ಕೊಹಿಮಾ (ನಾಗಾಲ್ಯಾಂಡ್): ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ 1958 (ಎಎಫ್‌ಎಸ್‌ಪಿಎ) ಅನ್ನು ನಾಗಾಲ್ಯಾಂಡ್‌ನಲ್ಲಿ ಇನ್ನೂ 6 ತಿಂಗಳವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಇದರಿಂದಾಗಿ, ಈ ಕಾಯಿದೆಯನ್ನು ಈಶಾನ್ಯ ರಾಜ್ಯದಿಂದ ಹಿಂಪಡೆಯಬಹುದು ಎಂಬೆಲ್ಲಾ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.
-
Armed Forces (Special Powers) Act 1958 (AFSPA) extended in Nagaland for six more months with effect from today. pic.twitter.com/Vkw3fPGeJK
— ANI (@ANI) December 30, 2021 " class="align-text-top noRightClick twitterSection" data="
">Armed Forces (Special Powers) Act 1958 (AFSPA) extended in Nagaland for six more months with effect from today. pic.twitter.com/Vkw3fPGeJK
— ANI (@ANI) December 30, 2021Armed Forces (Special Powers) Act 1958 (AFSPA) extended in Nagaland for six more months with effect from today. pic.twitter.com/Vkw3fPGeJK
— ANI (@ANI) December 30, 2021
ನಾಗಾಲ್ಯಾಂಡ್‌ನಿಂದ ಎಎಫ್‌ಎಸ್‌ಪಿಎ ಹಿಂಪಡೆಯಲು ಬೇಡಿಕೆ ಹೆಚ್ಚಾದ ನಂತರ, ಬಂಡುಕೋರರೆಂದು ತಪ್ಪಾಗಿ ಭಾವಿಸಿ ಗಣಿ ಕಾರ್ಮಿಕರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 14 ಮಂದಿ ನಾಗರಿಕರು ಮೃತಪಟ್ಟಿದ್ದರು.
ಬಳಿಕ, ನಾಗಾಲ್ಯಾಂಡ್ ಶಾಸಕರು ಈಶಾನ್ಯದಿಂದ ಅದರಲ್ಲೂ ನಿರ್ದಿಷ್ಟವಾಗಿ ನಾಗಾಲ್ಯಾಂಡ್‌ನಿಂದ ಎಎಫ್‌ಎಸ್‌ಪಿಎ ರದ್ದುಗೊಳಿಸುವಂತೆ ಆಗ್ರಹಿಸಿದ್ದರು. ಇದರಿಂದಾಗಿ ನಾಗಾ ರಾಜಕೀಯ ಸಮಸ್ಯೆಗೆ ಶಾಂತಿಯುತ ರಾಜಕೀಯ ಇತ್ಯರ್ಥವನ್ನು ಕಂಡುಕೊಳ್ಳಲು ಪ್ರಯತ್ನ ಮಾಡಲಾಗಿತ್ತು. ಅದರಂತೆ ನಾಗಾಲ್ಯಾಂಡ್‌ನಿಂದ ಎಎಫ್‌ಎಸ್‌ಪಿಎ ಹಿಂಪಡೆಯಲು ಸೂಚಿಸಲು ಕೇಂದ್ರ ಸರ್ಕಾರ 7 ಸದಸ್ಯರ ಸಮಿತಿ ರಚಿಸಿತ್ತು. ಅಲ್ಲದೇ ಮೂರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತು.
ಏನಿದು ಎಎಫ್‌ಪಿಎಸ್‌ಎ?
ಆಂತರಿಕ ಗಲಭೆಗಳು, ಅಡ್ಡಿಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ಎಎಫ್‌ಎಸ್‌ಪಿಎ ಜಾರಿಗೆ ತರಲಾಗಿತ್ತು. ಸರ್ಕಾರ 'ಗೊಂದಲಪೀಡಿತ' ಎಂದು ಗುರುತಿಸಿದ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಎಎಫ್‌ಎಸ್‌ಪಿಎ ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನಿನ ರಕ್ಷಣೆ ನೀಡುತ್ತದೆ.
ತೊಂದರೆಗೊಳಗಾದ ಪ್ರದೇಶಗಳ (ವಿಶೇಷ ನ್ಯಾಯಾಲಯಗಳು) ಕಾಯ್ದೆ 1976ರ ಅಡಿ ಸಮಸ್ಯೆಗೆ ಒಳಗಾಗಿರುವ ಎಂದು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರ ನೀಡುವ ಸಂಸತ್ತಿನ ಕಾಯ್ದೆ ಇದಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲಾದರೂ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಸಶಸ್ತ್ರ ಪಡೆಗಳಿಗೆ ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ವಾರೆಂಟ್ ಇಲ್ಲದೆ ಬಂಧಿಸಲು, ಯಾವುದೇ ವಾಹನ ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಈ ಕಾಯ್ದೆಯ ಕೆಲವು ವಿಶೇಷ ಅಧಿಕಾರಗಳಲ್ಲಿ ಸೇರಿವೆ.
ಇದನ್ನೂ ಓದಿ: ರಾಹುಲ್ ಗಾಂಧಿ ಇಟಲಿ ಪ್ರವಾಸ: ಬಿಜೆಪಿಗರು ವದಂತಿ ಹರಡಬಾರದು-ಸುರ್ಜೇವಾಲಾ