ETV Bharat / bharat

ಇಂಗ್ಲೆಂಡ್​ ಗೆಲುವು ಸಂಭ್ರಮಿಸಿದವರ ಮೇಲೆ ಜಮ್ಮು ಕಾಶ್ಮೀರ ವಿದ್ಯಾರ್ಥಿಗಳಿಂದ ಹಲ್ಲೆ - T20 World Cup

ಪಾಕಿಸ್ತಾನ ಸೋತಿದ್ದಕ್ಕೆ ಇಂಗ್ಲೆಂಡ್​ ಗೆಲುವು ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಜಮ್ಮು ಕಾಶ್ಮೀರದ ವಿದ್ಯಾರ್ಥಿ ಗುಂಪು ದಾಳಿ ಮಾಡಿದ ಘಟನೆ ಪಂಜಾಬ್​ನಲ್ಲಿ ನಡೆದಿದೆ.

20-world-cup
ಜಮ್ಮು ಕಾಶ್ಮೀರ ವಿದ್ಯಾರ್ಥಿಗಳಿಂದ ಹಲ್ಲೆ
author img

By

Published : Nov 13, 2022, 11:09 PM IST

ಮೊಗಾ(ಪಂಜಾಬ್​): ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಬಿಹಾರದ ವಿದ್ಯಾರ್ಥಿಗಳ ಮೇಲೆ ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಪಂಜಾಬ್​ನಲ್ಲಿ ಇಂದು ನಡೆದಿದೆ. ಮಾರಾಮಾರಿಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ನಡೆದ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಸೋತ ಬಳಿಕ ಇಂಗ್ಲೆಂಡ್​ಗೆ ಬೆಂಬಲ ನೀಡಿದ್ದ ಬಿಹಾರದ ವಿದ್ಯಾರ್ಥಿಗಳು ಹಾಸ್ಟೆಲ್​ ಹೊರಭಾಗದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪವೆತ್ತಿದ್ದಾರೆ. ಅಲ್ಲದೇ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಪರವಾಗಿ ಷೋಷಣೆ ಕೂಗಿದ್ದಕ್ಕೆ ಉಭಯ ಗುಂಪುಗಳ ಮಧ್ಯೆ ವಾಗ್ವಾದ ನಡೆದು, ತೀವ್ರವಾಗಿ ಮಾರಾಮಾರಿ ನಡೆದಿದೆ.

ಈ ಬಗ್ಗೆ ಗಾಯಾಳು ವಿದ್ಯಾರ್ಥಿ ಮಾಹಿತಿ ನೀಡಿ, ಇಂಗ್ಲೆಂಡ್​ ಗೆಲುವು ಸಂಭ್ರಮಿಸುತ್ತಿದ್ದಾಗ ಜಮ್ಮು- ಕಾಶ್ಮೀರ ವಿದ್ಯಾರ್ಥಿಗಳು ಇದನ್ನು ವಿರೋಧಿಸಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರು. ಇದನ್ನು ಪ್ರಶ್ನಿಸದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದರು ಎಂದರು.

ಧರ್ಮದ ಅವಹೇಳನ ಆರೋಪ: ಇನ್ನೊಬ್ಬ ವಿದ್ಯಾರ್ಥಿ ಹೇಳಿದಂತೆ, ಇಂಗ್ಲೆಂಡ್​ ಪರವಾಗಿ ಘೋಷಣೆ ಕೂಗುತ್ತಿದ್ದಾಗ ಒಂದು ಧರ್ಮದ ವಿರುದ್ಧ ಅವಹೇಳನ ಮಾಡಲಾಯಿತು. ಇದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆಯಿತು ಎಂದು ತಿಳಿಸಿದ್ದಾನೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ, ಕೆಲ ವಿದ್ಯಾರ್ಥಿಗಳನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಓದಿ: ಮೊಘಲರಿಂದಲೇ ಏನ್​ ಮಾಡಕ್ಕಾಗಿಲ್ಲ, ಇನ್ನು ನೀ ಏನ್​ ಮಾಡ್ತಿಯೋ.. ಗೋಕಾಕ್​ದಲ್ಲಿ ಯತ್ನಾಳ್ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.