ETV Bharat / bharat

ಅಕ್ರಮ ಮರಳು ಸಾಗಣೆಗೆ ತಡೆ ಯತ್ನ: ಕಾನ್ಸ್​​ಟೇಬಲ್​ ಮೇಲೆಯೇ ಟ್ರ್ಯಾಕ್ಟರ್​ ಹರಿಸಿ ಕೊಲೆ - ಟ್ರ್ಯಾಕ್ಟರ್​ ಹರಿಸಿ ಕೊಲೆ ಕನ್ಸ್​​ಟೇಬಲ್ ಹತ್ಯೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗಳನ್ನು ತಡೆಯಲು ಮುಂದಾದ ಕಾನ್ಸ್​​ಟೇಬಲ್​ ಮೇಲೆ ಟ್ರ್ಯಾಕ್ಟರ್​ ಹರಿಸಿ ಹತ್ಯೆ ಮಾಡಲಾಗಿದೆ.

Agra cop killed as sand mining mafia's tractor runs him over
ಕನ್ಸ್​​ಟೇಬಲ್​ ಮೇಲೆಯೇ ಟ್ರ್ಯಾಕ್ಟರ್​ ಹರಿಸಿ ಕೊಲೆ
author img

By

Published : Nov 9, 2020, 9:59 AM IST

ಆಗ್ರಾ (ಉತ್ತರ ಪ್ರದೇಶ): ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗಳನ್ನು ಬೆನ್ನಟ್ಟಿ ಹೋದ ಪೊಲೀಸ್ ಕಾನ್ಸ್​ಟೇಬಲ್ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗ್ರಾದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಜಿಲ್ಲಾ ಪೊಲೀಸರು ವಿವಿಧ ತಂಡಗಳನ್ನು ರಚಿಸಿದ್ದರು. ಅದೇ ರೀತಿ ಸೈಯಾನ್ ಪೊಲೀಸ್ ಠಾಣೆ ಪ್ರದೇಶದಲ್ಲಿಯೂ ಒಂದು ತಂಡ ರಚಿಸಲಾಯಿತು. ಇದು ಮುಂಜಾನೆ 3 ಗಂಟೆ ಸುಮಾರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಬಗ್ಗೆ ಸುಳಿವು ಸಿಕ್ಕಿತು" ಎಂದು ಆಗ್ರಾ ನಗರದ ಪೊಲೀಸ್ ವರಿಷ್ಠಾಧಿಕಾರಿ ಬೊಟ್ರೆ ರೋಹನ್ ಪ್ರಮೋದ್ ತಿಳಿಸಿದ್ದಾರೆ.

"ಐದರಿಂದ ಆರು ಟ್ರ್ಯಾಕ್ಟರ್​ಗಳು ಸೈಯಾನ್‌ನಿಂದ ಖೇರಗಢಕ್ಕೆ ತೆರಳುತ್ತಿದ್ದವು. ಕಾನ್‌ಸ್ಟೇಬಲ್ ಸೋನು ಕುಮಾರ್ ಚೌಧರಿ ಅವುಗಳನ್ನು ಹಿಂಬಾಲಿಸಿಕೊಂಡು ಹೋಗಿ ತನ್ನ ವಾಹನದಿಂದ ಇಳಿದು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಂತೆ, ಟ್ರ್ಯಾಕ್ಟರ್ ಚಾಲಕನು ಅವರನ್ನು ಕೊಲ್ಲುವ ಉದ್ದೇಶದಿಂದ ಮೇಲೆ ಟ್ರ್ಯಾಕ್ಟರ್​ ಹರಿಸಿ ಹತ್ಯೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಅಕ್ರಮ ಮರಳು ಸಾಗಾಟ ತಡೆಯಲು ಯತ್ನ

ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಟ್ರ್ಯಾಕ್ಟ್​ಗಳ ಹಿಂದೆ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳು ಓಡುತ್ತಿರುವ ಮತ್ತು ಪೊಲೀಸ್ ವಾಹನ ಹಿಂಬಾಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.