ETV Bharat / bharat

ಕೊಲೆಮಾಡಿ ತಿಂಗಳವರೆಗೂ ಶ್ರದ್ಧಾಳ ಇನ್​ಸ್ಟಾ ಅಕೌಂಟ್ ಚಾಲನೆಯಲ್ಲಿಟ್ಟಿದ್ದ ಅಫ್ತಾಬ್!

26ರ ಹರೆಯದ ಶ್ರದ್ಧಾ ಕೆಲವೊಮ್ಮೆ ಅಫ್ತಾಬ್ ತನ್ನನ್ನು ಥಳಿಸುತ್ತಾನೆ ಎಂದು ತಾಯಿಗೆ ತಿಳಿಸುತ್ತಿದ್ದಳು ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ. ಎಫ್‌ಐಆರ್‌ ಪ್ರಕಾರ, ಸಂತ್ರಸ್ತೆಯ ಕುಟುಂಬವು ಇವರಿಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ. ಆದರೆ ತನಗೆ 25 ವರ್ಷ ವಯಸ್ಸಾಗಿದ್ದರಿಂದ ತಾನು ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಹೊಂದಿದ್ದೇನೆ ಎಂದು ಹೇಳಿ ಸಂಬಂಧವನ್ನು ಮುಂದುವರಿಸಿದ್ದಳು.

ಜೂನ್​ವರೆಗೂ ಶ್ರದ್ಧಾಳ ಇನ್​ಸ್ಟಾ ಅಕೌಂಟ್ ಚಾಲನೆಯಲ್ಲಿಟ್ಟಿದ್ದ ಅಫ್ತಾಬ್
Mehrauli Murder Aftab used Shraddhas Insta till June
author img

By

Published : Nov 15, 2022, 1:52 PM IST

ನವದೆಹಲಿ: ಶ್ರದ್ಧಾ ವಾಲ್ಕರ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ, ಆಕೆ ಇನ್ನೂ ಬದುಕಿದ್ದಾಳೆಂದು ಜಗತ್ತಿಗೆ ತೋರಿಸಲು, ಆತ ಜೂನ್​ವರೆಗೆ ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಚಾಲನೆಯಲ್ಲಿಟ್ಟಿದ್ದ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ತಿಳಿಯಲು ಪೊಲೀಸ್ ತಂಡಗಳು ಅವರ ಫೋನ್ ಅನ್ನು ಸ್ಕ್ಯಾನ್ ಮಾಡುತ್ತಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಮೆಹ್ರೌಲಿ ಪ್ರದೇಶದಲ್ಲಿ ಮೇ 18 ರಂದು ತನ್ನ ಲಿವ್-ಇನ್ ಪಾರ್ಟನರ್ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಅವಧಿಯಲ್ಲಿ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದು ಬರುತ್ತಿದ್ದ. ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕೊನೆಗೂ ಶನಿವಾರ ಬಂಧಿಸಲಾಗಿದೆ.

26ರ ಹರೆಯದ ಶ್ರದ್ಧಾ ಕೆಲವೊಮ್ಮೆ ಅಫ್ತಾಬ್ ತನ್ನನ್ನು ಥಳಿಸುತ್ತಾನೆ ಎಂದು ತಾಯಿಗೆ ತಿಳಿಸುತ್ತಿದ್ದಳು ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ. ಎಫ್‌ಐಆರ್‌ ಪ್ರಕಾರ, ಸಂತ್ರಸ್ತೆಯ ಕುಟುಂಬವು ಇವರಿಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ. ಆದರೆ ತನಗೆ 25 ವರ್ಷ ವಯಸ್ಸಾಗಿದ್ದರಿಂದ ತಾನು ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಹೊಂದಿದ್ದೇನೆ ಎಂದು ಹೇಳಿ ಸಂಬಂಧವನ್ನು ಮುಂದುವರಿಸಿದ್ದಳು.

ಶ್ರದ್ಧಾ ತನ್ನ ಮನೆ ತೊರೆದು ಅಫ್ತಾಬ್ ಜೊತೆ ವಾಸಿಸುತ್ತಿದ್ದಳು. ಅಫ್ತಾಬ್ ತನ್ನನ್ನು ಹೊಡೆಯುತ್ತಾನೆ ಎಂದು ತಾಯಿಗೆ ಅನೇಕ ಬಾರಿ ಹೇಳಿದ್ದಳಂತೆ. 2020 ರಲ್ಲಿ ತನ್ನ ತಾಯಿಯ ಮರಣದ ಸುಮಾರು 15 ರಿಂದ 20 ದಿನಗಳ ನಂತರ, ತಂದೆಗೆ ಕರೆ ಮಾಡಿ ಇದೇ ವಿಷಯವನ್ನು ತಿಳಿಸಿದ್ದಳು ಎಂದು ಎಫ್ಐಆರ್​ನಲ್ಲಿ ನಮೂದಿಸಲಾಗಿದೆ.

ತರಬೇತಿ ಪಡೆದ ಚೆಫ್ (ಬಾಣಸಿಗ) ಆಗಿದ್ದ ಅಫ್ತಾಬ್ ಚಾಕು ಬಳಸುವುದರಲ್ಲಿ ನಿಪುಣನಾಗಿದ್ದ ಎಂದು ಮೂಲಗಳು ತಿಳಿಸಿವೆ. ಆದರೆ, ಕೃತ್ಯಕ್ಕೆ ಬಳಸಿದ ಚಾಕು ಇನ್ನೂ ಪತ್ತೆಯಾಗಿಲ್ಲ. ಅಫ್ತಾಬ್‌ನನ್ನು ಪೊಲೀಸರು ಸೋಮವಾರ ಮೆಹ್ರೌಲಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ವಿಲೇವಾರಿ ಮಾಡಿದ್ದ ದೇಹದ ಭಾಗಗಳನ್ನು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.