ETV Bharat / bharat

5,000 ಕಿ.ಮೀ.ಗಳ ಸ್ಟ್ರೈಕ್ ವ್ಯಾಪ್ತಿ ಹೊಂದಿದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಉಡಾವಣೆ ಯಶಸ್ವಿ - ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಉಡಾವಣೆ ಸುದ್ದಿ

ಅಗ್ನಿ-5ರ ಯಶಸ್ವಿ ಪರೀಕ್ಷೆಯು 'ಮೊದಲ ಬಳಕೆಯಿಲ್ಲ' ಎಂಬ ಬದ್ಧತೆ ಆಧಾರವಾಗಿರುವ 'ವಿಶ್ವಾಸಾರ್ಹ ಕನಿಷ್ಠ ತಡೆ' ಹೊಂದಿರುವ ಭಾರತದ ಹೇಳಿಕೆ ನೀತಿಗೆ ಅನುಗುಣವಾಗಿದೆ. ನೆರೆಯ ರಾಷ್ಟ್ರವಾದ ಚೀನಾಕ್ಕೆ ಬಲವಾದ ಸಂದೇಶ ರವಾನಿಸುವ ಪ್ರಯತ್ನವಾಗಿ ಅಗ್ನಿ-5 ಉಡಾವಣೆ ಮಾಡಲಾಗಿದೆ..

Agni-5  Missile successfully launched from APJ Abdul Kalam Island
ಅಗ್ನಿ-5 ಉಡಾವಣೆ ಯಶಸ್ವಿ
author img

By

Published : Oct 27, 2021, 8:55 PM IST

ಭುವನೇಶ್ವರ : ಬುಧವಾರ ಒಡಿಶಾದ ಎಪಿಜೆ ಅಬ್ದುಲ್ ಕಲಾಂ ಐಲ್ಯಾಂಡ್​ನಲ್ಲಿ ಅಗ್ನಿ-5 ಖಂಡಾಂತರ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆ ಆಗಿದೆ. ಇಂದು ಸಂಜೆ 7:50ಕ್ಕೆ ಉಡಾವಣೆ ನಡೆಯಿತು. ಈ ಕ್ಷಿಪಣಿ 5,000 ಕಿ.ಮೀ.ಗಳ ಸ್ಟ್ರೈಕ್ ವ್ಯಾಪ್ತಿ ಹೊಂದಿದೆ.

ಮೂರು ಹಂತದ ಘನ ಇಂಧನ ಎಂಜಿನ್ ಅನ್ನು ಬಳಸುವ ಈ ಕ್ಷಿಪಣಿಯು, 5,000 ಕಿ.ಮೀ. ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ಹೊಡೆಯುವ ಸಾಮರ್ಥ್ಯ ಹೊಂದಿದೆ.

ಅಗ್ನಿ-5ರ ಯಶಸ್ವಿ ಪರೀಕ್ಷೆಯು 'ಮೊದಲ ಬಳಕೆಯಿಲ್ಲ' ಎಂಬ ಬದ್ಧತೆ ಆಧಾರವಾಗಿರುವ 'ವಿಶ್ವಾಸಾರ್ಹ ಕನಿಷ್ಠ ತಡೆ' ಹೊಂದಿರುವ ಭಾರತದ ಹೇಳಿಕೆ ನೀತಿಗೆ ಅನುಗುಣವಾಗಿದೆ. ನೆರೆಯ ರಾಷ್ಟ್ರವಾದ ಚೀನಾಕ್ಕೆ ಬಲವಾದ ಸಂದೇಶ ರವಾನಿಸುವ ಪ್ರಯತ್ನವಾಗಿ ಅಗ್ನಿ-5 ಉಡಾವಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.