ETV Bharat / bharat

ಸೆಂಟ್ರಲ್​ ಜೈಲಿನಲ್ಲಿ ಗ್ಯಾಂಗ್​ಸ್ಟರ್​ಗಳ ಹತ್ಯೆಗೈದು ಸಹ ಕೈದಿಗಳ ಸಂಭ್ರಮಾಚರಣೆ: ವಿಡಿಯೋ ವೈರಲ್​ - ಮುಖ್ಯಮಂತ್ರಿ ಭಗವಂತ್ ಮಾನ್

ಪಂಜಾಬ್​ನ ಗೋಯಿಂಡ್ವಾಲ್ ಸಾಹಿಬ್​ ಸೆಂಟ್ರಲ್​ ಜೈಲಿನಲ್ಲಿ ಇತ್ತೀಚೆಗೆ ಇಬ್ಬರು ಗ್ಯಾಂಗ್​ಸ್ಟರ್​ಗಳನ್ನು ಕೊಂದಿರುವ ಸಹ ಕೈದಿಗಳ ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

after-the-gang-war-gangsters-released-video-killing-and-celebrating-in-goindwal-jail
ಸೆಂಟ್ರಲ್​ ಜೈಲಿನಲ್ಲಿ ಗ್ಯಾಂಗ್​ಸ್ಟರ್​ಗಳ ಹತ್ಯೆ ಮಾಡಿದ ಸಹ ಕೈದಿಗಳ ಸಂಭ್ರಮಾಚರಣೆ: ವಿಡಿಯೋಗಳು ಬಹಿರಂಗ
author img

By

Published : Mar 5, 2023, 4:16 PM IST

ಚಂಡೀಗಢ (ಪಂಜಾಬ್​): ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಬಂಧಿತ ಇಬ್ಬರ ಗ್ಯಾಂಗ್​ಸ್ಟರ್​ಗಳ ಕೊಲೆಗೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ವಿಡಿಯೋಗಳು ಹೊರ ಬಿದ್ದಿವೆ. ಜೈಲಿನಲ್ಲೇ ಇಬ್ಬರನ್ನು ಹತ್ಯೆ ಮಾಡಿದ ನಂತರ ಸಹ ಕೈದಿಗಳು ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಕಾರಾಗೃಹ ಇಲಾಖೆಯ ಅಧಿಕಾರಿಗಳ ಕರ್ತವ್ಯದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆಮ್​ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ.

ಪ್ರಸಿದ್ಧ ಗಾಯಕ, ಕಾಂಗ್ರೆಸ್ ಮುಖಂಡರಾಗಿದ್ದ ಸಿಧು ಮೂಸೆವಾಲಾ ಅವರನ್ನು ಕಳೆದ ವರ್ಷ ಮೇ 29ರಂದು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಗ್ಯಾಂಗ್​ಸ್ಟರ್​ಗಳನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಇದರ ನಡುವೆ ಫೆಬ್ರವರಿ 26ರಂದು ಮಧ್ಯಾಹ್ನ ಪಂಜಾಬ್​ನ ಗೋಯಿಂಡ್ವಾಲ್ ಸಾಹಿಬ್​ ಸೆಂಟ್ರಲ್​ ಜೈಲಿನಲ್ಲೇ ಬಂಧಿತ ಗ್ಯಾಂಗ್​ಸ್ಟರ್​ಗಳ ನಡುವೆ ವಾರ್​ ನಡೆದಿತ್ತು. ಈ ಗ್ಯಾಂಗ್​ ವಾರ್​ನಲ್ಲಿ​ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮೋಹನ್​ಸಿಂಗ್ ಮೋಹನ ಮತ್ತು ಮನದೀಪ್ ತೋಫಾನ್​ನನ್ನು ಹೊಡೆದು ಕೊಲೆ ಮಾಡಲಾಗಿತ್ತು. ಅಲ್ಲದೇ, ಕೇಶವ್ ಎಂಬ ಮತ್ತೋರ್ವ ಗ್ಯಾಂಗ್​ಸ್ಟರ್ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.

ಹಂತಕರ ಸಂಭ್ರಮಾಚರಣೆ ವಿಡಿಯೋಗಳು ಬಹಿರಂಗ: ಸೆಂಟ್ರಲ್​ ಜೈಲಿನಲ್ಲೇ ಗ್ಯಾಂಗ್​ ವಾರ್ ನಡೆದು ಇಬ್ಬರು ಹತ್ಯೆಯಾದ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಕೊಲೆಗಳ ನಂತರ ಮತ್ತೊಂದು ಗುಂಪಿನ ಕೈದಿ ಗ್ಯಾಂಗ್​ಸ್ಟರ್​ಗಳು ಸಂಭ್ರಮಾಚರಣೆ ಮಾಡಿರುವ ವಿಡಿಯೋಗಳು ಬಹಿರಂಗವಾಗಿವೆ. ಜೈಲಿನಲ್ಲೇ ಹಂತಕರು ಮೊಬೈಲ್​ ಹಿಡಿದುಕೊಂಡು ವಿಡಿಯೋದಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ತಮ್ಮ ಸಹೋದರನ ಕೊಂದಿದ್ದವರ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ ಎಂದು ಕೈದಿಯೋರ್ವ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ, ಗ್ಯಾಂಗ್​ಸ್ಟರ್​ ಜಗ್ಗು ಭಗವಾನ್‌ಪುರಿಯನ್ನು ತಮ್ಮ ಅಪ್ಪ ಎಂದು ತಿಳಿದುಕೊಂಡಿದ್ದ ಇಬ್ಬರನ್ನೂ ಜೈಲಿನಲ್ಲೇ ಕೊಲೆ ಮಾಡಿದ್ದೇವೆ ಎಂದೂ ಹಂತಕರು ಹೇಳಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕೂಡ ಈ ದೃಶ್ಯದಲ್ಲಿ ದಾಖಲಾಗಿದೆ.

ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ: ಇಬ್ಬರನ್ನು ಹತ್ಯೆ ಮಾಡಿದ ಕೈದಿಗಳು ಜೈಲಿನಿಂದಲೇ ವಿಡಿಯೋ ಮಾಡಿ, ಅದನ್ನು ಹರಿಬಿಟ್ಟ ಬೆನ್ನಲ್ಲೇ ಮುಖ್ಯಮಂತ್ರಿ ಭಗವಂತ್ ಮಾನ್​ ನೇತೃತ್ವದ ಆಮ್​ ಆದ್ಮಿ ಪಕ್ಷದ ಸರ್ಕಾರ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಈ ಹಿಂದೆ ಅಜ್ನಾಲಾ ಪ್ರಕರಣದಲ್ಲಿ ಖಲಿಸ್ತಾನ್ ಪರವಾಗಿ ಶಸ್ತ್ರಸಜ್ಜಿತವಾಗಿ ಮೆರವಣಿಗೆ ಮಾಡಲಾಗಿತ್ತು. ಈಗ ಗ್ಯಾಂಗ್​ಸ್ಟರ್​ಗಳು ಜೈಲಿನಿಂದಲೇ ಬಹಿರಂಗವಾಗಿ ವಿಡಿಯೋಗಳನ್ನು ಮಾಡುತ್ತಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕೊಲೆ ಮಾಡಿದ ನಂತರ ಕೈದಿಗಳು ವಿಡಿಯೋ ಮಾಡುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿರುವುದು ಸರ್ಕಾರದ ನಿರ್ಲಕ್ಷ್ಯದ ಪರಮಾವಧಿಯನ್ನು ತೋರಿಸುತ್ತಿದೆ ಎಂದು ಬಿಜೆಪಿ ನಾಯಕ ಡಾ. ರಾಜ್ ಕುಮಾರ್ ವರ್ಕಾ ಕಿಡಿಕಾರಿದ್ದಾರೆ.

ಜೈಲಿನಲ್ಲಿ ನಡೆದ ಕೃತ್ಯ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಸರ್ಕಾರದ ಗಮನಕ್ಕೆ ಬರದೇ ಇರುವುದು ಆಶ್ಚರ್ಯಕರವೇನಿಲ್ಲ. ಯಾಕೆಂದರೆ, ಈ ಘಟನೆ ಸಮಯದಲ್ಲಿ ಮುಂಬೈನಲ್ಲಿ ಕೇಜ್ರಿವಾಲ್ ಜೊತೆ ಭಗವಂತ್ ಮಾನ್ ಪ್ರವಾಸ ಮಾಡುತ್ತಿದ್ದರು. ಆಮ್ ಆದ್ಮಿ ಪಕ್ಷವು ಗೂಂಡಾಗಳು ಮತ್ತು ದರೋಡೆಕೋರರಿಗೆ ಜೈಲುಗಳಲ್ಲಿ ವೇಶ್ಯಾವಾಟಿಕೆ ಶಿಬಿರಗಳನ್ನೂ ಸ್ಥಾಪಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್​ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್​ಸ್ಟರ್​ಗಳ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.