ETV Bharat / bharat

ಪ್ರೇಮಸೌಧ ತಾಜ್​ಮಹಲ್​ಗೆ ತೆರಿಗೆ ಪಾವತಿಸಲು ನೋಟಿಸ್​.. ಶತಮಾನದಲ್ಲೇ ಇದೇ ಮೊದಲ ಸಲ ಜಾರಿ - ಆಗ್ರಾ ಮುನ್ಸಿಪಲ್​ ಕಾರ್ಪೊರೇಷನ್​ ತೆರಿಗೆ

ಪ್ರೀತಿಯ ಪ್ರತೀಕವಾದ ತಾಜ್​ಮಹಲ್​ಗೆ ವಿಶ್ವಾದ್ಯಂತ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದಕ್ಕೆ ಆಗ್ರಾ ಮುನ್ಸಿಪಲ್​ ಕಾರ್ಪೊರೇಷನ್​ ತೆರಿಗೆ ಹಣ ಕಟ್ಟಬೇಕು ಎಂದು ಸೂಚಿಸಿ ನೋಟಿಸ್​ ನೀಡಿ ಆಶ್ಚರ್ಯ ಉಂಟು ಮಾಡಿದೆ. ಇದೇ ಮೊದಲ ಸಲ ತೆರಿಗೆ ಪಾವತಿಸುವಂತೆ ತಾಜ್​ಗೆ ನೋಟಿಸ್ ನೀಡಲಾಗಿದೆ.

taj-mahal-house-tax
ಪ್ರೇಮಸೌಧ ತಾಜ್​ಮಹಲ್​ಗೆ ತೆರಿಗೆ ಪಾವತಿಸಲು ನೋಟಿಸ್
author img

By

Published : Dec 20, 2022, 9:22 AM IST

ಆಗ್ರಾ (ಉತ್ತರಪ್ರದೇಶ): ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪ್ರೇಮಸೌಧ ತಾಜ್​ಮಹಲ್​ಗೆ ಇದೇ ಮೊದಲ ಬಾರಿಗೆ ತೆರಿಗೆ ವಿಧಿಸಲಾಗಿದೆ. 15 ದಿನಗಳ ಒಳಗಾಗಿ ಮನೆ ತೆರಿಗೆಯನ್ನು (ಹೌಸ್​ ಟ್ಯಾಕ್ಸ್​) ಪಾವತಿಸುವಂತೆ ಸೂಚಿಸಿ ಆಗ್ರಾ ಮುನ್ಸಿಪಲ್​ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಿದೆ.

ಮಾರ್ಚ್ 31 ರಿಂದ ಅನ್ವಯಿಸುವಂತೆ ಬಾಕಿ ಉಳಿದಿರುವ 88,784 ರೂಪಾಯಿಗೆ 47,943 ಬಡ್ಡಿ ಸೇರಿಸಿ 1.37 ಲಕ್ಷ ರೂಪಾಯಿಯನ್ನು ಪಾವತಿಸುವಂತೆ ಸೂಚಿಸಿ ನವೆಂಬರ್ 25 ರಂದು ಎಎಸ್​ಐಗೆ ನೋಟಿಸ್​ ಬಂದಿದೆ. ಇದು ಅಧಿಕಾರಿಗಳಿಗೆ ಆಶ್ವರ್ಯ ಉಂಟು ಮಾಡಿದೆ. ತಾಜ್ ಜೊತೆಗೆ, ಯಮುನಾ ನದಿಗೆ ಅಡ್ಡಲಾಗಿರುವ ಸ್ಮಾರಕವಾದ ಎತ್ಮಾದ್-ಉದ್-ದೌಲಾ ಸ್ಮಾರಕಕ್ಕೂ ಕೂಡ ತೆರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಪ್ರೇಮಸೌಧ ತಾಜ್​ಮಹಲ್​ಗೆ ತೆರಿಗೆ ಪಾವತಿಸಲು ನೋಟಿಸ್
ಪ್ರೇಮಸೌಧ ತಾಜ್​ಮಹಲ್​ಗೆ ತೆರಿಗೆ ಪಾವತಿಸಲು ನೋಟಿಸ್

2022-23ನೇ ಹಣಕಾಸು ವರ್ಷದ ಮನೆ ತೆರಿಗೆಯನ್ನು 11,098 ರೂಪಾಯಿ ಎಂದು ನೋಟಿಸ್​ನಲ್ಲಿ ತೋರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮ್ಯಾಪಿಂಗ್ ಮೂಲಕ ಮನೆ ತೆರಿಗೆಗಾಗಿ ಸಾಯಿ ಕನ್‌ಸ್ಟ್ರಕ್ಷನ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ ಎಂದು ಸಹಾಯಕ ಮುನ್ಸಿಪಲ್ ಕಮಿಷನರ್ ಮತ್ತು ತಾಜ್‌ಗಂಜ್ ವಲಯ ಉಸ್ತುವಾರಿ ಸರಿತಾ ಸಿಂಗ್ ಹೇಳಿದ್ದಾರೆ.

ತಾಜ್ ಮಹಲ್ ಸೇರಿದಂತೆ ಎಲ್ಲಾ ಪುರಾತನ ಸ್ಮಾರಕಗಳನ್ನು ಪುರಾತತ್ವ ಸರ್ವೇಕ್ಷಣಾ ಇಲಾಖೆ ನೋಡಿಕೊಳ್ಳುತ್ತಿದೆ. 1920ರಲ್ಲಿ ತಾಜ್​ ಮಹಲ್ ಅನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಇದು ವಿಶ್ವದ ಏಳು ಅದ್ಭುತಗಳ ಪಟ್ಟಿಯಲ್ಲಿದೆ.

ಓದಿ: ₹15 ಸಾವಿರ ದುಡಿಯುವ ಕಾರ್ಮಿಕನಿಗೆ ₹14 ಕೋಟಿ ತೆರಿಗೆ ಕಟ್ಟಲು ಐಟಿ ನೋಟಿಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.