ನವದೆಹಲಿ : ಭಾರತೀಯ ಮೂಲದ ಉದ್ಯಮಿ ಬನ್ಸಾರಿ ಲಾಲ್ ಅರೆಂಧಿ ಎಂಬಾತನನ್ನು ಮಂಗಳವಾರ ಬೆಳಗ್ಗೆ ಐವರು ತಾಲಿಬಾನಿ ಉಗ್ರರು ಬಂದೂಕು ತೋರಿಸಿ ಅಪಹರಿಸಲಾಗಿದೆ ಎಂದು ವರದಿಯಾಗಿದೆ.
ಔಷಧ ಕಂಪನಿಯನ್ನು ನಡೆಸುತ್ತಿರುವ ಅರೆಂಧಿ ತನ್ನ ಅಂಗಡಿಗೆ ಸಿಬ್ಬಂದಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಆತನ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ನಿಲ್ಲಿಸಿ ಬಳಿಕ ಐವರು ಗನ್ ತೋರಿಸಿ ಅವರನ್ನು ಅಪಹರಿಸಿದ್ದಾರೆ.
ಅಪಹರಣದ ಬಗ್ಗೆ ವಿವರಗಳನ್ನು ಹಂಚಿಕೊಂಡ ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್, ತಾಲಿಬಾನ್ ಉಗ್ರರು ನಮ್ಮ ಸಿಬ್ಬಂದಿಯನ್ನ ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
-
Apprising @MEAIndia - 50-yr old Bansuri Lal Allende was abducted by 5 people at gun point in Karte Parwan area in Kabul where he has a medicine godown
— Manjinder Singh Sirsa (@mssirsa) September 15, 2021 " class="align-text-top noRightClick twitterSection" data="
I had a phone call with representative of Hindu Sikh families in Kabul who told me minorities are worried abt their life & safety pic.twitter.com/f9MTdIsmqg
">Apprising @MEAIndia - 50-yr old Bansuri Lal Allende was abducted by 5 people at gun point in Karte Parwan area in Kabul where he has a medicine godown
— Manjinder Singh Sirsa (@mssirsa) September 15, 2021
I had a phone call with representative of Hindu Sikh families in Kabul who told me minorities are worried abt their life & safety pic.twitter.com/f9MTdIsmqgApprising @MEAIndia - 50-yr old Bansuri Lal Allende was abducted by 5 people at gun point in Karte Parwan area in Kabul where he has a medicine godown
— Manjinder Singh Sirsa (@mssirsa) September 15, 2021
I had a phone call with representative of Hindu Sikh families in Kabul who told me minorities are worried abt their life & safety pic.twitter.com/f9MTdIsmqg
ಅರೆಂಧಿ ಅವರ ಕುಟುಂಬ ದೆಹಲಿ-ಎನ್‌ಸಿಆರ್‌ನಲ್ಲಿ ವಾಸವಾಗಿದೆ. ಪ್ರಕರಣ ಸಂಬಂಧ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಸ್ಥಳೀಯ ತನಿಖಾ ಸಂಸ್ಥೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿಯ ಪತ್ತೆಗಾಗಿ ಶೋಧ ಆರಂಭಿಸಲಾಗಿದೆ.
ಓದಿ: ಅಮೆರಿಕದಲ್ಲಿ ಪ್ರಬಲಗೊಳ್ಳುತ್ತಿವೆ ಪಾಕ್ ಬೆಂಬಲಿತ ಖಲಿಸ್ತಾನಿ ಗುಂಪು: ಭಾರತದ ಎಚ್ಚರಿಕೆ ಕಡೆಗಣಿಸಿದರೆ ಅಪಾಯ ಎಂದ ವರದಿ