ಗ್ವಾಲಿಯರ್: ಸಾಮಾಜಿಕ ಜಾಲತಾಣ, ಇಂಟರ್ನೆಟ್ ಸಂಪರ್ಕದಿಂದ ಚಿಕ್ಕ ವಯಸ್ಸಿನಲ್ಲಿಯೇ ಹುಡುಗ, ಹುಡುಗಿಯರು ಪ್ರೌಢಾವಸ್ಥೆ ತಲುಪುತ್ತಿದ್ದು, ಇಬ್ಬರ ದೈಹಿಕ ಸಂಪರ್ಕದ ಸಮ್ಮತಿಯ ವಯಸ್ಸನ್ನು 18 ರಿಂದ 16ಕ್ಕೆ ಇಳಿಸಿ ಎಂದು ಮಧ್ಯಪ್ರದೇಶದ ಹೈಕೋರ್ಟ್ನ ಗ್ವಾಲಿಯರ್ ಪೀಠ ಕೇಂದ್ರ ಸರ್ಕಾರಕ್ಕೆ ಕೋರಿದೆ. ಪ್ರಸ್ತುತ 18 ವರ್ಷ ವಯಸ್ಸಿನ ನಿಬಂಧನೆಯು ಹದಿಹರೆಯದ ಹುಡುಗರಿಗೆ ಸರಿಹೊಂದುತ್ತಿಲ್ಲ. ಈ ನಿಯಮ ಈಗಿನ ಕಾಲಕ್ಕೆ ಅಪ್ರಸ್ತುತ ಎಂಬುದು ಕೋರ್ಟ್ ಅಭಿಮತ. ಇದಕ್ಕೆ ಸಾಮಾಜಿಕ, ಆಧುನಿಕ ಕಾರಣಗಳೂ ಇವೆ. ಹೀಗಾಗಿ ಹುಡುಗಿಯರ ಸಮ್ಮತಿಯ ವಯಸ್ಸನ್ನು ಕಡಿತಗೊಳಿಸಲು ಮನವಿ ಮಾಡಿದೆ.
2020ರಲ್ಲಿ ಅಪ್ರಾಪ್ತೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಆಕೆ ಗರ್ಭಧರಿಸುವಂತೆ ಮಾಡಿದ ವ್ಯಕ್ತಿಯ ವಿರುದ್ಧದ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್, ಆತನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಈ ಅಭಿಪ್ರಾಯ ತಿಳಿಸಿತು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲ ಕಾರಣಗಳಿಂದಾಗಿ ಹುಡುಗ ಹುಡುಗಿಯರಲ್ಲಿ ಜಾಗೃತಿ ಮೂಡುತ್ತಿದೆ. ಅವರು 14 ವರ್ಷ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಹುಡುಗರು ಮತ್ತು ಹುಡುಗಿಯರು ಪರಸ್ಪರ ಆಕರ್ಷಿತರಾಗುತ್ತಾರೆ. ಇದು ಅಂತಿಮವಾಗಿ "ಒಮ್ಮತದ ದೈಹಿಕ ಸಂಬಂಧಗಳಿಗೆ ಕಾರಣವಾಗುತ್ತದೆ" ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಹುಡುಗರಿಗೆ ಅನ್ಯಾಯ: ಸದ್ಯ ಇರುವ 18 ವರ್ಷ ವಯಸ್ಸಿನ ನಿಬಂಧನೆ ಹುಡುಗರಿಗೆ ಅನ್ಯಾಯ ಮಾಡುತ್ತಿದೆ. ಇದನ್ನು ಸರಿಪಡಿಸಲು ಮೊದಲು ನಿಯಮಗಳ ತಿದ್ದುಪಡಿ ಮಾಡಬೇಕಿದೆ. ಹೆಣ್ಣುಮಕ್ಕಳ 18 ವರ್ಷ ವಯಸ್ಸಿನ ಒಪ್ಪಿತ ವಯಸ್ಸಿನ ಅವಧಿ ಸಮಾಜದ ರಚನೆಯನ್ನು ಕದಡಿದೆ. ಹೀಗಾಗಿ ಒಪ್ಪಿತ ವಯಸ್ಸನ್ನು 18ರಿಂದ 16 ವರ್ಷಕ್ಕೆ ಇಳಿಸುವ ವಿಷಯದ ಬಗ್ಗೆ ಯೋಚಿಸಲು ಭಾರತ ಸರ್ಕಾರ ಮುಂದಾಗಬೇಕು ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರ್ವಾಲ್ ಅವರಿದ್ದ ಪೀಠ ಸಲಹೆ ನೀಡಿತು.
ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ ಶರಣಾಗತಿಗೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕೋರ್ಟ್ ಪರಿಗಣಿಸಿದೆ. ಹುಡುಗ ಅಥವಾ ಹುಡುಗಿ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ. ಇಬ್ಬರ ನಡುವಿನ ಸ್ನೇಹ ನಂತರ ಆಕರ್ಷಣೆಯಿಂದಾಗಿ ದೈಹಿಕ ಸಂಬಂಧವೂ ಬೆಳೆಯಲು ಕಾರಣವಾಗುತ್ತದೆ. ಈ ಪ್ರಕರಣಗಳಲ್ಲಿ ಪುರುಷ ವ್ಯಕ್ತಿಗಳು ಅಪರಾಧಿಗಳಾಗುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣವೇನು?: ದೂರುದಾರೆ 2020ರಲ್ಲಿ ಅಪ್ರಾಪ್ತೆಯಾಗಿದ್ದಳು. ಆರೋಪಿಯಿಂದ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ವ್ಯಕ್ತಿ ಒಮ್ಮೆ ತನಗೆ ಮತ್ತು ಬರುವ ಪಾನೀಯವನ್ನು ನೀಡಿ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ವೀಡಿಯೊ ಮಾಡಿದ್ದಾರೆ ಎಂದು ಅವರು ಆರೋಪಿಸಿ ದೂರು ನೀಡಿದ್ದರು. ಈ ವಿಡಿಯೋವ ಇಟ್ಟುಕೊಂಡು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಎಂದು ದೂರಿನಲ್ಲಿ ಹೇಳಿದ್ದರು.
ಇದನ್ನೂ ಓದಿ: ROPE PULLING HONOUR: ನಿವೃತ್ತಿ ಹೊಂದಿದ ಡಿಜಿಪಿಗೆ ರೋಪ್ ಪುಲ್ಲಿಂಗ್ ಗೌರವ ಸಲ್ಲಿಸಿದ ಐಪಿಎಸ್ ಅಧಿಕಾರಿಗಳು