ETV Bharat / bharat

ಅಫ್ಘಾನಿಸ್ತಾನ​ ಕುರಿತು ಭಾರತ-ಆಸ್ಟ್ರೇಲಿಯಾ ಚರ್ಚೆ.. ಭಯೋತ್ಪಾದನೆ ವಿರುದ್ಧ ಸಮರಕ್ಕೆ ನಿರ್ಧಾರ

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಜತ್ ಸಿಂಗ್ ತಮ್ಮ ಆಸ್ಟ್ರೇಲಿಯಾದ ಮರಿಸ್ ಪೇನ್ ಮತ್ತು ಪೀಟರ್ ಡಟನ್ ಅವರೊಂದಿಗೆ ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಬಗ್ಗೆ ವ್ಯಾಪಕವಾಗಿ ಮಾತುಕತೆ ನಡೆಸಿದರು.

Afghan territory must not be used for terrorism in any manner: India, Australia after 2+2 dialogue
ಅಫ್ಘಾನಿಸ್ತಾನ ಭಯೋತ್ಪಾದನೆಗೆ ತನ್ನ ನೆಲೆಯನ್ನಾಗಿ ಬಳಸಬಾರದು: ಆಸ್ಟ್ರೇಲಿಯಾ, ಭಾರತ ಒತ್ತಾಯ
author img

By

Published : Sep 12, 2021, 6:56 AM IST

ನವದೆಹಲಿ: ಅಫ್ಘಾನಿಸ್ತಾನವು ತನ್ನ ನೆಲವನ್ನು ಭಯೋತ್ಪಾದನೆಗೆ ಬಳಸಲು ಅನುಮತಿಸಬಾರದು ಮತ್ತು ಮತ್ತೊಮ್ಮೆ ಭಯೋತ್ಪಾದಕತೆ ಬೆಳೆಸುವ ಸ್ವರ್ಗವಾಗಿ ಅಫ್ಘಾನಿಸ್ತಾನ ಮಾರ್ಪಾಡಾಗಬಾರದು ಎಂದು ಭಾರತ ಮತ್ತು ಆಸ್ಟ್ರೇಲಿಯಾ ಪ್ರತಿಪಾದಿಸಿವೆ.

ಭಾರತ-ಆಸ್ಟ್ರೇಲಿಯಾ ನಡುವಿನ 2+2 ಸಂವಾದದಲ್ಲಿ ತಾಲಿಬಾನ್ ಕುರಿತಂತೆ ಚರ್ಚೆ ನಡೆಸಲಾಯಿತು. ಉಭಯ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಎರಡೂ ದೇಶಗಳ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡರು.

ಅಮೆರಿಕದ ಅವಳಿ ಗೋಪುರಗಳ ಮೇಲೆ ಭಯೋತ್ಪಾದಕರ ದಾಳಿ ನಡೆದು 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳು ಯಾವುದೇ ರಾಜಿ ಇಲ್ಲದೇ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಭಯೋತ್ಪಾದನೆ ವಿರುದ್ಧ ಸಮರ ಸಾರಲು ನಿರ್ಧರಿಸಿದವು.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಜತ್ ಸಿಂಗ್ ತಮ್ಮ ಆಸ್ಟ್ರೇಲಿಯಾದ ಮರಿಸ್ ಪೇನ್ ಮತ್ತು ಪೀಟರ್ ಡಟನ್ ಅವರೊಂದಿಗೆ ತುಂಬಾ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

ನಾವು ಬಹಳ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ರೆಸಲ್ಯೂಷನ್ 2593ರಲ್ಲಿ ಅಫ್ಘಾನಿಸ್ತಾನದ ನೆಲೆಯನ್ನು ಭಯೋತ್ಪಾದನೆಗಾಗಿ ಯಾರೂ ಬಳಸುವುದಕ್ಕೆ ಅನುಮತಿಸಬಾರದು ಎಂದು ಉಲ್ಲೇಖಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರ ಸಚಿವ ಎಸ್​. ಜೈಶಂಕರ್ ತಾಲಿಬಾನ್​ನ ಮಧ್ಯಂತರ ಸರ್ಕಾರ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಕಾಳಜಿ ಹೊಂದಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸಾಯಿ ಧರಂ ತೇಜ್‌ ರಸ್ತೆ ಅಪಘಾತ ಪ್ರಕರಣ : ಘಟನೆಗೆ ಕಾರಣ ತಿಳಿಸಿದ ಉಪ ಪೊಲೀಸ್ ಆಯುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.