ETV Bharat / bharat

ವಂಚನೆ ಪ್ರಕರಣ: ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್​, ಪತ್ನಿ, ಪುತ್ರನಿಗೆ 7 ವರ್ಷ ಜೈಲು ಶಿಕ್ಷೆ

ಜನನ ಪ್ರಮಾಣಪತ್ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ, ಎಂಎಲ್ಎ ಕೋರ್ಟ್ ಅಜಂ ಖಾನ್‌ ಕುಟುಂಬಕ್ಕೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಜಂ ಖಾನ್​ಗೆ ಏಳು ವರ್ಷಗಳ ಜೈಲು ಶಿಕ್ಷೆ
ಅಜಂ ಖಾನ್​ಗೆ ಏಳು ವರ್ಷಗಳ ಜೈಲು ಶಿಕ್ಷೆ
author img

By ETV Bharat Karnataka Team

Published : Oct 18, 2023, 10:23 PM IST

ರಾಂಪುರ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಅವರ ಎರಡು ವಿಭಿನ್ನ ಜನನ ಪ್ರಮಾಣಪತ್ರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪುರದ ಎಂಪಿ, ಎಂಎಲ್ಎ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿತು. ಅಬ್ದುಲ್ಲಾ ಅಜಂ ಖಾನ್, ಪತ್ನಿ ತಾಜಿನ್ ಫಾತಿಮಾ ಅವರಿಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೇ ವೇಳೆ, 15 ಸಾವಿರ ರೂ ದಂಡ ಹಾಕಿದೆ.

ಅಜಂ ಖಾನ್ ಹೇಳಿದ್ದೇನು?: ಜೈಲು ಪ್ರವೇಶಿಸುವ ಮೊದಲು ಅಜಂ ಖಾನ್ ಮಾಧ್ಯಮಗಳೊಂದಿಗೆ ಮಾತನಾಡಿ, ನ್ಯಾಯ ಮತ್ತು ನಿರ್ಧಾರದ ನಡುವೆ ವ್ಯತ್ಯಾಸವಿದೆ. ನಿನ್ನೆಯಿಂದ ಇಡೀ ನಗರಕ್ಕೆ ಈ ವಿಷಯ ತಿಳಿದಿತ್ತು ಎಂದರು. ನಿರ್ಧಾರದ ವಿರುದ್ಧ ನೀವು ಮೇಲ್ಮನವಿ ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ವಕೀಲರು ಪರಿಗಣಿಸುತ್ತಾರೆ ಎಂದರು.

ಅಜಂ ಖಾನ್ ಕುಟುಂಬವನ್ನು ಪೊಲೀಸ್ ರಕ್ಷಣೆಯಲ್ಲಿ ಜಿಲ್ಲಾ ಕಾರಾಗೃಹಕ್ಕೆ ಕರೆತರಲಾಯಿತು. ಇಲ್ಲಿಯೂ ಆಜಂ ಬೆಂಬಲಿಗರ ಸಭೆ ನಡೆಯಿತು. ಆಜಂ ಕಾರಿನಿಂದ ಕೆಳಗಿಳಿದು ಎಲ್ಲರಿಗೂ ಕೈ ಕುಲುಕಿದರು. ಹಿರಿಯ ಮಗ ಅದೀಬ್ ಅಜಂ ಖಾನ್ ಕೂಡ ಜೈಲಿನ ಹೊರಗಿದ್ದರು.

ದ್ವೇಷ ಭಾಷಣ ಪ್ರಕರಣ- ಅಜಂ ಖಾನ್​​ಗೆ ಎರಡು ವರ್ಷ ಶಿಕ್ಷೆ: ಅಜಂ ಖಾನ್ ವಿರುದ್ಧದ 2019ರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ, ಎಂಎಲ್ಎ ನ್ಯಾಯಾಲಯ ಈ ಹಿಂದೆ ಆಜಂ ಖಾನ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಇದನ್ನೂ ಓದಿ: ದ್ವೇಷ ಭಾಷಣ ಪ್ರಕರಣ: ಎಸ್‌ಪಿ ನಾಯಕ ಅಜಂ ಖಾನ್​​ಗೆ ಎರಡು ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.