ಹೈದರಾಬಾದ್ : ಪಾಕಿಸ್ತಾನ ಮತ್ತು ಚೀನಾ ಎರಡೂ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಶ್ಚಿಮ ನೆರೆಯವರು ಭಾರತದ ವಿರುದ್ಧ ಭಯೋತ್ಪಾದನೆ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿದ್ದಾರೆ ಎಂದು ಹೇಳಿದರು.
ಹೈದರಾಬಾದ್‌ನ ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಶ್ಚಿಮ ವಲಯದಲ್ಲಿ ನಮ್ಮ ನೆರೆಯ ಪಾಕಿಸ್ತಾನವು ಗಡಿಯಲ್ಲಿ ದುಷ್ಕೃತ್ಯ ಮಾಡುತ್ತಲೇ ಇದೆ. ನಾಲ್ಕು ಬಾರಿ ಯುದ್ಧ ಸೋತ ಮೇಲೂ ಭಯೋತ್ಪಾದನೆಯ ಮೂಲಕ ಪರೋಕ್ಷ ಯುದ್ಧಗಳನ್ನು ಮಾಡುತ್ತಿದ್ದಾರೆ. ಈ ಪ್ರಯತ್ನಗಳನ್ನು ಎಚ್ಚರಿಕೆಯಿಂದ ಎದುರಿಸುವ ಭದ್ರತಾ ಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಾಕ್ ಎನ್‌ಎಸ್‌ಎ ಹೇಳಿಕೆ 'ಕೇವಲ ತಪ್ಪಿಸಿಕೊಳ್ಳುವ ಯತ್ನವಷ್ಟೇ.. ಭಾರತದ ಎನ್‌ಎಸ್‌ಎಬಿ ಮುಖ್ಯಸ್ಥರು
ಭಾರತೀಯ ವಾಯುಪಡೆಗೆ ಅದ್ಭುತ ಇತಿಹಾಸವಿದೆ. ಇದು ಯಾವಾಗಲೂ ಶೌರ್ಯ ಪ್ರದರ್ಶಿಸುತ್ತದೆ. 1971ರಲ್ಲಿ ನಡೆದ ಲಾಂಗ್‌ವಾಲಾ ಕದನದಿಂದ ಇತ್ತೀಚಿನ ಬಾಲಕೋಟ್ ವೈಮಾನಿಕ ದಾಳಿಯವರೆಗೆ ನಮ್ಮ ದೇಶದ ವಾಯುಪಡೆ ಇತಿಹಾಸದಲ್ಲಿ ಚಿನ್ನದ ಅಧ್ಯಾಯಗಳಾಗಿ ಪರಿಗಣಿಸಲಾಗುತ್ತದೆ ಎಂದರು.
ಲಡಾಖ್ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ದಾಳಿ, ಸಾಂಕ್ರಾಮಿಕ ಸಮಯದಲ್ಲಿ ಚೀನಾ ಮಾಡಿದ ಪ್ರಯತ್ನಗಳು ಅವರ ವರ್ತನೆ ತೋರಿಸುತ್ತದೆ. ಕೋವಿಡ್ ಸಮಯದಲ್ಲಿ ಈ ಪ್ರಯತ್ನವು ಚೀನಾದ ಮನೋಭಾವ ತೋರಿಸುತ್ತದೆ. ನಾವು ಏನು ಮಾಡಬಹುದೆಂದು ಅವರಿಗೆ ತೋರಿಸಿದ್ದೇವೆ ಎಂದು ಚೀನಾ ವಿರುದ್ಧ ರಾಜನಾಥ್ ಸಿಂಗ್ ಹೇಳಿದರು.