ETV Bharat / bharat

'ರಿಯಲ್​​ ಹೀರೋ'ಗೆ ಸಂಕಷ್ಟ: ಸೋನು ಸೂದ್​ ಮನೆ, ಕಚೇರಿ ಮೇಲೆ ಇಂದೂ ಮುಂದುವರಿದ ಐಟಿ ದಾಳಿ - ಸೋನು ಸೂದ್ ಸುದ್ದಿ

ಬಹುಭಾಷಾ ನಟ ಸೋನು ಸೂದ್​ಗೆ ಸೇರಿರುವ ಮನೆ, ಕಚೇರಿ ಮತ್ತು ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.

sonu-sood
ಸೋನು ಸೂದ್​
author img

By

Published : Sep 16, 2021, 8:40 AM IST

ಮುಂಬೈ: ಬಾಲಿವುಡ್​ ನಟ ಸೋನು ಸೂದ್ ಅವರ ಮನೆ, ಕಚೇರಿ ಮತ್ತು ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದೂ ಕೂಡಾ ದಾಳಿ ಮುಂದುವರಿಸಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಬರೋಬ್ಬರಿ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಸೋನು ಸೂದ್​ ಅವರ ಮನೆಯಲ್ಲಿದ್ದ ಕಡತಗಳನ್ನು ಪರಿಶೀಲನೆ ನಡೆಸಿದ್ದು, ಆದಾಯ ತೆರಿಗೆ ಅಧಿಕಾರಿಗಳಿಗೆ ಸಿಕ್ಕ ಮಾಹಿತಿ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾವಿರಾರು ನಿರ್ಗತಿಕರಿಗೆ ಸಹಾಯ ಮಾಡಿ ನಿಜ ಜೀವನದಲ್ಲೂ ಹೀರೊ ಆಗಿ ನಟ ಸೋನು ಸೂದ್​ ಹೊರಹೊಮ್ಮಿದ್ದರು. ಇನ್ನು ಕಳೆದ ಕೆಲ ದಿನಗಳ ಹಿಂದೆ ನಟ ಸೋನು ಸೂದ್​ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರನ್ನ ಭೇಟಿ ಮಾಡಿದ್ದರು.

ಈ ವೇಳೆ ಅವರನ್ನ ಅಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರಾಂಡ್​ ಅಂಬಾಸಿಡರ್​ ಆಗಿ ಆಯ್ಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಐಟಿ ಅಧಿಕಾರಿಗಳು ಸರ್ವೇ ನಡೆಸಿದ್ದು, ಇದರಿಂದ ಅವರ ಸಾವಿರಾರು ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.