ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಎರಡು ದಿನಗಳ ಕಾಲ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದು, ಬಿಜೆಪಿ ಇದೀಗ ಮತ್ತೊಮ್ಮೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ.
ವಾರಣಾಸಿಯ ಬಿಜೆಪಿ ಪದಾಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಪ್ರಧಾನಿ ಮೋದಿಯವರ ಪ್ರಚಾರ ಜನರ ಮನಸ್ಸನ್ನು ಪಕ್ಷದ ಪರವಾಗಿ ತಿರುಗಿಸಿದೆ ಮತ್ತು ಕೇಸರಿ ಪಕ್ಷವು 2017 ರಲ್ಲಿ ಗೆದ್ದಂತೆ ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ 2017 ರ ಪ್ರದರ್ಶನವನ್ನು ಪುನರಾವರ್ತಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳಾದ ವಾರಣಾಸಿ ದಕ್ಷಿಣ, ವಾರಣಾಸಿ ಉತ್ತರ, ವಾರಣಾಸಿ ಕ್ಯಾಂಟ್, ಶಿವಪುರಿ, ಸೇವಾಪುರಿ, ರೋಹನಿಯಾ, ಅಜಗರ ಮತ್ತು ಪಿಂದ್ರ ವಾರಣಾಸಿ ಜಿಲ್ಲೆಯಲ್ಲಿ ಬರುತ್ತವೆ. 2017ರಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟ ಎಲ್ಲಾ ಎಂಟು ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಪ್ರತಿಪಕ್ಷಗಳ ಅಭ್ಯರ್ಥಿಗಳಿಂದ ಈ ಬಾರಿ ಬಿಜೆಪಿ ಕೆಲವು ಸ್ಥಾನಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಕೆಲವು ಕ್ಷೇತ್ರಗಳಲ್ಲಿ ಜನರು ಹಾಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಇಂದು 2,135 ಭಾರತೀಯರು ತವರಿಗೆ
ಇದರ ಬೆನ್ನಲ್ಲೇ ಈಗ ಪ್ರಧಾನಿ ನಗರದಲ್ಲಿ ಮೊಕ್ಕಾಂ ಹೂಡಿ ಮೂರು ವಿಧಾನಸಭಾ ಸ್ಥಾನಗಳಲ್ಲಿ ರೋಡ್ ಶೋ ನಡೆಸಿದ ಪರಿಣಾಮ ಎಲ್ಲಾ ಕ್ಷೇತ್ರದಲ್ಲಿ ಕಮಲ ಅರಳುತ್ತದೆ ಎಂಬ ವಿಶ್ವಾಸ ಬಿಜೆಪಿ ಮುಖಂಡರದ್ದು.
ಪ್ರಧಾನಿ ಮೋದಿಯವರ ಕನಸಿನ ಯೋಜನೆ ಕಾಶಿ ವಿಶ್ವನಾಥ್ ಕಾರಿಡಾರ್ ಮತ್ತು ಕಾಶಿ ವಿಶ್ವನಾಥ್ ದೇವಾಲಯವು ದಕ್ಷಿಣ ವಾರಣಾಸಿ ವಿಧಾನಸಭಾ ಸ್ಥಾನದ ಅಡಿಯಲ್ಲಿ ಬರುತ್ತದೆ ಇದೇ ವೇಳೆ ಉಲ್ಲೇಖಿಸಿದರು.
ಕಾರ್ಪೋರೇಷನ್ ಚುನಾವಣೆಯಲ್ಲಿ ಗೆಲ್ಲಲು ವಿಫಲರಾದ ತಿವಾರಿ ಅವರು ಮೋದಿ ಅಲೆಯಿಂದಾಗಿ 2017 ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಪ್ರಧಾನಿಯವರ ರೋಡ್‌ಶೋ ಮತ್ತೊಮ್ಮೆ ತಿವಾರಿ ಪರವಾಗಿ ಮತಗಳನ್ನು ಪರಿವರ್ತಿಸುತ್ತದೆ ಎಂದು ಕ್ಷೇತ್ರದ ದೊಡ್ಡ ವರ್ಗದ ಮತದಾರರು ನಂಬಿದ್ದಾರೆ. ಹಾಗೆ ವಾರಣಾಸಿ ಕ್ಯಾಂಟ್‌ನಲ್ಲಿ ಮಾಜಿ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ ಮಿಶ್ರಾ ವಿರುದ್ಧ ಸ್ವರ್ಧಿಸಿದ್ದ ಸೌರಭ್ ಶ್ರೀವಾಸ್ತವ ಅವರಿಗೆ ಈ ರೋಡ್‌ಶೋ ಉತ್ತೇಜನ ನೀಡಿದೆ ಎಂದು ಬಿಜೆಪಿಯ ಹಿರಿಯ ಜಿಲ್ಲಾ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಧಾನಿ ತಮ್ಮ ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸುವುದು ಪಕ್ಷದ ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಮೊದಲು, ನಮಗೆ ಒಂದೆರಡು ಸ್ಥಾನಗಳ ಬಗ್ಗೆ ಅನುಮಾನವಿತ್ತು. ಆದರೆ, ಈಗ ನಾವು ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. 2017 ರಂತೆ ಈ ಬಾರಿಯೂ ನಾವು ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ ಬಿಜೆಪಿ ನಾಯಕರು.