ಚೆನ್ನೈ: ಕೊರೊನಾ ಲಸಿಕೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮನ್ಸೂರ್ ಅಲಿ ಖಾನ್ಗೆ ಮದ್ರಾಸ್ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಲಸಿಕೆ ಬಗ್ಗೆ ವದಂತಿಗಳನ್ನು ಹರಡಬಾರದು ಮತ್ತು ಈ ವಿಷಯದ ಬಗ್ಗೆ ಉದ್ವಿಗ್ನತೆ ಸೃಷ್ಟಿಸಬಾರದು ಎಂದು ನ್ಯಾಯಮೂರ್ತಿ ಧಂತಪಾಣಿ ನಟನಿಗೆ ಸಲಹೆ ನೀಡಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಂಬುವಂತೆ ನಟನಿಗೆ ತಾಕೀತು ಮಾಡಿದ್ದಾರೆ.