ETV Bharat / bharat

ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರಸ್ ಸಂಪುಟದಲ್ಲಿ ಆಗ್ರಾ ಮೂಲದ ಅಲೋಕ್ ಶರ್ಮಾಗೆ ಸಚಿವ ಸ್ಥಾನ - ಬ್ರಿಟನ್‌ ಸಚಿವರಾದ ಅಲೋಕ್ ಶರ್ಮಾ

ಬ್ರಿಟನ್‌ ಪ್ರಧಾನಿ ಲಿಜ್ ಟ್ರಸ್ ಸಂಪುಟದಲ್ಲಿ ಇಬ್ಬರು ಭಾರತೀಯರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಸುಯೆಲ್ಲಾ ಬ್ರವರ್‌ಮನ್ ಮತ್ತು ಅಲೋಕ್ ಶರ್ಮಾ ಸಚಿವರಾಗಿ ನೇಮಕವಾಗಿದ್ದಾರೆ.

agra-born-alok-sharma-minister-in-cabinet-of-britain-prime-minister-liz-truss
ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರಸ್ ಸಂಪುಟದಲ್ಲಿ ಆಗ್ರಾ ಮೂಲದ ಅಲೋಕ್ ಶರ್ಮಾಗೆ ಸಚಿವ ಸ್ಥಾನ
author img

By

Published : Sep 8, 2022, 8:17 PM IST

ಆಗ್ರಾ (ಉತ್ತರ ಪ್ರದೇಶ): ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರಸ್ ಸಂಪುಟದಲ್ಲಿ ಉತ್ತರ ಪ್ರದೇಶದ ಆಗ್ರಾ ಮೂಲದ ಅಲೋಕ್ ಶರ್ಮಾ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಈ ಹಿಂದೆಯೇ ಸಚಿವರಾದ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಅಲೋಕ್​ ಶರ್ಮಾ ಅವರಿಗೆ ಲಿಜ್ ಟ್ರಸ್ ಅವರ ಸಂಪುಟದಲ್ಲಿ ಹವಾಮಾನ ಇಲಾಖೆಯ ಖಾತೆ ನೀಡಲಾಗಿದೆ.

ಅಲೋಕ್ ಶರ್ಮಾ 1967ರ ಸೆಪ್ಟೆಂಬರ್ 7ರಂದು ಆಗ್ರಾದಲ್ಲೇ ಜನಿಸಿದ್ದರು. ನಂತರ 1972ರಲ್ಲಿ ಅಲೋಕ್ ಶರ್ಮಾ ಪೋಷಕರು ಬ್ರಿಟನ್‌ಗೆ ತೆರಳಿದರು. ಅಲ್ಲಿಂದ ಅವರು ಬ್ರಿಟನ್​ನಲ್ಲೇ ಬೆಳೆದಿದ್ದಾರೆ. 1988ರಲ್ಲಿ ಅಲೋಕ್ ಶರ್ಮಾ ಸಾಲ್ಫೋರ್ಡ್ ವಿಶ್ವವಿದ್ಯಾಲಯದಿಂದ ಅನ್ವಯಿಕ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ಅಲ್ಲದೇ, ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಸಹ ಮಾಡಿದ್ದು, 2010ರಲ್ಲಿ ರೀಡಿಂಗ್ ವೆಸ್ಟ್​ನಿಂದ ಚುನಾವಣೆಯಲ್ಲಿ ಗೆದ್ದು ಸಂಸದರಾದರು.

ಹವಾಮಾನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅಲೋಕ್ ಶರ್ಮಾ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 2016ರಿಂದ 19ರವರೆಗೆ ಪ್ರಧಾನಿಯಾಗಿದ್ದ ಪ್ರಧಾನಿ ತೆರೇಸಾ ಮೇ ಸಂಪುಟದ ಸದಸ್ಯರಾಗಿ ಆಯ್ಕೆ ನೇಮಕವಾಗಿದ್ದರು.

2016ರಲ್ಲಿ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯಲ್ಲಿ ಸಂಸದೀಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಅಲೋಕ್ ಶರ್ಮಾ ಕರ್ತವ್ಯ ನಿರ್ವಹಿಸಿದ್ದರು. 2017ರಲ್ಲಿ ಅಲೋಕ್ ಶರ್ಮಾ ವಸತಿ ಮತ್ತು ಯೋಜನೆ ಸಚಿವರಾಗಿದ್ದರು. ನಂತರ 2018ರಲ್ಲಿ ಅವರನ್ನು ಉದ್ಯೋಗ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಲಿಜ್ ಟ್ರಸ್ ಅವರ ಸಂಪುಟದಲ್ಲಿ ಹವಾಮಾನ ಇಲಾಖೆಯ ಖಾತೆಯನ್ನು ಅಲೋಕ್ ಶರ್ಮಾ ನಿರ್ವಹಿಸಲಿದ್ದಾರೆ. ಅಲೋಕ್ ಶರ್ಮಾ ಅವರ ಚಿಕ್ಕಪ್ಪನ ಕುಟುಂಬ ಪ್ರಸ್ತುತ ಆಗ್ರಾದಲ್ಲೇ ವಾಸಿಸುತ್ತಿದೆ.

ಇದನ್ನೂ ಓದಿ: ಬ್ರಿಟನ್‌ ಹೊಸ ಸಂಪುಟದಲ್ಲಿ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್​ಮನ್​​ ಗೃಹ ಕಾರ್ಯದರ್ಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.