ETV Bharat / bharat

ಶಿರಡಿಯಲ್ಲಿ ಟ್ರಕ್​- ರಿಕ್ಷಾ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ - ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ

ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಸಾವಿಗೀಡಾದರು.

truck-rickshaw accident
truck-rickshaw accident
author img

By

Published : May 6, 2022, 1:09 PM IST

ಶಿರಡಿ(ಮಹಾರಾಷ್ಟ್ರ): ಟ್ರಕ್​​-ರಿಕ್ಷಾ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಕಾಲೇಜು​ ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ದುರ್ಮರಣಕ್ಕೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಅಹಮದ್​​ನಗರದ ಶಿರಡಿಯಲ್ಲಿ ದುರ್ಘಟನೆ ನಡೆದಿದೆ.

truck-rickshaw accident

ಸಾವೀಗೀಡಾದವರಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು, ಇಬ್ಬರು ಮಹಿಳೆಯರು ಮತ್ತು ಮತ್ತಿಬ್ಬರು ಪುರುಷರು ಸೇರಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೋಪರಗಾಂವ್ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್​​ಪೆಕ್ಟರ್​​ ಭೇಟಿ ನೀಡಿದ್ದು, ಗಾಯಾಳುಗಳನ್ನು ಕೋಪರಗಾಂವ್ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: 'ವಿಜ್ಞಾನ ಸುಳ್ಳು ಹೇಳಲ್ಲ,ಮೋದಿ ಹೇಳ್ತಾರೆ': ಕೋವಿಡ್ ಸಾವಿನ ವಿಚಾರವಾಗಿ ರಾಹುಲ್ ವಾಗ್ದಾಳಿ

ಬೆಳಗ್ಗೆ 8.30ರಿಂದ 9ರ ನಡುವೆ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೋಪರ್‌ಗಾಂವ್‌ನಿಂದ ಬಂದ ಕಂಟೈನರ್ ಪ್ರಯಾಣಿಕರನ್ನು ಸಾಗಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.