ಚೆನ್ನೈ, ತಮಿಳುನಾಡು: ಚೆಕ್ ಬೌನ್ಸ್ ಪ್ರಕರಣದಲ್ಲಿ ತಮಿಳುನಟ ಶರತ್ಕುಮಾರ್ ಮತ್ತು ಆತನ ಪತ್ನಿ, ನಟಿ ರಾಧಿಕಾ ಶರತ್ ಕುಮಾರ್ಗೆ ಚೆನ್ನೈನ ವಿಶೇಷ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಶರತ್ ಕುಮಾರ್ ದಂಪತಿಯ ವಿರುದ್ಧದ ಎರಡು ಚೆಕ್ ಬೌನ್ಸ್ ಪ್ರಕರಣಗಳನ್ನು ರದ್ದು ಮಾಡಲು 2019ರಲ್ಲಿ ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಇದರಿಂದ ಸಿನಿ ದಂಪತಿಗೆ ಮತ್ತಷ್ಟು ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ: ಮಂಗಳನಲ್ಲಿ ಮೂಡಿತೇ ಮಳೆಬಿಲ್ಲು.! ಈ ಬಗ್ಗೆ ನಾಸಾ ಹೇಳಿದ್ದೇನು?
ಚೆನ್ನೈ ಸಮೀಪದ ನಂದನಂನಲ್ಲಿರುವ ಸಿನಿಮಾಗಳ ನಿರ್ಮಾಣಕ್ಕೆ ಸಾಲ ನೀಡುವ ಕಂಪನಿಯಾದ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಶರತ್ಕುಮಾರ್ ದಂಪತಿ ಹಾಗೂ ಇತರರ ಪಾಲುದಾರಿಕೆಯಲ್ಲಿರುವ ಮ್ಯಾಜಿಕ್ ಫ್ರೇಮ್ಸ್ ಎಂಬ ಸಂಸ್ಥೆಗೆ ಭಾರಿ ಮೊತ್ತದ ಸಾಲ ನೀಡಿತ್ತು.
ಇದಕ್ಕೆ ಪ್ರತಿಯಾಗಿ ಶರತ್ ಕುಮಾರ್ ಅವರು ಸಂಸ್ಥೆಗೆ ಎರಡು ಚೆಕ್ಗಳನ್ನು ನೀಡಿದ್ದು, ಮಾರ್ಚ್ 2017ರಂದು ಈ ಚೆಕ್ಗಳು ಬೌನ್ಸ್ ಆಗಿದ್ದವು. ಈ ಪ್ರಕರಣ ಈಗ ಇಬ್ಬರೂ ಸಿನಿ ದಂಪತಿಗೆ ಸಂಕಷ್ಟವಾಗಿ ಪರಿಣಮಿಸಿದೆ.