ಹಿಮಾಚಲ ಪ್ರದೇಶ/ರಾಜಸ್ಥಾನ: ಅಲ್ಪಾವಧಿಗೆ ಸೇನಾ ನೇಮಕಾತಿ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರದ ಮಾಜಿ ಸಚಿವ ರಾಮ್ ಲಾಲ್ ಠಾಕೂರ್, ಈ ಯೋಜನೆಯ ಮೂಲಕ ಸೇನೆಗೆ ಸೇರಬೇಕೆಂದುಕೊಂಡ ಯುವಕರೂ ಹಿಂದೇಟು ಹಾಕುತ್ತಾರೆ. ಅಲ್ಲದೇ, 4 ವರ್ಷದ ಬಳಿಕ ನಿರುದ್ಯೋಗಿಗಳಾಗುವ ಅಗ್ನಿವೀರರಿಗೆ ಮದುವೆ ಕೂಡ ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅಗ್ನಿಪಥ್ ಯೋಜನೆಯಡಿ ಸೇನೆ ಸೇರಿ ನಿವೃತ್ತರಾದ ಬಳಿಕ ಉದ್ಯೋಗವಿಲ್ಲ ಎಂಬ ಕಾರಣದಿಂದ ಯುವಕರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟು ಮದುವೆ ಮಾಡಲು ಯಾವ ಪೋಷಕರೂ ಒಪ್ಪುವುದಿಲ್ಲ ಎಂದು ಹೇಳುವ ಮೂಲಕ ಅತಾರ್ಕಿಕ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಕಲಿ, ಸುಳ್ಳು ಭರವಸೆಗಳ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ರಾಜ್ಯಸಭಾ ಸದಸ್ಯ ದೀಪೇಂದ್ರ ಹೂಡಾ ಮಾತನಾಡಿ, ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಯುವಕರು ತಮ್ಮ ಭವಿಷ್ಯದ ಬಗ್ಗೆ ಸದಾ ಚಿಂತಿಸುತ್ತಿರುತ್ತಾರೆ. ಭಾರತವು ಇಸ್ರೇಲ್ ಮಾದರಿಯಲ್ಲಿ ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ, ಎರಡೂ ದೇಶಗಳ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿವೆ ಎಂದಿದ್ದಾರೆ.
ಓದಿ; ವರ ಗಡ್ಡ ಬಿಡುವಂತಿಲ್ಲ, ಅದ್ಧೂರಿ ಮದುವೆ ಮಾಡಂಗಿಲ್ಲ.. ವಿವಾಹಕ್ಕೆ ನಿಯಮ ರೂಪಿಸಿದ ಸಮುದಾಯಗಳು