಂತೆ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ಸಿದ್ಧವಾಗಿತ್ತು. ಚೆನ್ನೈಗೆ ಬರುವ ಮಾರ್ಗದುದ್ದಕ್ಕೂ ಅವರಿಗೆ ಬೆಂಬಲಿಗರು ಮತ್ತು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿತು.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಮತ್ತು ಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಪುನಃ ಹಿಡಿತಕ್ಕೆ ಪಡೆಯುವುದು ಶಶಿಕಲಾ ಅವರ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಈ ಮೂಲಕ ಮತ್ತೆ ರಾಜಕೀಯಕ್ಕೆ ಆಗಮಿಸುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಕಣಕ್ಕೂ ಇಳಿಯಲಿದ್ದಾರೆ ಎಂದು ಶಶಿಕಲಾ ಅವರ ಅಣ್ಣನ ಮಗ ಮತ್ತು ಎಎಂಎಎಂಕೆ ಪಕ್ಷದ ನಾಯಕ ಟಿ ಟಿ ವಿ ದಿನಕರನ್‌ ತಿಳಿಸಿದ್ದಾರೆ.

ಶಶಿಕಲಾ ಅವರು ಮನೆ ತಲುಪುವುದಕ್ಕೂ ಮೊದಲು ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಎಂ ಜಿ ರಾಮಚಂದ್ರನ್ ಅವರ ರಾಮಪುರಮ್‌ನ ಮನೆಗೆ ಭೇಟಿ ನೀಡಿ, ಎಂಜಿಆರ್‌ ಭಾವಚಿತ್ರ ಮತ್ತು ಪ್ರತಿಮೆಗೆ ಹೂವಿನ ಹಾರ ಹಾಕಿ, ನಮನ ಸಲ್ಲಿಸಿದರು. ಈ ಬಗ್ಗೆ ಮಾತನಾಡಿದ ದಿನಕರ್‌, "ಅಮ್ಮನ ಕೈಗೆ ಅಧಿಕಾರ ನೀಡಲು ಮತ್ತು ಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಪುನಃ ಸ್ಥಾಪಿಸುವ ಸಲುವಾಗಿಯೇ ನಾನು 2018ರಲ್ಲಿ ಎಎಂಎಂಕೆ ಪಕ್ಷ ಸ್ಥಾಪಿಸಿದ್ದೇನೆ" ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಆಗದು. ಆದರೆ, ಕಾನೂನಿನಲ್ಲಿ ಇದಕ್ಕೆ ಅವಕಾಶಗಳು ಇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.