ETV Bharat / bharat

ರಾಜಸ್ಥಾನ ಆಯ್ತು, ಈಗ ಮಧ್ಯಪ್ರದೇಶದಲ್ಲೂ ಕಾಣಿಸಿಕೊಂಡ ಹಕ್ಕಿ ಜ್ವರ - ಮಧ್ಯಪ್ರದೇಶದಲ್ಲಿ ಆರೋಗ್ಯಾಧಿಕಾರಿಗಳ ಮುನ್ನೆಚ್ಚರಿಕೆ

ಮಧ್ಯಪ್ರದೇಶದ ಇಂದೋರ್​ನಲ್ಲಿ ಇತ್ತೀಚಿಗೆ ಸುಮಾರು 96 ಕಾಗೆಗಳು ಮೃತಪಟ್ಟಿದ್ದು, ಕೆಲವು ಕಾಗೆಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವುಗಳಲ್ಲಿ ಹಕ್ಕಿ ಜ್ವರದ ವೈರಸ್ ಕಂಡುಬಂದಿದೆ.

bird flu virus found in dead crows
ಮಧ್ಯಪ್ರದೇಶದಲ್ಲೂ ಕಾಣಿಸಿಕೊಂಡ ಹಕ್ಕಿ ಜ್ವರ
author img

By

Published : Jan 3, 2021, 5:37 AM IST

ಇಂದೋರ್ (ಮಧ್ಯಪ್ರದೇಶ): ರಾಜಸ್ಥಾನದ ನಂತರ, ಮಧ್ಯಪ್ರದೇಶದಲ್ಲಿಯೂ ಕೂಡಾ ಹಕ್ಕಿ ಜ್ವರದ ವೈರಸ್ ಕಾಣಿಸಿಕೊಂಡಿದೆ ಎಂದು ಸಾರ್ವಜನಿಕ ಆರೋಗ್ಯಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮೂರು ದಿನಗಳ ಹಿಂದೆ ಇಂದೋರ್ ನಗರದಲ್ಲಿ ಸತ್ತ ಎರಡು ಕಾಗೆಗಳ ಕಳೇಬರಗಳು ಪತ್ತೆಯಾಗಿತ್ತು. ಇವುಗಳನ್ನು ತಪಾಸಣೆ ನಡೆಸಿದ ಆರೋಗ್ಯಾಧಿಕಾರಿಗಳು ಆ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ನಗರದಲ್ಲಿ ಒಟ್ಟು 96 ಕಾಗೆಗಳ ಕಳೇಬರಗಳು ಪತ್ತೆಯಾಗಿದ್ದು, ಆರೋಗ್ಯಾಧಿಕಾರಿಗಳು ಸ್ಥಳವನ್ನು ಸ್ಯಾನಿಟೈಸೇಶನ್ ಮಾಡಲು ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಜ್ವರದ ಲಕ್ಷಣ ಕಂಡುಬರುವವರನ್ನು ಗುರ್ತಿಸಿ, ತಪಾಸಣೆ ನಡೆಸಲು ಆರೋಗ್ಯ ಸಿಬ್ಬಂದಿ ಮುಂದಾಗಿದ್ದಾರೆ.

ಇದನ್ನೂ ಓದಿ: ಹಕ್ಕಿಜ್ವರದ ಭೀತಿ ನಡುವೆ 53 ನವಿಲುಗಳ ಕಳೆಬರ ಪತ್ತೆ: ರಾಜಸ್ಥಾನದಲ್ಲಿ ಆತಂಕ

ಮಂಗಳವಾರವಷ್ಟೇ ಡ್ಯಾಲಿ ಕಾಲೇಜು ಕ್ಯಾಂಪಸ್​ನಲ್ಲಿ ಸುಮಾರು 50 ಕಾಗೆಗಳ ಕಳೇಬರಗಳು ಪತ್ತೆಯಾಗಿವೆ. ಅವುಗಳಲ್ಲಿ ಕೆಲವನ್ನು ಭೋಪಾಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲವು ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ಕಂಡುಬಂದಿದೆ ಎಂದು ಇಂದೋರ್​ನ ಮುಖ್ಯ ಆರೋಗ್ಯಾಧಿಕಾರಿ ಪೂರ್ಣಿಮಾ ಗಡಾರಿಯಾ ತಿಳಿಸಿದ್ದಾರೆ.

ಸದ್ಯಕ್ಕೆ ಡ್ಯಾಲಿ ಕಾಲೇಜು ಆವರಣವನ್ನು ಸ್ವಚ್ಚಗೊಳಿಸಲಾಗಿದ್ದು, ಆ ಪ್ರದೇಶದ ಐದು ಕಿಲೋಮೀಟರ್​ ಒಳಗೆ ವಾಸವಾಗಿರುವ ಜನರಲ್ಲಿ ಶೀತ, ಜ್ವರ, ಕೆಮ್ಮು ಇದ್ದರೆ ಅಂತರ ಮೇಲೆ ಗಮನ ಹರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಈ ಗುಣಲಕ್ಷಣಗಳು ಕಂಡು ಬಂದರೆ ಅಂಥವರ ಸ್ವ್ಯಾಬ್ ಮಾದರಿಯನ್ನು ಪರೀಕ್ಷೆ ನಡೆಸಲಾಗುತ್ತದೆ ಎಂದು ಪೂರ್ಣಿಮಾ ಸ್ಪಷ್ಟನೆ ನೀಡಿದ್ದಾರೆ.

ಡಿಸೆಂಬರ್ 1ರಂದು ರಾಜಸ್ಥಾನದ ನಾಗೌರ್ ಜಿಲ್ಲೆಯ ಕಲ್ವಾ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ 53 ಮೃತಪಟ್ಟ ನವಿಲುಗಳು ಪತ್ತೆಯಾಗಿದ್ದು, ಅವುಗಳಲ್ಲಿ ಹಕ್ಕಿ ಜ್ವರದ ವೈರಸ್ ಕಾಣಿಸಿಕೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.