ಚೆನ್ನೈ: 2005 ರಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡಿದ್ದ ಬಿಎಂಡಬ್ಲ್ಯು ಎಕ್ಸ್5 ಐಷಾರಾಮಿ ಕಾರಿಗೆ ಪ್ರವೇಶ ತೆರಿಗೆ ಪಾವತಿಸದ ಹಿನ್ನೆಲೆ ದಂಡ ಪಾವತಿಸುವಂತೆ ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆ ನೀಡಿದ ಆದೇಶವನ್ನು ಪ್ರಶ್ನಿಸಿ ನಟ ವಿಜಯ್ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈಗ ನಟನಿಗೆ ಮುಖಭಂಗ ಆಗಿದೆ.
ಈ ಪ್ರಕರಣವು ಇಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಕಾರು ಆಮದು ಮಾಡಿಕೊಂಡ ಸಮಯದಿಂದ ತಿಂಗಳಿಗೆ ಶೇ 2ರಷ್ಟು ಮಾತ್ರ ದಂಡವನ್ನು ಲೆಕ್ಕ ಹಾಕಬೇಕು. ಆದರೆ, ಅವರಿಗೆ ಶೇ 400ರಷ್ಟು ದಂಡ ವಿಧಿಸಲಾಗಿದೆ ಎಂದು ನಟ ವಿಜಯ್ ಪರ ವಕೀಲರು ಹೇಳಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು 2019 ರ ಅವಧಿಯ ನಂತರ BMW X5 ಐಷಾರಾಮಿ ಕಾರಿಗೆ ಪ್ರವೇಶ ತೆರಿಗೆಯನ್ನು ಪಾವತಿಸದಿದ್ದಕ್ಕಾಗಿ ದಂಡವನ್ನು ಪಾವತಿಸಲು ನಟನಿಗೆ ನಿರ್ದೇಶನ ನೀಡಿದರು. ಅದರಂತೆ 2005 ರಿಂದ 2019 ರ ಅವಧಿಯವರೆಗೆ ಪಾವತಿ ಮಾಡಬೇಕಿಲ್ಲ ಎಂದೂ ಸಹ ಆದೇಶಿಸಿದ್ದಾರೆ.
ನಟ ವಿಜಯ್ ಖರೀದಿಸಿದ ರೂ.63 ಲಕ್ಷ ಮೌಲ್ಯದ ಕಾರನ್ನು 2005 ರಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡಿದ್ದರು. ಆ ವೇಳೆ, ಕಾರಿಗೆ ಪ್ರವೇಶ ತೆರಿಗೆ ಪಾವತಿಸಲು ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಟ ವಿಜಯ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಪತ್ನಿಯಾದವಳು 'ತಾಳಿ' ತೆಗೆದಿಡುವುದು ಪತಿಗೆ ನೀಡುವ ಮಾನಸಿಕ ಕ್ರೌರ್ಯದಂತೆ: ಮದ್ರಾಸ್ ಹೈಕೋರ್ಟ್