ಬಾರ್ಪೇಟಾ(ಅಸ್ಸೋಂ): ವಿಚ್ಛೇದನ ಪತ್ರದಲ್ಲಿ ಸಹಿ ಹಾಕಲು ನಿರಾಕರಿಸಿದ್ದಕ್ಕೆ ಕೋಪಗೊಂಡ ವಕೀಲರೊಬ್ಬರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಸ್ಸೋಂನ ಬಾರ್ಪೇಟಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಘಟನೆ ನಡೆಯಿತು.
ರೆಹೆನಾ ಬೇಗಂ ಹಾಗೂ ಪತಿ ರೆಹಮಾನ್ ಅಲಿ ನಡುವೆ ಕೌಟುಂಬಿಕ ಸಮಸ್ಯೆ ಇತ್ತು. ಹೀಗಾಗಿ ವಿಚ್ಛೇದನಕ್ಕಾಗಿ ರೆಹಮಾನ್ ಕೋರ್ಟ್ ಮೆಟ್ಟಿಲೇರಿದ್ದರು. ಇವರ ಪರವಾಗಿ ವಕೀಲ ಷರೀಫ್ ಹುಸೇನ್ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡುತ್ತಿದ್ದರು. ವಿಚ್ಛೇದನ ಪತ್ರದಲ್ಲಿ ಸಹಿ ಹಾಕುವಂತೆ ರೆಹೆನಾ ಬೇಗಂ ಬಳಿ ಕೇಳಿಕೊಂಡಿದ್ದಾರೆ. ಆದರೆ, ರೆಹೆನಾ ತನ್ನ ಪತಿ ರೆಹಮಾನ್‌ನನ್ನು ಮದುವೆಯಾಗಿ ಕೇವಲ 7 ತಿಂಗಳಾಗಿದ್ದು, ಸಹಿ ಹಾಕಲು ಸಾಧ್ಯವಿಲ್ಲ ಎಂದರು. ಹೀಗಾಗಿ, ಮಹಿಳೆ ಮೇಲೆ ವಕೀಲ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಮಗಳ ಮೇಲೆ ಕಣ್ಣಾಕಿದ ಪ್ರಿಯಕರನ ಗುಪ್ತಾಂಗ ಕತ್ತರಿಸಿದ ಮಹಿಳೆ
ರೆಹಮಾನ್ಗೆ ವಿಚ್ಛೇದನ ಕೊಡಿಸಲು ವಕೀಲ ಷರೀಫ್ ವಿಫಲರಾಗಿರುವ ಕಾರಣ ಆತ ಕೋಪಗೊಂಡಿದ್ದಾನೆ. ಹೀಗಾಗಿ, ಆಕೆಯ ತಲೆ ಹಿಡಿದುಕೊಂಡು ಗೋಡೆಗೆ ಹೊಡೆದಿದ್ದಾನೆ. ಇದರಿಂದ ಮಹಿಳೆಯ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಗಾಯಾಳು ಮಹಿಳೆ ಬಾರ್ಪೇಟಾ ಸದರ್ ಪೊಲೀಸ್ ಠಾಣೆಯಲ್ಲಿ ವಕೀಲ ಷರೀಫ್ ಮತ್ತು ಪತಿ ರೆಹಮಾನ್ ಅಲಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ.