ETV Bharat / bharat

ಎಕ್ಸಾಂ ಹಾಲ್​ ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಚಿತ್ರ.. ಪರೀಕ್ಷೆ ಬರೆದರಾ ಮಾಜಿ ವಿಶ್ವಸುಂದರಿ? - ವಿದ್ಯಾರ್ಥಿನಿ ಹಾಲ್​ ಟಿಕೆಟ್

ಜಾರ್ಖಂಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪರೀಕ್ಷಾ ಹಾಲ್​ ಟಿಕೆಟ್​ನಲ್ಲಿ ಬಾಲಿವುಡ್​ ನಟಿ ಐಶ್ಚರ್ಯಾ ರೈ ತಪ್ಪಾಗಿ ಕಾಣಿಸಿಕೊಂಡಿದ್ದು, ವಿವಿಯ ತಾಂತ್ರಿಕ ದೋಷಕ್ಕೆ ಟೀಕೆ ವ್ಯಕ್ತವಾಗಿದೆ.

actress-aishwarya-rai-photo-on-girl-admit
ಎಕ್ಸಾಂ ಹಾಲ್​ ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಚಿತ್ರ
author img

By

Published : Oct 11, 2022, 7:15 AM IST

ಧನ್‌ಬಾದ್ (ಜಾರ್ಖಂಡ್): ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರ ಅಂದ, ಚೆಂದಕ್ಕೆ ಮನಸೋಲದವರಿಲ್ಲ. ಸೌಂದರ್ಯವನ್ನು ಸೂರೆಗೈದ ಈ ಚೆಲುವೆ ಜಾರ್ಖಂಡ್​ನ ಬಿನೋದ್ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದ ಪರೀಕ್ಷಾ ಹಾಲ್​ ಟಿಕೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗಂತ ಐಶ್ವರ್ಯಾ ರೈ ಪರೀಕ್ಷೆ ಎದುರಿಸುತ್ತಿಲ್ಲ. ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬರ ಹಾಲ್​ ಟಿಕೆಟ್​ನಲ್ಲಿ ಆಕೆಯ ಚಿತ್ರದ ಬದಲಾಗಿ ನಟಿ ಐಶ್ವರ್ಯಾರ ಫೋಟೋ ಲಗತ್ತಿಸಲಾಗಿದೆ. ಇದನ್ನು ಕಂಡು ವಿದ್ಯಾರ್ಥಿನಿಯೇ ಚಕಿತರಾಗಿದ್ದಾರೆ.

ವಿವಿಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಮುಂದಿನ ವಾರ ನಡೆಯುವ ಪರೀಕ್ಷೆಗಾಗಿ ಆನ್​ಲೈನ್​ನಲ್ಲಿ ಹಾಲ್​ ಟಿಕೆಟ್​ ಪ್ರಿಂಟೌಟ್​ ಪಡೆದಿದ್ದಾರೆ. ತಮ್ಮ ಚಿತ್ರದ ಜಾಗದಲ್ಲಿ ಐಶ್ವರ್ಯಾ ರೈ ಫೋಟೋ ಕಂಡು ಆಶ್ಚರ್ಯಚಕಿತರಾದ ವಿದ್ಯಾರ್ಥಿನಿ, ಈ ಬಗ್ಗೆ ವಿವಿ ಕುಲಪತಿಗೆ ದೂರು ನೀಡಿದ್ದಾರೆ.

ಎಕ್ಸಾಂ ಹಾಲ್​ ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಚಿತ್ರ
ಎಕ್ಸಾಂ ಹಾಲ್​ ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಚಿತ್ರ

ವಿದ್ಯಾರ್ಥಿನಿ ನೀಡಿದ ಮಾಹಿತಿಯ ಮೇಲೆ ಹಾಲ್​ ಟಿಕೆಟ್​ ಸಿದ್ಧಪಡಿಸಲಾಗಿರುತ್ತದೆ. ಐಶ್ವರ್ಯಾ ರೈ ಅವರ ಚಿತ್ರ ಬರುವಂತೆ ಮಾಡಿದ್ದು, ವಿವಿಯ ಹೆಸರು ಕೆಡಿಸಲು ಯಾರೋ ನಡೆಸಿದ ಸಂಚಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ವಿವಿ ಕುಲಪತಿ ತಿಳಿಸಿದ್ದಾರೆ.

ಇನ್ನು, ವಿದ್ಯಾರ್ಥಿನಿ ಹಾಲ್​ ಟಿಕೆಟ್​ನಲ್ಲಿ ಚಿತ್ರ ತಪ್ಪಾಗಿ ಮುದ್ರಿತವಾಗಿದ್ದು, ತಾವು ಪರೀಕ್ಷೆಯಿಂದ ಹೊರಬೀಳುವ ಆತಂಕದಲ್ಲಿದ್ದಾರೆ. "ಎಲ್ಲ ಮಾಹಿತಿಯನ್ನು ಅಚ್ಚುಕಟ್ಟಾಗಿ ಫಾರ್ಮ್​ನಲ್ಲಿ ತುಂಬಿ ನನ್ನದೇ ಫೋಟೋವನ್ನು ನೀಡಿದ್ದೆ. ಆದರೆ, ಪ್ರಿಂಟೌಟ್​ ತೆಗೆದಾಗ ನಟಿಯ ಚಿತ್ರವಿದೆ. ಇದು ನನ್ನನ್ನು ಪರೀಕ್ಷೆಯಿಂದ ವಿಮುಖ ಮಾಡುವ ಭಯವಿದೆ" ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ತಿಳಿಸಿದ್ದಾರೆ.

ಓದಿ: ಕರ್ನಾಟಕ ದೇಶದ ಅತ್ಯಂತ ಕಡುಭ್ರಷ್ಟ ಸರ್ಕಾರ.. ಇಲ್ಲಿ ಎಲ್ಲವೂ ಮಾರಾಟಕ್ಕಿವೆ.. ರಾಹುಲ್ ವಾಗ್ದಾಳಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.