ETV Bharat / bharat

ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಆಫ್ರಿಕನ್​ ಪ್ರಜೆಗಳು.. ಅಕ್ರಮ ನಿವಾಸಿಗಳ ಗಡಿಪಾರಿಗೆ ಶೋಧ - ಪೊಲೀಸರ ಮೇಲೆಯೇ ಎರಗಿದ ಆಫ್ರಿಕನ್​ ನಿವಾಸಿಗಳು

ದೆಹಲಿಯಲ್ಲಿ ನೈಜೀರಿಯನ್​ ನಿವಾಸಿಗಳ ಅಕ್ರಮ ನೆಲೆ- ಬಂಧನದ ವೇಳೆ ಆಫ್ರಿಕನ್​ ಪ್ರಜೆಗಳಿಂದ ವಿರೋಧ- ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ಹಿಮ್ಮೆಟ್ಟಿಸಿ ಆಫ್ರಿಕನ್​ ನಾಲ್ವರು ಅಕ್ರಮ ನಿವಾಸಿಗಳ ಬಂಧನ

african-nationals-attack-delhi-cops
ಪೊಲೀಸರ ಮೇಲೆಯೇ ಎರಗಿದ ಆಫ್ರಿಕನ್​ ನಿವಾಸಿಗಳು
author img

By

Published : Jan 8, 2023, 3:53 PM IST

ನವದೆಹಲಿ: ಅಕ್ರಮವಾಗಿ ನೆಲೆಸಿದ್ದ ನೈಜೀರಿಯನ್​ ಪ್ರಜೆಗಳ ಬಂಧನದ ವೇಳೆ 100 ಕ್ಕೂ ಅಧಿಕ ಆಫ್ರಿಕನ್​ ಪ್ರಜೆಗಳು ಒಟ್ಟಾಗಿ ಪೊಲೀಸ್​ ಅಧಿಕಾರಿಗಳ ಮೇಲೆಯೇ ದಾಳಿಗೆ ಮುಂದಾದ ಘಟನೆ ದೆಹಲಿಯಲ್ಲಿ ಇಂದು ನಡೆದಿದೆ. ಬಳಿಕ ನಡೆದ ಹೈಡ್ರಾಮಾದಲ್ಲಿ ನಾಲ್ವರು ಅಕ್ರಮವಾಗಿ ವಾಸವಾಗಿದ್ದ ವಿದೇಶಿಯರನ್ನು ಬಂಧಿಸಲಾಗಿದೆ. ದೆಹಲಿಯ ನೆಬ್​ ಸರೈನ್​ ರಾಜು ಪಾರ್ಕ್​ನಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯನ್​ ನಿವಾಸಿಗಳನ್ನು ಗಡಿಪಾರು ಮಾಡುವ ಸಲುವಾಗಿ ಶನಿವಾರ ಮಧ್ಯಾಹ್ನ ದೆಹಲಿಯ ನಾರ್ಕೊಟಿಕ್​ ಸೆಲ್​ ಪೊಲೀಸರು ತೆರಳಿದ್ದಾರೆ. ಮೂವರನ್ನು ಬಂಧಿಸಿ ಕರೆತರುವ ವೇಳೆ ಅದೇ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆಫ್ರಿಕನ್​ ದೇಶಗಳ ಇತರೆ 100ಕ್ಕೂ ಅಧಿಕ ಜನರ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಂಧನದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಆಫ್ರಿಕನ್​ ನಿವಾಸಿಗಳು, ಪೊಲೀಸರ ಮೇಲೆರಗಲು ಶುರು ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಬಂಧಿತ ಮೂವರು ಅಕ್ರಮ ನಿವಾಸಿಗಳಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದಾರೆ. ನಂತರ ಅವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಎರಡನೇ ಬಾರಿಗೆ ಇನ್ನಷ್ಟು ಪೊಲೀಸ್​ ಬಲದೊಂದಿಗೆ ಅಕ್ರಮ ನಿವಾಸಿಗಳ ವಶಕ್ಕೆ ತೆರಳಿದಾಗ ಮತ್ತೊಮ್ಮೆ ವಿರೋಧಿಸಿದ್ದಾರೆ. ಆದರೂ ಬಿಡದ ಪೊಲೀಸರು ನಾಲ್ಕು ವಿದೇಶಿ ಪ್ರಜೆಗಳನ್ನು ಹುಡುಕಿ ಬಂಧಿಸಿದ್ದಾರೆ.

ಈ ವೇಳೆ ಮತ್ತಷ್ಟು 150 ರಿಂದ 200 ಮಂದಿ ಜಮಾಯಿಸಿ ಆಫ್ರಿಕನ್​ ಪ್ರಜೆಗಳು ಪೊಲೀಸರಿಗೆ ಎದುರಾಗಿದ್ದಾರೆ. ಕೋಪೋದ್ರಿಕ್ತ ವಿದೇಶಿಗರನ್ನು ಸಮಾಧಾನಪಡಿಸಿ ಹಿರಿಯ ಪೊಲೀಸ್​ ಅಧಿಕಾರಿಗಳು, ಅಕ್ರಮ ನಿವಾಸಿಗಳನ್ನು ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 420, 120ಬಿ ಅಡಿಯಲ್ಲಿ 14 ವಿದೇಶಿಯರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಅವರ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಗಡಿಪಾರು ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ: ಬಾಯ್ದೆರೆದ ಜೋಶಿಮಠ: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.