ಅಹಮದಾಬಾದ್ (ಗುಜರಾತ್): ಕೋವಿಡ್ ರೂಪಾಂತರಿಗಳು ಒಂದರ ಹಿಂದೊಂದು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅವಶ್ಯಕ.
ಈ ನಿಟ್ಟಿನಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಆರೋಗ್ಯ ಇಲಾಖೆಯ ತಂಡವು ಮಹತ್ವದ ಕೆಲಸಕ್ಕೆ ಮುಂದಾಗಿದೆ. ಮದುವೆ ಮಂಟಪಗಳಿಗೆ ತೆರಳುವ ಇಲ್ಲಿನ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್ ಪಡೆದವರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಇದರ ಜೊತೆಗೆ, ಲಸಿಕೆ ಪಡೆಯದೇ ಇರುವಂತಹವರಿಗೆ ಸ್ಥಳದಲ್ಲಿಯೇ ಲಸಿಕೆ ಹಾಕುವ ಕೆಲಸ ಮಾಡುತ್ತಿದೆ.
ಅರ್ಬನ್ ಹೆಲ್ತ್ಕೇರ್ ಸೆಂಟರ್ ವೈದ್ಯ ಡಾ.ಫಲ್ಗುನ್ ಈ ಕುರಿತು ಮಾತನಾಡಿ, ಎಲ್ಲರೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದ ಕುರಿತು ಪರೀಕ್ಷೆ ಮಾಡುತ್ತಿದ್ದೇವೆ. ನಗರದಲ್ಲಿ 70-80 ಹೆಲ್ತ್ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುವ ಮುದುವೆಗಳ ಬಗ್ಗೆ ವರದಿ ಪಡೆದು ಅಲ್ಲಿಗೆ ತೆರಳಿ ಪರೀಕ್ಷಿಸುತ್ತಿದ್ದೇವೆ ಎಂದರು.
ಈ ತಂಡಗಳು ಗುರುವಾರ ವಿವಿಧ ವಿವಾಹ ಸ್ಥಳಗಳು ಮತ್ತು ಸಮುದಾಯ ಭವನಗಳಿಗೆ ತೆರಳಿ ಪರೀಕ್ಷೆ ಮಾಡುತ್ತಿವೆ. ಆರೋಗ್ಯ ಅಧಿಕಾರಿಗಳ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಿ ಗುರುವಾರ 70 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.