ETV Bharat / bharat

ಪಾಲ್ಘರ್‌ನ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಪತ್ತೆ.. ಹೆಚ್​5ಎನ್​1 ಸೋಂಕು ದೃಢ - ಪಾಲ್ಘರ್‌ನ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ

ಥಾಣೆಯ ಶಹಾಪುರ ತಾಲೂಕಿನ ವೆಹ್ಲೊಲಿ ಗ್ರಾಮ ಪೌಲ್ಟ್ರಿಯಲ್ಲಿ ಹಕ್ಕಿ ಜ್ವರದಿಂದಾಗಿ 100ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಇದೀಗ ಪಾಲ್ಘರ್‌ನಲ್ಲೂ ಹಕ್ಕಿ ಜ್ವರ ಪತ್ತೆಯಾಗಿದೆ.

bird flu
ಹಕ್ಕಿ ಜ್ವರ
author img

By

Published : Feb 19, 2022, 5:16 PM IST

ಪಾಲ್ಘರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ವರದಿಯಾದ ಬಳಿಕ ಇದೀಗ ನೆರೆ ಜಿಲ್ಲೆಯಾದ ಪಾಲ್ಘರ್‌ನಲ್ಲೂ ಹಕ್ಕಿ ಜ್ವರ ಪತ್ತೆಯಾಗಿದೆ. ಇಲ್ಲಿನ ವಸೈ-ವಿರಾರ್ ಪ್ರದೇಶದ ಪೌಲ್ಟ್ರಿಯಲ್ಲಿನ ಕೋಳಿಗಳಿಗೆ ಹಕ್ಕಿ ಜ್ವರ ಬಂದಿರುವುದು ದೃಢಪಟ್ಟಿದೆ.

ಕೋಳಿ ಫಾರಂನಲ್ಲಿ ಮೊದಲು ಕೆಲವು ಕೋಳಿಗಳು ಸಾವನ್ನಪ್ಪಿದ್ದು, ನಂತರ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ ರಾತ್ರಿ ವರದಿ ಬಂದಿದ್ದು, ಕೋಳಿಗಳಿಗೆ ಹೆಚ್5ಎನ್1 ಸೋಂಕು ತಗುಲಿರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್ ಕಾಂಬಳೆ ತಿಳಿಸಿದ್ದಾರೆ. ಎಷ್ಟು ಕೋಳಿಗಳು ಮೃತಪಟ್ಟಿವೆ ಎಂಬ ಕುರಿತು ಅವರು ಮಾಹಿತಿ ನೀಡಿಲ್ಲ.

ಇದನ್ನೂ ಓದಿ: 100ಕ್ಕೂ ಹೆಚ್ಚು ಕೋಳಿಗಳ ದಿಢೀರ್ ಸಾವು: 25 ಸಾವಿರ ಕುಕ್ಕುಟಗಳ ಕೊಲ್ಲಲು ಆದೇಶ

ಮೊನ್ನೆಯಷ್ಟೇ ಥಾಣೆಯ ಶಹಾಪುರ ತಾಲೂಕಿನ ವೆಹ್ಲೊಲಿ ಗ್ರಾಮ ಪೌಲ್ಟ್ರಿಯಲ್ಲಿ ಹಕ್ಕಿ ಜ್ವರದಿಂದಾಗಿ 100ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು, ಘಟನೆ ನಡೆದ ಗ್ರಾಮದಿಂದ ಒಂದು ಕಿಲೋ ಮೀಟರ್​ ಸುತ್ತಲಿನ ಪ್ರದೇಶಗಳ ಪೌಲ್ಟ್ರಿಫಾರ್ಮ್​​ಗಳಲ್ಲಿರುವ ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.