ಮೊಗಾ(ಪಂಜಾಬ್) : 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಹುಭಾಷಾ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಮೊಗಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದು, ಈಗಾಗಲೇ ಕಾಂಗ್ರೆಸ್ನಿಂದ ಟಿಕೆಟ್ ಕೂಡ ಪಡೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋದರ ಸೋನು ಸೂದ್ ಮಾತನಾಡಿದ್ದು, ಸಮಾಜಸೇವೆ ಎಂಬುದು ನಮ್ಮ ರಕ್ತದಲ್ಲಿದೆ ಎಂದು ತಿಳಿಸಿದ್ದಾರೆ.
ನಮ್ಮ ತಾಯಿ ಶಿಕ್ಷಕಿಯಾಗಿದ್ದು, ಜೀವನದುದ್ದಕ್ಕೂ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ತಂದೆ ಕೂಡ ಸಮಾಜ ಸೇವಕರಾಗಿದ್ದರು. ಮೊಗಾದಲ್ಲಿ ನಿರ್ಮಾಣಗೊಂಡಿರುವ ಅನೇಕ ಶಾಲೆಗಳು, ಕಾಲೇಜ್ಗಳು ಮತ್ತು ಧರ್ಮಶಾಲೆಗಳು ನಮ್ಮ ಜಮೀನಿನಲ್ಲೇ ಇವೆ ಎಂದು ತಿಳಿಸಿದ್ದಾರೆ.
-
My mother, a professor, taught children all her life. My father was a social worker. Schools, colleges & dharamshalas here are constructed on our plots of land. So, it's in our blood: Sonu Sood (1/2)
— ANI (@ANI) January 24, 2022 " class="align-text-top noRightClick twitterSection" data="
His sister Malvika Sood is Congress' candidate from Moga#PunjabElections2022 pic.twitter.com/VyYhmuJY2h
">My mother, a professor, taught children all her life. My father was a social worker. Schools, colleges & dharamshalas here are constructed on our plots of land. So, it's in our blood: Sonu Sood (1/2)
— ANI (@ANI) January 24, 2022
His sister Malvika Sood is Congress' candidate from Moga#PunjabElections2022 pic.twitter.com/VyYhmuJY2hMy mother, a professor, taught children all her life. My father was a social worker. Schools, colleges & dharamshalas here are constructed on our plots of land. So, it's in our blood: Sonu Sood (1/2)
— ANI (@ANI) January 24, 2022
His sister Malvika Sood is Congress' candidate from Moga#PunjabElections2022 pic.twitter.com/VyYhmuJY2h
ನನ್ನ ಸಹೋದರಿ ಕೂಡ ಅನೇಕ ಸಮಾಜಸೇವೆಗಳಲ್ಲಿ ಭಾಗಿಯಾಗಿದ್ದು, ಕೋವಿಡ್ ಲಸಿಕಾಕರಣದ ವೇಳೆ ಮಹತ್ವದ ಕಾರ್ಯ ನಿರ್ವಹಿಸಿದ್ದಾಳೆ. ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಿರುವ ಮಾಳವಿಕಾ, ಜನಸಾಮಾನ್ಯರಿಗೆ ಅನೇಕ ರೀತಿಗಳಲ್ಲಿ ನೆರವಾಗಿದ್ದಾಳೆಂದು ಸೋನು ಸೂದ್ ತಿಳಿಸಿದ್ದಾರೆ.
Video : ₹500 ರೂಪಾಯಿ ಆಸೆಗೆ ಆಸ್ಪತ್ರೆಯಲ್ಲೇ ಹೊಡೆದಾಡಿಕೊಂಡ ಆಶಾ ಕಾರ್ಯಕರ್ತೆಯರು!
ಈ ವೇಳೆ ಮಾತನಾಡಿರುವ ಮಾಳವಿಕಾ, ನಾನು ನನ್ನ ಸಹೋದರನೊಂದಿಗೆ ಮಾತನಾಡಿದ್ದು, ಮೊಗಾದಲ್ಲಿ ಸಿವಿಲ್ ಆಸ್ಪತ್ರೆ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದೇವೆ. ಕೋವಿಡ್ ಶಿಬಿರಗಳ ಆಯೋಜನೆ ಮಾಡಿ ಕೋವಿಡ್ ವ್ಯಾಕ್ಸಿನೇಷನ್ ನೀಡಲು ಎಲ್ಲ ರೀತಿಯಿಂದಲೂ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಎಎಪಿ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ