ETV Bharat / bharat

VISA ಕೋರಿ ಆಸ್ಟ್ರೇಲಿಯನ್​ ರಾಯಭಾರ ಕಚೇರಿ ಬಳಿ ಜಮಾಯಿಸಿದ ಆಫ್ಘನ್ ಪ್ರಜೆಗಳು - ಅಫ್ಘಾನ್ ಪ್ರಜೆಗಳಿಗೆ ವೀಸಾ ನೀಡುತ್ತಿರುವ ಆಸ್ಟ್ರೇಲಿಯಾದ ರಾಯಭಾರ ಕಚೇರಿ

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ವಲಸೆ ವೀಸಾಗಳನ್ನು ಕೋರಿ ಆಫ್ಘನ್ ಪ್ರಜೆಗಳು ದೆಹಲಿಯ ಆಸ್ಟ್ರೇಲಿಯಾ ರಾಯಭಾರ ಕಚೇರಿಯ ಬಳಿ ಜಮಾಯಿಸಿದ್ದಾರೆ.

visas
ಅಫ್ಘಾನ್ ಪ್ರಜೆಗಳು
author img

By

Published : Aug 19, 2021, 5:31 PM IST

ನವದೆಹಲಿ: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ವಲಸೆ ವೀಸಾಗಳನ್ನು ಕೋರಿ ಆಫ್ಘನ್ ಪ್ರಜೆಗಳು ದೆಹಲಿಯ ಆಸ್ಟ್ರೇಲಿಯಾ ರಾಯಭಾರ ಕಚೇರಿಯ ಬಳಿ ಜಮಾಯಿಸಿದ್ದಾರೆ.

ಆಸ್ಟ್ರೇಲಿಯಾ ಇತ್ತೀಚೆಗೆ ತನ್ನ ಮಾನವೀಯ ವೀಸಾ ಕಾರ್ಯಕ್ರಮದಲ್ಲಿ ನಿರ್ದಿಷ್ಟವಾಗಿ ಈಗ ಅಫ್ಘಾನಿಸ್ತಾನದಿಂದ ಪಲಾಯನ ಮಾಡುವವರಿಗೆ ಒಂದು ವರ್ಷದಲ್ಲಿ 3,000 ಸ್ಥಳಗಳನ್ನು ನೀಡುವುದಾಗಿ ಹೇಳಿದೆ.

ಈ ವೇಳೆ ಪ್ರತಿಕ್ರಿಯಿಸಿದ ಆಫ್ಘನ್​ ಪ್ರಜೆಯೊಬ್ಬರು "ಆಸ್ಟ್ರೇಲಿಯಾದ ರಾಯಭಾರ ಕಚೇರಿಯು ಅಫ್ಘಾನಿಸ್ತಾನ ಪ್ರಜೆಗಳಿಗೆ 3000 ವೀಸಾಗಳನ್ನು ನೀಡುತ್ತಿದೆ ಎಂದು ನಾವು ಕೇಳಿದ್ದೇವೆ. ನಾವು ಇಲ್ಲಿಗೆ ಬಂದಾಗ, ಅವರು ನಮಗೆ ಒಂದು ಅರ್ಜಿ ನೀಡಿದರು, ಅದರಲ್ಲಿ ನಾವು ಮೊದಲು ವೀಸಾ ನೀಡುವಂತೆ ರಾಯಭಾರ ಕಚೇರಿ ಹೇಳುವ UNHCR (ನಿರಾಶ್ರಿತರಿಗೆ ವಿಶ್ವಸಂಸ್ಥೆಯ ಹೈ ಕಮಿಷನರ್) ಗೆ ಇಮೇಲ್ ಕಳುಹಿಸಬೇಕು ಎಂದು ಬರೆದಿದೆ. ಆದರೆ ಇ-ಮೇಲ್​​ಗೆ ಯುಎನ್‌ಎಚ್‌ಸಿಆರ್ ಕಚೇರಿಯು ಪ್ರತಿಕ್ರಿಯಿಸುತ್ತಿಲ್ಲ "ಎಂದು ಅಳಲು ತೋಡಿಕೊಂಡರು.

ಇನ್ನು ಎರಡು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಅಫ್ಘಾನಿಸ್ತಾನ​ ಪ್ರಜೆಯಾದ ರಬಿ ಜಲಾಲ್ಜಾಯ್ ಮಾತನಾಡುತ್ತಾ "ತಾಲಿಬಾನ್ ನಮ್ಮ ದೇಶವನ್ನು ವಶಪಡಿಸಿಕೊಂಡಿದೆ, ಈಗ ನಾವು ಅಲ್ಲಿಗೆ ಹಿಂತಿರುಗಲು ಸಾಧ್ಯವಿಲ್ಲ. ಜನರು ನಿರಾಶ್ರಿತರಾಗಿ ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಇಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. UNHCR ಕಚೇರಿ ನಮಗೆ ಏನೂ ಸಹಾಯ ಮಾಡುತ್ತಿಲ್ಲ. ನನ್ನ ಕುಟುಂಬ ವೀಸಾಕ್ಕೆ ಅರ್ಜಿ ಸಲ್ಲಿಸಿ ಎರಡು ವರ್ಷಗಳು ಕಳೆದಿವೆ, ಆದರೆ ನಮಗೆ ಸಂದರ್ಶನಕ್ಕೆ ಕೂಡ ಕರೆ ಬಂದಿಲ್ಲ" ಎಂದು ಹೇಳಿದ್ರು.

ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಇನ್ನೊಬ್ಬ ಅಫ್ಘಾನಿಸ್ತಾನ ಪ್ರಜೆ ಸೈಯದ್ ಅಬ್ದುಲ್ಲಾ ಅವರು,'' ಈ ಎಂಟು ವರ್ಷಗಳಲ್ಲಿ ಯುಎನ್‌ಎಚ್‌ಸಿಆರ್‌ನಿಂದ ಯಾವುದೇ ಸಹಾಯವನ್ನು ಪಡೆದಿಲ್ಲ'' ಎಂದು ಹೇಳಿದರು.

ಇನ್ನೊಬ್ಬ ನಿರಾಶ್ರಿತರು ಭಾರತವನ್ನು ಶ್ಲಾಘಿಸುತ್ತಾ, UNHCR ಅವರಿಗೆ ಸಹಾಯ ಮಾಡುವಂತೆ ಒತ್ತಾಯಿಸಿದರು. "ಭಾರತವು ಯಾವಾಗಲೂ ನಮ್ಮನ್ನು ತೆರೆದ ಕೈಗಳಿಂದ ಸ್ವಾಗತಿಸಿದೆ. ನನಗೆ ಸಹಾಯ ಮಾಡಲು ಸಿದ್ಧ ಇರುವ ಸ್ನೇಹಿತರು ಇಲ್ಲಿ ಇದ್ದಾರೆ. ಆದರೆ ಈ ಪರಿಸ್ಥಿತಿಯಲ್ಲಿ ನಮಗೆ ಸಹಾಯ ಮಾಡುವಂತೆ UNHCR ಗೆ ನಾನು ವಿನಂತಿಸುತ್ತೇನೆ" ಎಂದು ಅವರು ಹೇಳಿದರು.

ಭಾರತಕ್ಕೆ ಪ್ರವೇಶಿಸಲು ವೀಸಾ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪಡೆಯುವ ಉದ್ದೇಶದಿಂದ "e-Emergency X-Misc Visa" ಎಂಬ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾವನ್ನು ಭಾರತ ಪರಿಚಯಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.