ETV Bharat / bharat

ತೌಕ್ತೆಗೆ ನಲುಗಿದ ಗುಜರಾತ್ ರೈತರು: ಭಾರಿ ನಷ್ಟ ಅನುಭವಿಸಿದ ಕೃಷಿ ವಲಯ​ - ಪ್ರಧಾನಿ ನರೇಂದ್ರ ಮೋದಿ

ಗುಜರಾತ್ ಕರಾವಳಿ ಪ್ರದೇಶದಲ್ಲಿ ತೌಕ್ತೆ ಚಂಡಮಾರುತ ಇನ್ನಿಲ್ಲದ ಹಾನಿ ಮಾಡಿದೆ. ರೈತರಿಗೆ ಚಂಡಮಾರುತ ಶಾಪವಾಗಿ ಪರಿಣಮಿಸಿದ್ದು, ಸಾವಿರಾರು ಕೋಟಿ ನಷ್ಟಕ್ಕೂ ಕಾರಣವಾಗಿದೆ.

ತೌಕ್ತೆಗೆ ನಲುಗಿದ ಗುಜರಾತ್ ರೈತರು
ತೌಕ್ತೆಗೆ ನಲುಗಿದ ಗುಜರಾತ್ ರೈತರು
author img

By

Published : May 22, 2021, 6:50 PM IST

ಗಾಂಧಿನಗರ (ಗುಜರಾತ್​): ಕಳೆದೆರಡು ದಿನದಿಂದ ಗುಜರಾತ್​ ಕರಾವಳಿಯಲ್ಲಿ ಅಬ್ಬರಿಸಿದ್ದ ತೌಕ್ತೆ ಚಂಡಮಾರುತ ಸದ್ಯ ತಣ್ಣಗಾಗಿದೆ. ಆದರೆ, ತೌಕ್ತೆಯಿಂದ ಭಾರಿ ಹಾನಿ ಸಂಭವಿಸಿದೆ. ಹೀಗಾಗಿ ವೈಮಾನಿಕೆ ಸಮೀಕ್ಷೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ 1 ಸಾವಿರ ಕೋಟಿ ಪರಿಹಾರ ಘೋಷಿಸಿದ್ದಾರೆ.

ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಚಂಡಮಾರುತಕ್ಕೆ 79 ಜನರು ಪ್ರಾಣ ಕಳೆದುಕೊಂಡಿದ್ದಾರೆ. 5,400 ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಡಿದೆ. ಕೃಷಿ ಕ್ಷೇತ್ರವು ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ.

ಕೃಷಿ ಇಲಾಖೆಯ ಪ್ರಕಾರ, ಮೊರ್ಬಿ ಜಿಲ್ಲೆಯಲ್ಲಿ 10,792 ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬೆಳೆ ಬೆಳೆಯಲಾಗುತ್ತಿತ್ತು, ಅದರಲ್ಲಿ 1,015 ಹೆಕ್ಟೇರ್ ಉದ್ದಿನ ಬೇಳೆ, 1,067 ಹೆಕ್ಟೇರ್ ನೆಲಗಡಲೆ, ಎಳ್ಳು ಮತ್ತು ತರಕಾರಿಗಳನ್ನು 2,479 ಹೆಕ್ಟೇರ್​​​​ನಲ್ಲಿ ಬಿತ್ತನೆ ಮಾಡಲಾಗಿತ್ತು.

ಬಿತ್ತನೆಯಾಗಿದ್ದ ಬೇಳೆ ಮೊಳಕೆ

ವಡೋದರಾದ ಸಾವ್ಲಿ ತಾಲೂಕಿನ ಕಮಲ್‌ಪುರ ಗ್ರಾಮದಲ್ಲಿ ಬೆಳೆಸಿದ ಭಜ್ರಾ, ಎಳ್ಳು, ಬೇಳೆ ಬೆಳೆಗಳು ಭಾರಿ ನಷ್ಟವನ್ನು ಅನುಭವಿಸಿವೆ. ಅನೇಕ ಹೊಲಗಳಲ್ಲಿ, ಭಾರಿ ಮಳೆಯಿಂದಾಗಿ ಬಿತ್ತನೆ ಮಾಡಿದ ಬೇಳೆ ಈಗಾಗಲೇ ಮೊಳಕೆಯೊಡೆದಿದೆ. ರಾಂಪುರ, ಧಂತೇಜ್, ವಾಡಿಯಾ ಮತ್ತು ವಾಸನ್‌ಪುರದಂತಹ ಇತರ ಗ್ರಾಮಗಳಲ್ಲೂ ಇದೇ ಸ್ಥಿತಿ ಇದೆ. ತಮಗಾಗಿ ಪರಿಹಾರ ಪ್ಯಾಕೇಜ್ ಘೋಷಿಸಲಿದೆ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.

3,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನಾಶ

ಸೂರತ್ ಜಿಲ್ಲೆಯ ಮಾಹುವಾ ತಾಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಬೆಳೆಗಳು ವ್ಯಾಪಕ ನಷ್ಟ ಅನುಭವಿಸಿವೆ. ಚಂಡಮಾರುತದ ಕಾರಣದಿಂದಾಗಿ ತಾಲೂಕು , ಗ್ರಾಮಗಳಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ. ಮಾಹಿತಿಯ ಪ್ರಕಾರ, 4,000 ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಸಲಾಗಿದ್ದು, ಇದರಲ್ಲಿ 3,000 ಹೆಕ್ಟೇರ್ ಪ್ರದೇಶದಲ್ಲಿನ ತರಕಾರಿಗಳು, ಹಣ್ಣುಗಳು ಮತ್ತು ಸಿರಿಧಾನ್ಯಗಳು ನಾಶವಾಗಿವೆ.

ನೆಲ್ಲಕ್ಕುರುಳಿದ ಕೇಸರ್ ಮಾವಿನ ಹಣ್ಣು

ಗಿರ್ ಪ್ರದೇಶವು ಮಾವಿನಹಣ್ಣಿನ ತೋಟಗಳಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಪ್ರಸಿದ್ಧ ಕೇಸರ್ ಜಾತಿಯ ಮಾವು ಬೆಳೆಯಲಾಗುತ್ತದೆ. ಚಂಡಮಾರುತವು ಈ ಪ್ರದೇಶದಲ್ಲಿ ಮಾವಿನಕಾಯಿಯ ಬೆಳೆಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ.

100 ಕೋಟಿ ರೂ. ನಷ್ಟ

ಅಂದಾಜಿನ ಪ್ರಕಾರ ಗಿರ್ ಪ್ರದೇಶದ ಮಾವಿನ ತೋಟಗಳ ಮಾಲೀಕರು 100 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಮಾವಿನಹಣ್ಣನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶವು ತನ್ನ ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ನಷ್ಟವನ್ನು ಕಂಡಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.