ETV Bharat / bharat

Aditya-L1 mission : ಜನವರಿಯಲ್ಲಿ ಎಲ್​1 ಪಾಯಿಂಟ್​ಗೆ ಆದಿತ್ಯ ನೌಕೆ

ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್​ 1 ನೌಕೆಯು ಲಾಂಗ್ರೇಜ್​ ಪಾಯಿಂಟ್​ನ್ನು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್ ಮಾಹಿತಿ ನೀಡಿದ್ದಾರೆ.

aditya-l1-to-reach-lagrange-point-1-by-mid-january-isro-chief-s-somnath
Aditya-L1 mission : ಜನವರಿಯಲ್ಲಿ ಎಲ್​1 ಪಾಯಿಂಟ್​ಗೆ ಆದಿತ್ಯ ನೌಕೆ
author img

By ETV Bharat Karnataka Team

Published : Oct 15, 2023, 1:59 PM IST

ಮಧುರೈ (ತಮಿಳುನಾಡು): ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್​ 1 ಯೋಜನೆ ಕುರಿತು ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್ ಅವರು ಮಾಹಿತಿ ಹಂಚಿಕೊಂಡಿದ್ದು, ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್​ 1 ನೌಕೆಯು ಲಾಂಗ್ರೇಜ್​ ಪಾಯಿಂಟ್​ನ್ನು ತಲುಪಲಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಇಸ್ರೋ, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವು ಯಶಸ್ವಿಯಾಗಿದೆ ಎಂದು ಹೇಳಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಸೋಮನಾಥ್​ ಅವರು, ಭೂಮಿಯಿಂದ ಈಗಾಗಲೇ ಎಲ್​1 ಪಾಯಿಂಟ್​ ಕಡೆಗೆ ಚಲಿಸುತ್ತಿರುವ ಆದಿತ್ಯ ಎಲ್​ 1 ನೌಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನೌಕೆಯು ಎಲ್​ 1 ಪಾಯಿಂಟ್​ ತಲುಪಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜನವರಿ ತಿಂಗಳ ಮಧ್ಯ ಭಾಗದಲ್ಲಿ ನೌಕೆಯು ಎಲ್​ 1 ಪಾಯಿಂಟ್​ ತಲುಪುತ್ತದೆ. ಬಳಿಕ ನೌಕೆಯನ್ನು ಲಾಂಗ್ರೇಜ್ ಪಾಯಿಂಟ್​ಗೆ ಸೇರಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಹಾಲೋ ಆರ್ಬಿಟ್​ ಎಂದು ಕರೆಯುತ್ತೇವೆ. ಇದು ದೊಡ್ಡ ಆರ್ಬಿಟ್​ ಆಗಿದೆ ಎಂದು ತಿಳಿಸಿದರು.

ಭಾರತವು ಈಗಾಗಲೇ ಚಂದ್ರಯಾನ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಇದರ ಬೆನ್ನಲ್ಲೇ ಭಾರತದ ಮೊದಲ ಸೂರ್ಯಯಾನವನ್ನು ಇಸ್ರೋ ವಿಜ್ಞಾನಿಗಳು ಕೈಗೊಂಡಿದ್ದಾರೆ. ಕಳೆದ ಸೆಪ್ಟೆಂಬರ್​ 2ರಂದು ಆಂಧ್ರಪ್ರದೇಶದ ಸತೀಶ್ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್​ 1 ನೌಕೆಯನ್ನು ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಈ ನೌಕೆಯು 7 ವಿವಿಧ ಪೇಲೋಡ್​ಗಳನ್ನು ಹೊತ್ತೊಯ್ದಿದ್ದು​, ಸೂರ್ಯನ ವಿಸ್ತೃತ ಅಧ್ಯಯನ ನಡೆಸಲಿದೆ. 7 ಪೇಲೋಡ್​ಗಳಲ್ಲಿ 4 ಸೂರ್ಯನ ಕಿರಣಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ಇತರ 3 ಪೇಲೋಡ್​ಗಳು ಸೂರ್ಯ ಮೇಲ್ಮೈ ಬಗ್ಗೆ ಅಧ್ಯಯನ ನಡೆಸಲಿದೆ.

ಈ ಎಲ್​ 1 ಪಾಯಿಂಟ್​ ಭೂಮಿಯಿಂದ ಸುಮಾರು 1.5 ಮಿಲಿಯನ್​ ಕಿ.ಮೀ. ದೂರದಲ್ಲಿದ್ದು, ಈ ದೂರವನ್ನು ಕ್ರಮಿಸಲು ನೌಕೆಗೆ ಸುಮಾರು 4 ತಿಂಗಳು ಬೇಕಾಗುತ್ತದೆ. ಈ ಭೂಮಿ ಮತ್ತು ಎಲ್​ 1 ಪಾಯಿಂಟ್​​ನ ಅಂತರವು, ಸೂರ್ಯ ಮತ್ತು ಭೂಮಿ ನಡುವಿನ ಶೇ.1ರಷ್ಟಾಗಿದೆ.

ಪರೀಕ್ಷಾರ್ಥ ಗಗನಯಾನಕ್ಕೆ ಸಜ್ಜು​ : ಇದರ ಜೊತೆಗೆ ಇಸ್ರೋ ವಿಜ್ಞಾನಿಗಳು ಮಹತ್ವದ ಗಗನಯಾನ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆಯ ಪರೀಕ್ಷಾ ವಾಹನ ಉಡಾವಣೆ ಅಕ್ಟೋಬರ್​ 21ರಂದು ನಡೆಯಲಿದೆ.

ಈ ನೌಕೆಯನ್ನು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು. ಇದರಲ್ಲಿ 'ಸಿಬ್ಬಂದಿ ತಪ್ಪಿಕೊಳ್ಳುವ ವ್ಯವಸ್ಥೆ' ಮುಖ್ಯವಾಗುತ್ತದೆ. ಒಂದು ವೇಳೆ ರಾಕೆಟ್​​ ಉಡಾವಣೆಗೊಳ್ಳದಿದ್ದಲ್ಲಿ, ಗಗನಯಾನ ಸಿಬ್ಬಂದಿಗಳನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಅವರನ್ನು 2 ಕಿ.ಮೀ. ದೂರದವರೆಗೆ ಸಾಗಿಸುವುದು ಮುಖ್ಯವಾಗುತ್ತದೆ. ಈ ಸಂಬಂಧ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ. ಜನವರಿ ತಿಂಗಳಲ್ಲಿ ನಾಲ್ಕೈದು ನೌಕೆಗಳ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್​ ಹೇಳಿದ್ದಾರೆ.

ಇಸ್ರೋ ಮಾಹಿತಿ ಪ್ರಕಾರ ಗಗನಯಾನ ಯೋಜನೆ ಮೂಲಕ ಮೂರು ಜನ ಸಿಬ್ಬಂದಿಯನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಲೋ ಮೀಟರ್​ ಭೂಮಿಯಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ಮೂವರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಮಹತ್ವದ ಯೋಜನೆ ಇದಾಗಿದೆ.

ಇದನ್ನೂ ಓದಿ : ಆದಿತ್ಯ-ಎಲ್1 ಮಿಷನ್: ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ- ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.