ಅಹಮದಾಬಾದ್ (ಗುಜರಾತ್): ಮಾನವ ಕಳ್ಳಸಾಗಣೆಯ ಜಾಲವೊಂದನ್ನು ಗುಜರಾತ್ ಪೊಲೀಸರು ಪತ್ತೆ ಹೆಚ್ಚಿದ್ದು, ಅಹಮದಾಬಾದ್ನಲ್ಲಿ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಹಾರಾಷ್ಟ್ರ ಮೂಲದ ದಂಪತಿಯನ್ನು ಅಪರಾಧ ವಿಭಾಗದ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ ಮಾನವ ಕಳ್ಳಸಾಗಣೆಯ ದೊಡ್ಡ ದಂಧೆಯೂ ಬಯಲಿಗೆ ಬರುವ ಸಾಧ್ಯತೆ ಇದೆ.
10-15 ದಿನದ ನವಜಾತ ಶಿಶು: ಬಿಪಿನ್ ಅಲಿಯಾಸ್ ಬಂಟಿ ಶಿರ್ಸಾದ್ ಮತ್ತು ಮೋನಿಕಾ ಬಿಪಿನ್ ಶಿರ್ಸಾದ್ ಎಂಬ ದಂಪತಿಯೇ ಬಂಧಿತರೆಂದು ಗುರುತಿಸಲಾಗಿದೆ. ಇಲ್ಲಿನ ಎಸ್ಪಿ ರಿಂಗ್ ರೋಡ್ನ ರಾಣಾಸನ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ದಂಪತಿಯನ್ನು ಬಂಧಿಸಲಾಗಿದೆ. ಇವರಿಂದ 10ರಿಂದ 15 ದಿನದ ನವಜಾತ ಹೆಣ್ಣು ಶಿಶುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2.10 ಲಕ್ಷಕ್ಕೆ ಶಿಶು ಖರೀದಿ: ಈ ನವಜಾತ ಹೆಣ್ಣು ಮಗುವನ್ನು ಹಿಮ್ಮತ್‌ನಗರದಿಂದ 2.10 ಲಕ್ಷ ರೂಪಾಯಿಗೆ ರೇಶಾಂಬಾಯಿ ರಾಥೋಡ್ ಎಂಬುವರ ಮೂಲಕ ಖರೀದಿಸಲಾಗಿದೆ. ಈ ದಂಧೆಯ ಪ್ರಮುಖ ಆರೋಪಿ ಎನ್ನಲಾಗುವ ಉಮಾ ಬೊಮ್ಮಡ ಎಂಬುವವರಿಗೆ ಶಿಶು ಮಾರಾಟ ಮಾಡಲು ಹೊರಟಿದ್ದರು. ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಆರೋಪಿಗಳೇ ಸಬ್ ಏಜೆಂಟ್ಗಳಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
5 ಲಕ್ಷ ಶಿಶು ಮಾರಲು ಯತ್ನ: ಪ್ರಮುಖ ಏಜೆಂಟ್ ಆಗಿರುವ ಉಮಾ ಹೈದರಾಬಾದ್ ಮೂಲದವರಾಗಿದ್ದು, ಈ ಶಿಶುವನ್ನು ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿತ್ತು ಎಂದು ಗೊತ್ತಾಗಿದೆ. ಹೀಗಾಗಿಯೇ ಅಪರಾಧ ವಿಭಾಗದ ತಂಡದ ಅಧಿಕಾರಿಗಳು ವಿವಿಧ ತಂಡಗಳನ್ನು ರಚಿಸಿ ಹೈದರಾಬಾದ್‌ನ ಪ್ರಮುಖ ಏಜೆಂಟ್ ಉಮಾಳನ್ನು ಬಂಧಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಚಾಕೋಲೇಟ್ - ಲಾಲಿಪಾಪ್ ಕೋಡ್ ವರ್ಡ್: ಇದೇ ವೇಳೆ ಮಗುವನ್ನು ಹಿಮ್ಮತ್‌ನಗರದಲ್ಲಿ ಆರೋಪಿಗಳಿಗೆ ಮಾರಾಟ ಮಾಡಿದ ಆರೋಪಿ ರೇಷ್ಮಾ ಭಾಯ್ ರಾಥೋಡ್ ಎಂಬುವವ ಬಂಧಿಸುವ ಪ್ರಯತ್ನ ಸಹ ನಡೆಯುತ್ತಿದೆ. ಬಂಧಿತರ ಆರೋಪಿಗಳ ವಿಚಾರಣೆಯಲ್ಲಿ ಮತ್ತೊಂದು ಪ್ರಮುಖ ಅಂಶ ಬೆಳಕಿಗೆ ಬಂದಿದೆ. ಈ ಖದೀಮರು ಮಕ್ಕಳಿಗೆ ವಿಶೇಷ ಕೋಟ್ ವರ್ಡ್ ಬಳಸುತ್ತಿದ್ದರು ಎಂಬುವುದೂ ತನಿಖೆಯಲ್ಲಿ ಬಯಲಾಗಿದೆ. ಹುಡುಗಿಯರಿಗೆ ಚಾಕೋಲೇಟ್ ಮತ್ತು ಹುಡುಗರಿಗೆ ಲಾಲಿಪಾಪ್ ಎಂಬ ಕೋಡ್ಗಳನ್ನು ಮಾನವ ಕಳ್ಳಸಾಗಣೆಗೆ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಂತಾರಾಜ್ಯಕ್ಕೆ ಹಬ್ಬಿದ ಜಾಲ: ಅದೇ ರೀತಿಯಾಗಿ ಮಾನವ ಕಳ್ಳಸಾಗಣೆಯು ಅಂತಾರಾಜ್ಯಕ್ಕೂ ಹಬ್ಬಿಕೊಂಡಿದೆ. ಗುಜರಾತ್ನಿಂದ ಮಹಾರಾಷ್ಟ್ರಕ್ಕೆ ಹಾಗೂ ಮಹಾರಾಷ್ಟ್ರದಿಂದ ಆಂಧ್ರಪ್ರದೇಶಕ್ಕೆ ಮಕ್ಕಳ ಕಳ್ಳಸಾಗಣೆಯ ಸಂಪೂರ್ಣ ದಂಧೆ ಬಹಳ ದಿನಗಳಿಂದ ಕೋಡ್ ವರ್ಡ್ಗಳನ್ನು ಬಳಸಿ ನಡೆಯುತ್ತಿತ್ತು. ಕಳೆದ ಫೆಬ್ರವರಿಯಲ್ಲಿ ದಾಖಲಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಗೋಮತಿಪುರ ಠಾಣೆ ಪೊಲೀಸರು ಹೈದರಾಬಾದ್‌ನ ಅನುಷಾ ಅಲಿಯಾಸ್ ನಂದಿ ಮುದವತ್ ಎಂಬ ಮಹಿಳೆಯನ್ನು ಬಂಧಿಸಿದ್ದರು. ಈ ಮಹಿಳೆ ಸಹ ಆರೋಪಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂಬುವುದೂ ಗೊತ್ತಾಗಿದೆ.
ಇದನ್ನೂ ಓದಿ: ಪತ್ನಿ- ಮಗಳನ್ನು 21 ತುಂಡುಗಳನ್ನಾಗಿ ಮಾಡಿ ಬಾವಿಗೆಸೆದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಕಳೆದ 1 ವರ್ಷದಲ್ಲಿ ಗುಜರಾತ್‌ನಲ್ಲಿ ನಾಪತ್ತೆಯಾಗಿರುವ ದಂಧೆಯು ಮತ್ತು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದೊಂದಿಗೆ ನಂಟು ಹೊಂದಿತ್ತು. ಈಗ ಬಯಲಾದ ಪ್ರಕರಣದಿಂದಲೂ ಮೂರು ರಾಜ್ಯಗಳ ಸಂಪರ್ಕವು ಮುನ್ನೆಲೆಗೆ ಬಂದಿದೆ. ಆದ್ದರಿಂದ ಅಹಮದಾಬಾದ್ ಅಪರಾಧ ವಿಭಾಗದ ಈಗ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದೆ. ಈ ಅಪರಾಧದಲ್ಲಿ ಇನ್ನೂ ಅನೇಕ ಮಕ್ಕಳ ಕಳ್ಳಸಾಗಣೆ ಪ್ರಕರಣಗಳನ್ನು ಭೇದಿಸುವ ಎಲ್ಲ ಸಾಧ್ಯತೆಗಳಿವೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ