ETV Bharat / bharat

₹200 ಕೋಟಿ ವಂಚನೆ ಕೇಸ್: ಇಡಿ ಕಚೇರಿಗೆ ನಟಿ ನೋರಾ ಆಗಮನ, ನಾಳೆ ಜಾಕ್ವೆಲಿನ್ ಹಾಜರು? - ಜಾಕ್ವೆಲಿನ್ ಫರ್ನಾಂಡಿಸ್

200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೊಡನೆ ಸಂಪರ್ಕದಲ್ಲಿದ್ದ ಗಂಭೀರ ಆರೋಪದಲ್ಲಿ ನೋರಾ ಫತೇಹಿ ಇಂದು ವಿಚಾರಣೆಯ ನಿಮಿತ್ತ ಜಾರಿ ನಿರ್ದೇಶನಾಲಯದ(ED) ಕಚೇರಿಗೆ ಆಗಮಿಸಿದರು.

Actor Nora Fatehi Summoned In 200-Crore Cheating Case
200 ಕೋಟಿ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ನೋರಾ ಫತೇಹಿ, ನಾಳೆ ಜಾಕ್ವೆಲಿನ್ ಫರ್ನಾಂಡಿಸ್ ಹಾಜರು?
author img

By

Published : Oct 14, 2021, 12:23 PM IST

Updated : Oct 14, 2021, 12:46 PM IST

ನವದೆಹಲಿ: 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿಯಾಗಿರುವ ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಪೌಲ್ ಅವರ ತನಿಖೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿಯಾದ ನೋರಾ ಫತೇಹಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೋರಾ ಫತೇಹಿ ಇಂದು ಜಾರಿ ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು.

ಫೋರ್ಟಿಸ್ ಹೆಲ್ತ್‌ಕೇರ್ ಪ್ರಮೋಟರ್​​​ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ವಂಚಿಸಿ, ಬಹುಕೋಟಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೆಹಲಿ ಪೊಲೀಸರಿಂದ ಬಂಧಿಲ್ಪಟ್ಟಿದ್ದ ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಪೌಲ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಲ್ಲಿ ನೋರಾ ಫತೇಹಿಗೆ ಸಮನ್ಸ್ ನೀಡಲಾಗಿತ್ತು.

  • Delhi: Actor & dancer Nora Fatehi reaches the Enforcement Directorate (ED) office to join the investigation in connection with the conman Sukesh Chandrashekhar case pic.twitter.com/c3t5YEMEaA

    — ANI (@ANI) October 14, 2021 " class="align-text-top noRightClick twitterSection" data=" ">

ಇದರ ಜೊತೆಗೆ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಲಿದ್ದಾರೆ. ನಾಳೆ ಅವರು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸುಕೇಶ್ ಚಂದ್ರಶೇಖರ್ ಈ ವಂಚನೆಯ ಸೂತ್ರಧಾರ. ಸುಮಾರು 17ನೇ ವಯಸ್ಸಿನಿಂದಲೂ ಆತ ಅಪರಾಧಗಳನ್ನು ಮಾಡುತ್ತಿದ್ದಾನೆ. ಆತನ ವಿರುದ್ಧ ಅನೇಕ ಎಫ್​ಐಆರ್​ಗಳು ದಾಖಲಾಗಿವೆ. ಪ್ರಸ್ತುತ ಆತನನ್ನು ರೋಹಿಣಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಆಗಸ್ಟ್​ನಲ್ಲಿ ಚಂದ್ರಶೇಖರ್ ಅವರ ಒಡೆತನದ ಕೆಲವು ನಿವೇಶನಗಳ ಮೇಲೆ ಇಡಿ ದಾಳಿ ಮಾಡಿ ಚೆನ್ನೈನ ಬಂಗಲೆ ಹಾಗೂ 82.5 ಲಕ್ಷ ರೂ. ನಗದು ಮತ್ತು 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತ್ತು. ಸದ್ಯ ಸುಮಾರು 200 ಕೋಟಿ ರೂ.ಗಳಷ್ಟು ವಂಚನೆ ಮತ್ತು ಸುಲಿಗೆ ಪ್ರಕರಣದ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 'ಕೋಟಿಗೊಬ್ಬ 3' ರಿಲೀಸ್ ಆಗೋದು ಅನುಮಾನ: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ

Last Updated : Oct 14, 2021, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.