ETV Bharat / bharat

ನಾಗ್ಪುರದಿಂದ ಆಫ್ಘನ್‌ಗೆ ಗಡಿಪಾರು ಆಗಿದ್ದ ಯುವಕ ತಾಲಿಬಾನ್‌ ಸೇರ್ಪಡೆ! - ಮುಂಬೈ

2 ತಿಂಗಳ ಹಿಂದಷ್ಟೇ ನಾಗ್ಪುರದಿಂದ ಆಫ್ಘನ್‌ಗೆ ಗಡಿಪಾರು ಮಾಡಲಾಗಿದ್ದ 30 ವರ್ಷದ ಯುವಕ ತಾಲಿಬಾನ್‌ ಉಗ್ರ ಸಂಘಟನೆ ಸೇರಿದ್ದಾನೆ ಎನ್ನಲಾಗಿದೆ. ಯುವಕನ ಕೈಯಲ್ಲಿ ಗನ್‌ ಹಿಡಿದಿರುವ ಫೋಟೋವೊಂದು ವೈರಲ್‌ ಆಗಿದೆ.

Afghan man deported from Nagpur suspected to have joined Taliban, seen with a rifle in viral pic
ನಾಗ್ಪುರದಿಂದ ಆಫ್ಘಾನ್‌ಗೆ ಗಡಿಪಾರು ಆಗಿದ್ದ ಯುವಕ ತಾಲಿಬಾನ್‌ ಸೇರ್ಪಡೆ..!
author img

By

Published : Aug 21, 2021, 10:26 AM IST

Updated : Aug 21, 2021, 11:38 AM IST

ಮುಂಬೈ(ಮಹಾರಾಷ್ಟ್ರ): ಸೂಕ್ತ ದಾಖಲೆಗಳು ಇಲ್ಲದೆ ಅಕ್ರಮವಾಗಿ ನೆಲೆಸಿದ್ದ ಆರೋಪದಲ್ಲಿ ನಾಗ್ಪುರದಿಂದ ಆಫ್ಘನ್‌ಗೆ ಗಡಿಪಾರು ಮಾಡಲಾಗಿದ್ದ ಯುವಕ ತಾಲಿಬಾನ್ ಉಗ್ರ ಸಂಘಟನೆ ಸೇರಿರುವ ಘಟನೆ ಬೆಳಕಿಗೆ ಬಂದಿದೆ.

30 ವರ್ಷದ ನೂರ್‌ ಮೊಹಮ್ಮದ್‌ನನ್ನು ಬಂಧಿಸಿದ್ದ ಪೊಲೀಸರು 2 ತಿಂಗಳ ಹಿಂದಷ್ಟೇ ಗಡಿಪಾರು ಮಾಡಿದ್ದರು. ಒಂದು ವೇಳೆ ಅದೇ ವ್ಯಕ್ತಿಯಾಗಿದ್ದರೆ ಗಡಿಪಾರು ಆಗಿರುವ ಆತ ಅಫ್ಘಾನಿಸ್ತಾನದಲ್ಲಿ ಏನು ಮಾಡುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ನಾಗ್ಪುರ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಗ್ಪುರದಿಂದ ಆಫ್ಘನ್‌ಗೆ ಗಡಿಪಾರು ಆಗಿದ್ದ ಯುವಕ ತಾಲಿಬಾನ್‌ ಸೇರ್ಪಡೆ ಬಗ್ಗೆ ಪೊಲೀಸರ ಪ್ರತಿಕ್ರಿಯೆ

2 ತಿಂಗಳ ಹಿಂದೆ ಒಬ್ಬ ವ್ಯಕ್ತಿ ನಾಗ್ಪುರದಲ್ಲಿ ಅವಧಿ ಮೀರಿ ನೆಲೆಸಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸೂಕ್ತ ದಾಖಲೆಗಳು ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಗಡಿಪಾರು ಮಾಡುವುದಕ್ಕೂ ಮುನ್ನ ಆತನ ಪೂರ್ವಾಪರ ಚಟುವಟಿಕೆಗಳನ್ನು ಪರಿಶೀಲಿಸಿದ್ದೇವೆ.

ಆರೋಪಿ ವಿರುದ್ಧ ದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿರುವ ಬಗ್ಗೆ ಯಾವುದೇ ನೋಟಿಸ್‌ಗಳು ಇರಲಿಲ್ಲ. ಬಳಿಕ ನಾವು ಕೂಡಲೇ ಆತನನ್ನು ಗಡಿಪಾರು ಮಾಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಫೋಟೋದಲ್ಲಿ ಇರುವುದು ಅದೇ ವ್ಯಕ್ತಿನಾ? ಇಲ್ಲವೇ ಬೇರೆಯವರೇ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಗಡಿಪಾರು ಆಗಿದ್ದ ನೂರ್‌ ಮೊಹಮ್ಮದ್‌ ಅವರದ್ದೇ ಎನ್ನಲಾದ ಕೈಯಲ್ಲಿ ಗನ್‌ ಹಿಡಿದಿರುವ ಫೋಟೋವೊಂದು ವೈರಲ್‌ ಆಗಿದೆ.

Last Updated : Aug 21, 2021, 11:38 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.