ನವದೆಹಲಿ: ಗಡಿ ವಾಸ್ತವ ನಿಯಂತ್ರಣ ರೇಖೆ ಬಳಿ ಚೀನಾದ ಆಕ್ರಮಣಕಾರಿ ಘರ್ಷಣೆಗಳನ್ನು ತಡೆಯಲು ಕೇಂದ್ರ ಸರ್ಕಾರ ಅರುಣಾಚಲ ಪ್ರದೇಶ ಸೇರಿದಂತೆ ಗಡಿ ರೇಖೆ ಬಳಿ ಮೂಲ ಸೌಲಭ್ಯಗಳ ಅಭಿವೃದ್ದಿಗೆ ಮುಂದಾಗಿದೆ.
ಗಡಿ ರಸ್ತೆ ಸಂಘಟನೆ (ಬಿಆರ್ಒ) ಪಶ್ಚಿಮ ಅಸ್ಸೋಂ ಮತ್ತು ಅರುಣಾಚಲ ಪ್ರದೇಶದ ಗಡಿ ಪ್ರದೇಶದಲ್ಲಿ ಸಂಪರ್ಕ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಿದೆ ಎಂದು 'ವರ್ತಕ್ ಯೋಜನೆ' ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್ ರಾಮನ್ ಕುಮಾರ್ ಮಾಹಿತಿ ನೀಡಿದರು. ನಮ್ಮ ಬಳಿ ರಾಷ್ಟ್ರೀಯ ಹೆದ್ದಾರಿಗಳು, ಸಿಂಗಲ್ ಲೇನ್, ಡಬ್ಬಲ್ ಲೇನ್ ಹಾಗೂ ಇತ್ತಿತರ ವಿಧದ ರಸ್ತೆಗಳಿವೆ. ತಾವಂಗ್ ಜಿಲ್ಲೆಯ ದೂರದ ಪ್ರದೇಶಗಳನ್ನು ನಾವು ಸಂಪರ್ಕಿಸಬೇಕಿದೆ. ಇದರ ಜೊತೆಗೆ ಈ ಪ್ರದೇಶದ ಸಾಮಾಜಿಕ - ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಚಳಿಗಾಲದಲ್ಲಿ ಭಾರಿ ಹಿಮದಿಂದಾಗಿ ವಾಹನದ ಓಡಾಟ ಕಷ್ಟಕರವಾಗಿದ್ದು, ಸೆಲ ಮತ್ತು ನೆಚಿಪು ಸುರಂಗದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸೆಲ ಪಾಸ್ ಕೆಳಗೆ 400 ಮೀಟರ್ ಉದ್ದದ ಸೆಲ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ನೆಚಿಪು ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸೇನಾ ಹಾಗೂ ಸಾರ್ವಜನಿಕ ವಾಹನ ಸಂಚಾರ ಸುಗಮವಾಗಿದೆ. ಇದರ ಜೊತೆ ಪ್ರವಾಸೋದ್ಯಮಕ್ಕೂ ಇದು ಒತ್ತು ನೀಡಲಿದೆ ಎಂದರು.
ರಸ್ತೆಗಳ ಸಂಪರ್ಕದ ಹೊರತಾಗಿ ಇತರೆ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಲಾಗಿದೆ. ಸರ್ಕಾರ ತವಾಂಗ್ನಲ್ಲಿ ಮೊಬೈಲ್ ನೆಟ್ವರ್ಕ್ ಅಭಿವೃದ್ಧಿಗೆ ಮುಂದಾಗಿದೆ. ತವಾಂಗ್, ಎಲ್ಎಸಿ ಸೇರಿದಂತೆ ಮತ್ತಿತ್ತರ ಕಡೆ ಮೊಬೈಲ್ ಟವರ್ಗಳ ಅಳವಡಿಕೆ ಸಾಗಿದೆ. ಇನ್ನು ಈ ಕುರಿತು ಮಾತನಾಡಿರುವ ಸ್ಥಳೀಯರು ಈ ಹಿಂದೆಗೆ ಹೋಲಿಕೆ ಮಾಡಿದಾಗ ಮೊಬೈಲ್ ಇಂಟರ್ನೆಟ್ ಸೇವೆ ಸುಧಾರಿಸಿದೆ. ನಾವೀಗ ಫೇಸ್ಬುಕ್ ಮತ್ತು ವಾಟ್ಸಾಪ್ ಬಳಕೆ ಮಾಡಬಹುದಾಗಿದೆ. ಸರ್ಕಾರ ಎಲ್ಲಾ ಪ್ರದೇಶಗಳಲ್ಲೂ ಉತ್ತಮವಾಗ ಕಾರ್ಯ ನಿರ್ವಹಿಸುತ್ತಿದೆ. ಆದರೂ ಇನ್ನು ಅನೇಕ ಅಡೆತಡೆಗಳಿವೆ ಎಂದಿದ್ದಾರೆ.
ಇತ್ತೀಚೆಗೆ ಗಡಿ ಪ್ರದೇಶ ತವಾಂಗ್ನಲ್ಲಿ ಭಾರತ ಮತ್ತ ಚೀನಾ ಸೈನಿಕರ ಮಧ್ಯೆ ಘರ್ಷಣೆ ಉಂಟಾಗಿ, ಉಭಯ ಸೈನಿಕರು ಗಾಯಗೊಂಡಿದ್ದರು. ಆ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಇದನ್ನೂ ಓದಿ: ಭಾರತ-ಚೀನಾ ಗಡಿ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಪ್ರಶ್ನಿಸಿದ ಪಿ. ಚಿದಂಬರಂ